ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5 ಮೀಟರಿಗೆ ಕುಸಿತ ; ಮಳೆ ಬಾರದಿದ್ದರೆ ಮಂಗಳೂರಿಗರಿಗೆ ಡಿಸೆಂಬರ್ ನಲ್ಲೇ ನೀರಿಗಾಗಿ ಆಹಾಕಾರ!
ಮಂಗಳೂರು ಮಹಾನಗರ ಪಾಲಿಕೆಯ ಜನತೆಗೆ ಅಧಾರವಾಗಿದ್ದ ತುಂಬೇ ಡ್ಯಾಮ್ ನಲ್ಲಿ ನೀರಿನ ಮಟ್ಟ ಬಹುತೇಕ ಇಳಿಕೆಯಾಗಿದೆ. ಜುಲಾಯಿ ತಿಂಗಳಲ್ಲಿ 15 ದಿನ ಬಂದ ಮಳೆಯಿಂದಾಗಿ ಡ್ಯಾಮ್ ನಲ್ಲಿ ನೀರಿನ ಮಟ್ಟ ಹೆಚ್ಚು ಅಗಿತ್ತು. ಆದರೆ (ಆಗಸ್ಟ್ )ಈ ತಿಂಗಳಲ್ಲಿ ಮಳೆ ಬಾರದೆ ಇದ್ದಿದ್ದರಿಂದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ, ಇನ್ನೂ ಪಶ್ಚಿಮ ಘಟ್ಟದಲ್ಲೂ ಮಳೆ ಬೀಳದೆ ಇದ್ದಿದ್ದರಿಂದ ನೀರಿನ ಹರಿವು ಕಡಿಮೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಮಳೆ ಬಾರದೆ ಇದ್ದು ಇದೇ ರೀತಿ ಮುಂದುವರೆದರೆ, ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ.
ಇನ್ನು ತುಂಬೆ ಡ್ಯಾಮ್ ನಲ್ಲಿ 30 ಗೇಟ್ ಗಳಿವೆ. ಮತ್ತು ಮಂಗಳೂರು ಮಹಾನಗರ ಪಾಲಿಗೆಯ ಜನರಿಗೆ ನೀರಿಗಾಗಿ ಒಂದು ಗೇಟ್ ನ ನೀರನ್ನು ಹರಿಸಲಾಗಿದೆ.ನೇತ್ರಾವತಿ ನದಿಯ ಒಳ ಹರಿವು ಗಣನೀಯವಾಗಿ ಕುಸಿಯ ತೊಡಗಿದೆ. ಇನ್ನು ಈ ನೇತ್ರಾವತಿಯ ತುಂಬೆ ಡ್ಯಾಮ್ ನಲ್ಲಿ ಬೇಸಿಗೆ ಕಾಲದಲ್ಲಿ ನೀರಿಗಾಗಿ ಯಾವುದೇ ಸಮಸ್ಯೆ ಆಗಬಾರದು ಎಂದು ನೀರನ್ನು ಶೇಖರಿಸಿರುವ ತಂತ್ರಜ್ಞಾನ ಮಾಡಲಾಗಿತ್ತು. ಆದರೆ ಇದೀಗ ಮಳೆಗಾಲದ ಮೂರನೇ ತಿಂಗಳಲ್ಲಿ ಈ ರೀತಿ ಮಳೆ ಬಾರದೆ ಸಂಗ್ರಹಿಸಿ ಇಡುವುದು ಕಷ್ಟವಾಗಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಡಿಸೆಂಬರ್ ಅಥವಾ ಜನವರಿಯಲ್ಲಿ ಬರಗಾಲ ಎದುರಾಗುವ ಸನ್ನಿವೇಶ ಬರಬಹುದು.
ಕಳೆದ ಬೇಸಿಗೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿಗಾಗಿ ಅಹಂಕಾರ ಉಂಟಾಗಿತ್ತು ಆದರೂ ವಾರದಲ್ಲಿ ಎರಡು ದಿನ ನೀರನ್ನು ಬಿಟ್ಟು ಹೇಗಾದರೂ ಸಮಸ್ಯೆಯನ್ನು ಬಗೆಹರಿಸಿ ನೀರಿನ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ನವಂಬರ್ ಡಿಸೆಂಬರ್ ನಲ್ಲಿ ಸಂಗ್ರಹಿಸಿ ಇಡುವ ನೀರು ಆಗೋಸ್ಟ್ ನಲ್ಲಿ ಇದೆ. ಕೇವಲ ಐದು ಮೀಟರ್ ನಷ್ಟು ನೀರು ತುಂಬೆ ಡ್ಯಾಮ್ ನಲ್ಲಿದ್ದು ಮಳೆ ಬಾರದಿದ್ದರೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಉಷ್ಣಾಂಶ ಏರಿಕೆಯಾಗಿದ್ದು ಕ್ರಮೇಣ 3 ರಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ವಾಡಿಕೆಗಿಂತ ಹೆಚ್ಚು ಆಗಿದೆ ಕಳೆದ ಜನವರಿ ಫೆಬ್ರವರಿ ಇದ್ದ ಬಿಸಿಲು ಈ ಬಾರಿ ಆಗಸ್ಟ್ ನಲ್ಲಿ ಪ್ರಾರಂಭವಾಗಿದೆ. ಮಧ್ಯಾಹ್ನದ ಹೊತ್ತಿಗೆ ಹೊರನಡೆದರೆ ಸಾಕಪ್ಪ ಬಿಸಿಲು ಎಂದು ಹೇಳುವ ಪರಿಸ್ಥಿತಿ ಬಂದಿದೆ.
ಇನ್ನು ರೈತರ ಪರಿಸ್ಥಿತಿ ಕೇಳುವವರ್ಯಾರು! ಮುಂಗಾರು ಆಗಮಿಸಿದ್ದೆ ತಡವಾಗಿ ಆದರೂ ರೈತರು ಕೃಷಿಯಲ್ಲಿ ತೊಡಗಿಸಿ ಜೂನ್ ಅಂತ್ಯ ಅಥವಾ ಜುಲೈ ತಿಂಗಳಲ್ಲಿ ಬಿತ್ತನೆಯನ್ನು ಮಾಡಿದ್ದಾರೆ. ಆದರೆ ಈಗ ಮಳೆ ಬಾರದೆ ತಾಪಮಾನ ಹೆಚ್ಚಾಗಿ ವ್ಯವಸಾಯಕ್ಕೆ ತೊಂದರೆ ಉಂಟಾಗಿದೆ.
ಒಂದು ವೇಳೆ ಮಳೆ ಬಂದರೂ ದೊಡ್ಡ ಪ್ರಮಾಣದಲ್ಲಿ ಬಂದು ನೀರು ಸಂಗ್ರಹವಾಗಬೇಕು. ರಾಜ್ಯ ಸರ್ಕಾರ ಕೂಡ ಕೆಲವು ಜಿಲ್ಲೆಗಳನ್ನು ಭರಪೀಡಿತ ಜಿಲ್ಲೆಗಳು ಎಂದು ಘೋಷಣೆ ಮಾಡುವ ಸಾಧ್ಯತೆ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಇದೆ