ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತಾಲಿಬಾನ್ ಬದಲಾಗಬಹುದು, ಆದರೆ ಪಾಕಿಸ್ತಾನ ಬದಲಾಗಲ್ಲ – ಮೋಹನ್ ಭಾಗವತ್

Twitter
Facebook
LinkedIn
WhatsApp
ತಾಲಿಬಾನ್ ಬದಲಾಗಬಹುದು, ಆದರೆ ಪಾಕಿಸ್ತಾನ ಬದಲಾಗಲ್ಲ – ಮೋಹನ್ ಭಾಗವತ್

ನವದೆಹಲಿ: ಚೀನಾ, ಪಾಕಿಸ್ತಾನ ಎರಡೂ ತಾಲಿಬಾನ್ ಜೊತೆ ಇವೆ. ತಾಲಿಬಾನ್ ಬದಲಾಗಬಹುದು, ಆದರೆ ಪಾಕಿಸ್ತಾನ ಬದಲಾಗಲ್ಲ. ತಾಲಿಬಾನ್ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಕಾಶ್ಮೀರದಲ್ಲಿ ಉಗ್ರಗಾಮಿಗಳು ಟಾರ್ಗೆಟ್ ಹತ್ಯೆ ಮಾಡುತ್ತಿದ್ದಾರೆ. ಜನರನ್ನು ಹೆದರಿಸಲು ಟಾರ್ಗೆಟ್ ಹತ್ಯೆ ಮಾಡಲಾಗುತ್ತಿದೆ. 370ನೇ ವಿಧಿ ರದ್ದಾದ ಬಳಿಕ ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿದೆ. ಅ. 20ರಂದು ರಷ್ಯಾ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಮಾತುಕತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲದಕ್ಕೂ ನಾವು ಸಿದ್ಧವಾಗಿರಬೇಕಾಗಿದೆ ಎಂದು ಮಹಾರಾಷ್ಟ್ರದ ನಾಗ್ಪುರ ಆರ್​ಎಸ್​ಎಸ್​ ಕಚೇರಿಯಲ್ಲಿ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ವಿಜಯದಶಮಿ ಪ್ರಯುಕ್ತ ನಾಗ್ಪುರದಲ್ಲಿ ಅವರು ಮಾತನಾಡಿದ್ದಾರೆ. ಕಾಶ್ಮೀರದ ಜನರ ಮನಸ್ಸನ್ನು ಭಾರತದ ಜೊತೆಗೆ ಜೋಡಿಸಬೇಕು. ನಾವು ದುರ್ಬಲವಾದಾಗ ಬೇರೆಯವರಿಗೆ ಹೆದರಬೇಕಾಗುತ್ತದೆ. ನಾವು ಸದೃಢವಾಗಬೇಕು. ಕಾಶ್ಮೀರದಲ್ಲಿ ಮುಗ್ದರನ್ನು ಉಗ್ರರು ‌ಹತ್ಯೆ ಮಾಡುತ್ತಿದ್ದಾರೆ. ಮಾತುಕತೆಯ ಜೊತೆಗೆ ಸೇನೆ ಸಂಪೂರ್ಣ ಸನ್ನದ್ದ ಸ್ಥಿತಿಯಲ್ಲಿರಬೇಕು. ಹಿಂದೂಗಳು ‌ಸಂಘಟಿತರಾಗಬೇಕು. ಜಾಗೃತ, ಬಲಶಾಲಿ, ಸಂಘಟಿತ ಹಿಂದೂ ಸಮಾಜದಿಂದಲೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.

ದೇಶದ ಗಡಿಯಲ್ಲಿ ಉಗ್ರರ ನುಸುಳುವಿಕೆಯನ್ನು ಸಂಪೂರ್ಣ ತಡೆಗಟ್ಟಬೇಕು. ಭಾರತದ ಭಾಗ್ಯ ಬದಲಾಗುವುದು ವಿಶ್ವಕ್ಕೆ ಅಗತ್ಯ. ಜನಸಂಖ್ಯೆ ನೀತಿ ಬಗ್ಗೆ ಮತ್ತೆ ಚರ್ಚೆ ಆಗಬೇಕು. ಜನಸಂಖ್ಯೆಯ ಅಸಮತೋಲನ ದೊಡ್ಡ ಸಮಸ್ಯೆಯಾಗಿದೆ. ವಸುಧೈವ ಕುಟುಂಬಕ್ಕಂ ನಮ್ಮ ಮಂತ್ರ. ಮೂರನೇ ಕೊರೊನಾ ಅಲೆ ಬರುವ ಸಾಧ್ಯತೆ ಕಡಿಮೆಯಿದೆ. ಆದರೂ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಮ್ಮ ಸಾಮರ್ಥ್ಯವನ್ನು ದುರ್ಬಲರ ರಕ್ಷಣೆಗೆ ಬಳಸಬೇಕು. ಹಿಂದೂ ಸಮಾಜವನ್ನು ಸದೃಢವಾಗಿಸಬೇಕು. ನಮ್ಮ ಜೊತೆಗೆ ಮುಸ್ಲಿಮರು ಕೂಡ ಇರಬೇಕು ಎಂದಿದ್ದಾರೆ.

ಹಿಂದೂ ಸಮಾಜದಲ್ಲಿ ದೇವಸ್ಥಾನಗಳ‌ ಸ್ಥಿತಿ ಚೆನ್ನಾಗಿಲ್ಲ. ದಕ್ಷಿಣ ಭಾರತದಲ್ಲಿ ದೇವಾಲಯಗಳು ಸರ್ಕಾರದ ಅಧೀನದಲ್ಲಿವೆ, ಕೆಲವೇ ದೇವಾಲಯಗಳು ಭಕ್ತರ ಅಧೀನದಲ್ಲಿವೆ. ಕೆಲವೆಡೆ ದೇವಾಲಯಗಳ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ದೇವರೇ ಮಂದಿರಗಳ ಮಾಲೀಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಕಾರ ಕೆಲವು ವರ್ಷ ಮಾತ್ರ ದೇವಾಲಯ ತನ್ನ ಸ್ವಾಧೀನಕ್ಕೆ ಪಡೆಯಬಹುದು. ಬಳಿಕ ವಾಪಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು