ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತಲೆನೋವಿಗೆ ಇಲ್ಲಿ ಇದೆ ಸರಳ ನೈಸರ್ಗಿಕ ಔಷಧಿಗಳು!!

Twitter
Facebook
LinkedIn
WhatsApp
ತಲೆನೋವಿಗೆ ಇಲ್ಲಿ ಇದೆ ಸರಳ ನೈಸರ್ಗಿಕ ಔಷಧಿಗಳು!!

ಕಾಯಿಲೆ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎಂದು ಈ ಹಿಂದೆ ನಮ್ಮ ಹಿರಿಯರು ಮಾತನಾಡಿ ಕೊಳ್ಳುತ್ತಿದ್ದರು. ನಾವು ಮನುಷ್ಯರಾಗಿ ನಮಗೆ ಬರುವ ಆರೋಗ್ಯ ಸಮಸ್ಯೆಗಳ ಕಡೆಗೆ ಗಮನಕೊಡಬೇಕು. ಇಂದು ನಮ್ಮೆಲ್ಲರನ್ನು ಸಾಧಾರಣವಾಗಿ ಕಾಡುವ ಸಮಸ್ಯೆಯೆಂದರೆ ಅದು ತಲೆ ನೋವು. ಈಗ ಬಂದು ಆಗ ಹೋಗುವ ತಲೆ ನೋವಿಗೆ ನಾವುಗಳು ಅಷ್ಟೇನು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ಕಪ್ ಕಾಫಿ ಕುಡಿದರೆ ಎಲ್ಲವೂ ಸರಿ ಹೋಗುತ್ತದೆ ಎನ್ನುವ ಮನೋಭಾವ ನಮ್ಮದು.

ತಲೆನೋವಿನ ಸಮಸ್ಯೆಗಳನ್ನು ಮತ್ತು ಅಡ್ಡಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಮಾತ್ರೆಗಿಂತ ಅಧಿಕ ಶಕ್ತಿಶಾಲಿಯಾದ ಮನೆಮದ್ದುಗಳು ನಮ್ಮ ಬಳಿಯೇ ಇವೆ.ತಲೆನೋವು ಬಂದರೆ ಅದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದನ್ನು ಅಲ್ಲೆಗೆಳೆಯುವಂತಿಲ್ಲ. ಹೀಗಾಗಿಯೇ ತಲೆನೋವು ಬಂದವರಿಗೆ ಗೊತ್ತು ಅದರ ನೋವು ಎಂಬ ಮಾತೊಂದಿದೆ.ತಲೆಯ ಭಾದೆ ನಮಗೆ ಅಷ್ಟರ ಮಟ್ಟಿಗೆ ತೊಂದರೆ ನೀಡಿರುತ್ತದೆ. ಆದರೆ ತಲೆ ನೋವು ಬಂದ ತಕ್ಷಣ ನಾವು ಅದಕ್ಕೆ ಸೂಕ್ತವಾದ ಮಾತ್ರೆ ಎಲ್ಲಿದೆ ಎಂದು ಮೊದಲು ಹುಡುಕುತ್ತೇವೆ. ಪ್ರತಿ ಬಾರಿ ಕೂಡ ಇದು ಸಾಧ್ಯವಿಲ್ಲ.

ತಲೆ ನೋವಿನ ನಿವಾರಣೆಗೆ ಶುಂಠಿಯನ್ನು ಅರ್ಧ ಅಥವಾ ಒಂದು ಇಂಚು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ, ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ, ಸೋಸಿಕೊಂಡು ಉಗುರು ಬೆಚ್ಚಗೆ ಇರುವಾಗ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಲೆನೋವಿನ ಸಮಸ್ಯೆ ಮಾಯವಾಗುತ್ತದೆ.

ನಿಮ್ಮ ಬಳಿ ಒಣಗಿದ ಶುಂಠಿಯ ಪುಡಿ ಇದ್ದರೆ ಅದು ಕೂಡ ನಿಮ್ಮ ಆರೋಗ್ಯಕ್ಕೆ ಒಳ್ಳೆಯ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಕುದಿಯುವ ನೀರಿನಲ್ಲಿ ಒಣ ಶುಂಠಿ ಪುಡಿಯನ್ನು ಬೇಕಾದರೂ ಹಾಕಬಹುದು.

ತಲೆನೋವಿಗೆ ಇಲ್ಲಿ ಇದೆ ಸರಳ ನೈಸರ್ಗಿಕ ಔಷಧಿಗಳು!!

ಆಯುರ್ವೇದ ಪದ್ಧತಿ ಹೇಳುವ ಪ್ರಕಾರ ಅತಿಯಾದ ದೈಹಿಕ ಉಷ್ಣಾಂಶ ಅಥವಾ ಪಿತ್ತದ ಪ್ರಭಾವ ತಲೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ.

ಈ ಸಂದರ್ಭದಲ್ಲಿ ನೀವು ಮಜ್ಜಿಗೆ ಅಥವಾ ಎಳನೀರು ಕುಡಿಯುವುದು ಅಥವಾ ನಿಮ್ಮ ಬಳಿ ಹರಳೆಣ್ಣೆ ಇದ್ದರೆ ಅದನ್ನು ನೆತ್ತಿಯ ಭಾಗಕ್ಕೆ ಮತ್ತು ಪಾದಗಳ ಭಾಗಕ್ಕೆ ಹಚ್ಚುವುದರಿಂದ ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಸಂಶೋಧನೆಗಳು ಹೇಳುವ ಹಾಗೆ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ಉರಿಯೂತದ ಪ್ರಭಾವವನ್ನು ಉಂಟು ಮಾಡಿ ತಲೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಮೈಗ್ರೇನ್ ಸಮಸ್ಯೆ ಕೂಡ ಕಂಡುಬರಲು ಇದೇ ಕಾರಣ.

ತಲೆನೋವು ಬಂದಂತಹ ಸಂದರ್ಭದಲ್ಲಿ ನಿಮ್ಮ ಕುತ್ತಿಗೆಯನ್ನು ಹಿಂದೆ ಮುಂದೆ ಮತ್ತು ಅಕ್ಕಪಕ್ಕ ಚೆನ್ನಾಗಿ ಆಡಿಸಿ. ಇದರಿಂದ ಹೃದಯದಿಂದ ತಲೆಯ ಭಾಗಕ್ಕೆ ಹರಡಿರುವ ರಕ್ತನಾಳಗಳಲ್ಲಿ ರಕ್ತಸಂಚಾರ ಉಂಟಾಗಿ ಮಾಂಸಖಂಡಗಳು ಶಾಂತ ಗೊಳ್ಳುತ್ತದೆ.

ಕೆಲವೊಮ್ಮೆ ಯಾವುದಾದರೂ ಒಂದು ಹೊತ್ತು ಊಟ ಬಿಟ್ಟು ಉಪವಾಸವಿರುವುದರಿಂದ ತಲೆನೋವು ಬರುವ ಸಾಧ್ಯತೆ ಇರುತ್ತದೆ.

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ತಲೆನೋವನ್ನು ದೂರವಿಡಬಹುದು. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ.

ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಅಸ್ಪಿರಿನ್ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಮಾತ್ರೆಗಳ ಸೇವನೆಯಿಂದ ತಲೆನೋವು ಕಡಿಮೆಯಾದರೂ ಮುಂದಿನ ದಿನಗಳಲ್ಲಿ ನೀವು ತೆಗೆದುಕೊಳ್ಳುವ ಮಾತ್ರೆಯಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯು ಇದೆ. ಹೀಗಾಗಿ ಕಾಯಿಲೆಯಲ್ಲದ ಈ ನೋವಿಗೆ ಸರಳ ಉಪಾಯಗಳನ್ನು ಕಂಡುಕೊಳ್ಳುವುದು ಉತ್ತಮ.

ಮಸಾಲೆ ಪದಾರ್ಥಗಳ ಕಿಂಗ್ ಎನ್ನಲಾಗುವ ದಾಲ್ಚಿನ್ನಿ ಕೂಡ ಪರಿಣಾಮಕಾರಿ ತಲೆನೋವು ಪರಿಹಾರಗಳಲ್ಲಿ ಒಂದು. ನೀವು ದಾಲ್ಚಿನ್ನಿ ತುಂಡುಗಳನ್ನು ಪುಡಿ ಮಾಡಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿ. ಇದನ್ನು ನಿಮ್ಮ ಹಣೆಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಮಲಗಿಕೊಳ್ಳಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.

ಶುಂಠಿ ಚಹಾ ಮಾಡಿ ಸೇವಿಸುವುದು ಉತ್ತಮ. ಒಂದು ತುಂಡು ಶುಂಠಿಯನ್ನು ಅಥವಾ ಅದರ ರಸವನ್ನು ಚಹಾದಲ್ಲಿ ಬೆರಸಿ. ಅದರೊಂದಿಗೆ ಒಂಚೂರು ನಿಂಬೆ ರಸವನ್ನು ಮಿಶ್ರಣ ಮಾಡಿ ಕುಡಿಯಿರಿ. ತಲೆನೋವು ಉಂಟಾದಾಗ ಅಥವಾ ದಿನಕ್ಕೆ ಎರಡು ಮೂರು ಬಾರಿ ಇದನ್ನು ಸೇವಿಸಬಹುದು.

ಹಾಗೆಯೇ ತಾಜಾ ತುಳಸಿ ಎಲೆಗಳನ್ನು ಅಗಿಯಬಹುದು ಅಥವಾ ತುಳಸಿಯನ್ನು ನೀರಿನ ಪಾತ್ರೆಯಲ್ಲಿ ಕುದಿಸಿ ನಂತರ ಹವೆಯನ್ನು ಉಸಿರಾಡುವುದರಿಂದ ಸಹ ತಲೆನೋವು ಕಡಿಮೆಯಾಗುತ್ತದೆ.

ಲವಂಗದಲ್ಲಿ ನೋವು ನಿವಾರಿಸುವ ಗುಣಗಳು ಹೇರಳವಾಗಿವೆ. ಹೀಗಾಗಿ ಲವಂಗದ ಬಳಕೆಯಿಂದಲೂ ತಲೆನೋವನ್ನು ತಡೆಯಬಹುದು. ಕೆಲವು ಲವಂಗವನ್ನು ಪುಡಿ ಮಾಡಿ ಅವುಗಳನ್ನು ಸ್ಯಾಚೆಟ್ ಅಥವಾ ಕ್ಲೀನ್ ಕರವಸ್ತ್ರದಲ್ಲಿ ಇರಿಸಿ. ನಿಮಗೆ ತಲೆನೋವು ಬಂದಾಗಲೆಲ್ಲಾ ಪುಡಿಮಾಡಿದ ಲವಂಗದ ವಾಸನೆಯನ್ನು ಉಸಿರಾಡಿ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.

ಮದ್ಯ ಕುಡಿದು ನಿಶೆ ಇಳಿದಿರದಿದ್ದರೂ ತಲೆ ನೋವು ಬರುತ್ತದೆ. ಅಂತಹ ಸಮಯದಲ್ಲಿ ಈ ವಿಧಾನವನ್ನು ಅನುಸರಿಸಬೇಕು. ಅಂದರೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ನಿಂಬೆರಸ ಹಿಂಡಿ ಸ್ವಲ್ಪ ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಕುಡಿಯಬೇಕು. ಇದನ್ನು ಸ್ವಲ್ಪ ಸಮಯದ ಅಂತರದಲ್ಲಿ ಸುಮಾರು 3 ಬಾರಿ ಕುಡಿದರೆ ತಲೆ ನೋವು ಮತ್ತು ತಲೆ ಸುತ್ತು ಕಡಿಮೆಯಾಗುತ್ತದೆ.

 

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ