ತಮ್ಮನ್ನು ಪೋರ್ನ್ ನಟಿ ಎಂದವರ ವಿರುದ್ಧ ಗರಂ ಆದ ಅನಿತಾ ಭಟ್
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಅನಿತಾ ಭಟ್ (Anita Bhatt), ಈ ವಿಷಯವಾಗಿ ಸಾಕಷ್ಟು ಕಿರಿಕಿರಿಯನ್ನು ಅವರು ಎದುರಿಸಿದ್ದಾರೆ. ಅನಿತಾ ಭಟ್ ಹಾಕಿರುವ ಕಾಸ್ಟ್ಯೂಮ್, ಮಾಡಿರುವ ಪಾತ್ರಗಳನ್ನು ಕೆಲವರು ಹುಡುಕಿ ಹುಡುಕಿ ಇವರನ್ನು ರೇಗಿಸುತ್ತಾರೆ. ಅನಿತಾ ಅವುಗಳಿಗೆ ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತಾರೆ. ಅದರಲ್ಲೂ ಎಡ ಮತ್ತು ಬಲಗಳ ಚರ್ಚೆ ಇವರ ಖಾತೆಯಲ್ಲಿ ಅನೇಕ ಬಾರಿ ಆಗಿದೆ. ಈ ಬಾರಿ ಬೇರೆ ಕಾರಣಕ್ಕಾಗಿ ಅನಿತಾ ಗರಂ ಆಗಿದ್ದಾರೆ.
ಕೆಲವು ಖಾತೆಗಳಿಂದ ತಮಗೆ ನಿರಂತರವಾಗಿ ಅವಹೇಳನಕಾರಿ ಮಸೇಜ್ ಗಳು ಬರುತ್ತಿವೆ ಎಂದು ಸ್ವತಃ ಅನಿತಾ ಬರೆದುಕೊಂಡಿದ್ದಾರೆ. ಅದರಲ್ಲಿ ಒಬ್ಬ ತಮ್ಮನ್ನು ಅಶ್ಲೀಲ (Porn) ಚಿತ್ರಗಳ ನಟಿ (Actress) ಎಂದು ಕರೆದಿರುವ ಕುರಿತು ಹೇಳಿಕೊಂಡಿದ್ದಾರೆ. ಯಾವ ಅಶ್ಲೀಲ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಬಹಿರಂಗ ಪಡಿಸಿ ಎಂದು ಅನಿತಾ ಸವಾಲು ಹಾಕಿದ್ದಾರೆ. ಇಂತಹ ಬೆದರಿಕೆಗೆ ಜಗ್ಗುವುದಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.
ತಮ್ಮ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುವವರು ಹೆಸರಿನ ಸಮೇತ ಟ್ವಿಟರ್ ಖಾತೆಯಿಂದಲೇ ಅನಿತಾ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪೊಲೀಸರು ಕೂಡ ಉತ್ತರಿಸಿದ್ದು, ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸಲಹೆ ನೀಡಿದ್ದಾರೆ. ಲಿಖಿತ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.