ಆ್ಯಪಲ್ ಬಾಕ್ಸ್ ಮೂಲಕ ಸಿನಿಮಾ ರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟವರು ರಮ್ಯಾ. ಈ ಹೆಸರಿನಲ್ಲಿ ರಮ್ಯಾ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದಾರೆ. ಮೊದಲ ಚಿತ್ರವಾಗಿ ಸ್ವಾತಿ ಮುತ್ತಿನ ಮಳೆ ಹನಿಯೇ ಘೋಷಣೆ ಮಾಡಿದ್ದರು. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಸಿಕೊಂಡಿದೆ. ಹಾಗಾಗಿ ಈ ಚಿತ್ರದ ನಾಯಕಿಯ ಪಾತ್ರದ ಫೋಟೋವನ್ನು ರಮ್ಯಾ ಹಂಚಿಕೊಂಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾದ ನಾಯಕಿಯಾಗಿ ರಮ್ಯಾ ಅವರೇ ತೆರೆಯ ಮೇಲೆ ಕಾಣಿಸಿಕೊಳ್ಳುವುದಿತ್ತು. ಸಿನಿಮಾದ ಟೈಟಲ್ ಲಾಂಚ್ ಆದಾಗ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನ ಸಿನಿಮಾ ಎಂದೇ ಹೇಳಲಾಗಿತ್ತು. ಆನಂತರ ರಮ್ಯಾ ಸ್ಥಾನಕ್ಕೆ ಸಿರಿ ರವಿಕುಮಾರ್ ಆಗಮಿಸಿದರು. ಈ ಸಿನಿಮಾದ ನಾಯಕಿಯಾಗಿ ಸಿರಿ ಆಯ್ಕೆಯಾದ ವಿಚಾರವನ್ನು ನಿರ್ಮಾಣ ತಂಡವೇ ಹೇಳಿತ್ತು. ಆದರೆ, ರಮ್ಯಾ ಯಾಕೆ ಅದರಿಂದ ಹೊರ ಬಂದರು ಎನ್ನುವ ವಿಚಾರವನ್ನು ಹೇಳಿರಲಿಲ್ಲ.
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಶೂಟಿಂಗ್ ಇದೀಗ ಸಂಪೂರ್ಣ ಮುಗಿದಿದೆ. ಹಾಗಾಗಿ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ ಅನ್ನು ಸ್ವತಃ ರಮ್ಯಾ ಅವರೇ ಹಂಚಿಕೊಂಡಿದ್ದಾರೆ. ಸಿರಿ ಈ ಸಿನಿಮಾದಲ್ಲಿ ಯಾವ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಬಹುತೇಕ ಕಥೆ ಸಿರಿ ಅವರ ಪಾತ್ರದ ಸುತ್ತಲೇ ಸುತ್ತಲಿದೆಯಂತೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist