ತಮಿಳುನಾಡು ಮೂಲದ ಮಹಿಳೆಯ ಬರ್ಬರ ಹತ್ಯೆ
Twitter
Facebook
LinkedIn
WhatsApp
ಮಂಡ್ಯ: ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಿರುವ ಘಟನೆ ಮಂಡ್ಯದ (Mandya) ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು (Tamil Nadu) ಮೂಲದ ಗಂಗಾ (38) ಕೊಲೆಯಾದ ದುರ್ದೈವಿ. ಇವರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ನಿಮಿಷಾಂಬ ದೇವಾಲಯದ (Nimishamba Temple) ಬಳಿಯ ಕಾವೇರಿ ನದಿಯಲ್ಲಿ (Kaveri River) ಕಾಸು ಹೆಕ್ಕುವ ಕಾಯಕವನ್ನು ಮಾಡುತ್ತಿದ್ದರು. ಅಲ್ಲದೇ ಇವರು ಮೈಸೂರು – ಬೆಂಗಳೂರು ಮೇಲ್ಸೇತುವೆಯ ಕೆಳಗೆ ತಮ್ಮ ಗುಂಪಿನೊಂದಿಗೆ ವಾಸಿಸುತ್ತಿದ್ದರು. ಇವರ ಗುಂಪಿನ ಸದಸ್ಯರೆಲ್ಲರೂ ನಿರಾಶ್ರಿತರಾಗಿದ್ದು, ಮಹಿಳೆಯ ಹತ್ಯೆಯ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.