ಹಾಸನ: ಮಗ ಚುರುಕಿಲ್ಲ, ಹಾಗಾಗಿ ತನ್ನಿಂದಲೇ ವಂಶ ಬೆಳೆಯಲಿ ಎಂದು ಸೊಸೆಯ ಮೇಲೆ ಕಣ್ಣು ಹಾಕಿದ ಮಾವನನ್ನು ಸುಪಾರಿ ಕೊಟ್ಟು ಬೀಗರಿಂದಲೇ ಹತ್ಯೆ ಮಾಡಿಸಿರುವ ಘಟನೆ ಹಾಸನ (Hassan) ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಮ್ಮೇಗೌಡ (55) ಕೊಲೆಯಾದ ವ್ಯಕ್ತಿ. ನ.13 ರಂದು ರಾಗಿಕಾವಲು ಗ್ರಾಮದ ಹೊಸಕೆರೆಯಲ್ಲಿ ತಮ್ಮೇಗೌಡನ ಶವ ಪತ್ತೆಯಾಗಿತ್ತು. ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಕೆರೆಗೆ ಶವ ಎಸೆಯಲಾಗಿತ್ತು. ಈ ಸಂಬಂಧ ಮೃತನ 3ನೇ ಮಗ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಕೊನೆಗೂ ಕೊಲೆಯ ರಹಸ್ಯ ಭೇದಿಸುವಲ್ಲಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ.
ಸುಪಾರಿ ಕಿಲ್ಲಿಂಗ್ ನಡೆದದ್ದು ಹೇಗೆ?
ಮಾವ ತಮ್ಮೇಗೌಡ ತನ್ನ ಸೊಸೆ ನಾಗರತ್ನಾಳಿಗೆ ಅನೇಕ ರೀತಿಯಲ್ಲಿ ತೊಂದರೆ ಕೊಡುತ್ತಿದ್ದ. ಮಗ ಬೌದ್ಧಿಕವಾಗಿ ಅಷ್ಟೇನು ಚುರುಕಿರಲಿಲ್ಲ. ಈತನಿಂದ ಮಕ್ಕಳಾಗುವುದು ಅನುಮಾನವಿತ್ತು. ಹೀಗಾಗಿ ತನ್ನಿಂದಲೇ ವಂಶ ಬೆಳೆಯಲಿ ಎಂದು ಮಾವ ಸೊಸೆಗೆ ಲೈಂಗಿಕವಾಗಿ ಕಿರುಕುಳ (Sexual Harassment) ನೀಡುತ್ತಿದ್ದ. ಮಾವನ ನೀಚ ಬುದ್ದಿ ಬಗ್ಗೆ ತನ್ನ ಪೋಷಕರ ಬಳಿ ಸೊಸೆ ಹೇಳಿಕೊಂಡ ನಂತರ ನಾಗರತ್ನಾಳ ಪೋಷಕರಾದ ಮೈಲಾರಗೌಡ ಹಾಗೂ ತಾಯಮ್ಮ 50 ಸಾವಿರಕ್ಕೆ ಕೊಲೆ ಸುಪಾರಿ ನೀಡಿದ್ದಾರೆ.
ತಮ್ಮ ಮನೆಯಲ್ಲೇ ಮದ್ಯ ಕುಡಿಸಿ ರಾಡ್‌ನಿಂದ ಬಲವಾಗಿ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನ ಕೆರೆಗೆ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದ ಹಳ್ಳಿಮೈಸೂರು ಠಾಣೆ ಪೊಲೀಸರು (HalliMysore Police) ಪ್ರಕರಣವನ್ನು ಭೇದಿಸಿ ಕೊಲೆ ಆರೋಪಿಗಳಾದ ಯೋಗೇಶ್, ಚಂದ್ರೇಗೌಡ, ಮೈಲಾರಿಗೌಡ ಆತನ ಪತ್ನಿ ತಾಯಮ್ಮ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist