ಭಾನುವಾರ, ಮೇ 5, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತನ್ನದೇ ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳಡಿ ಇದ್ದು ಬದುಕಿ ಬಂದ 17 ರ ಯುವಕ!

Twitter
Facebook
LinkedIn
WhatsApp
ತನ್ನದೇ ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳಡಿ ಇದ್ದು ಬದುಕಿ ಬಂದ 17 ರ ಯುವಕ!

ನವದೆಹಲಿ (ಫೆ.11): ಭೂಕಂಪದಿಂದ ಅಕ್ಷರಶಃ ನರಕದಂತಾಗಿರುವ ಟರ್ಕಿಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಗುರುವಾರ ರಾತ್ರಿ ಟರ್ಕಿಯ ರಕ್ಷಣಾ ಸಿಬ್ಬಂದಿಗಳು ಭೂಕಂಪದ ಕೇಂದ್ರಬಿಂದುವಾದ ದಕ್ಷಿಣ ಗಾಜಿಯಾಟೆಂಪ್‌ ಪ್ರಾಂತ್ಯದಲ್ಲಿ ಕುಸಿದ ಅಪಾರ್ಟ್‌ಮೆಂಟ್‌ನ ಕಟ್ಟಡದ ಕೆಳಗಿನಿಂದ 17 ವರ್ಷದ ಯುವಕನನ್ನು ಜೀವಂತವಾಗಿ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. ಭೂಕಂಪ ಸಂಭವಿಸಿದ 94 ಗಂಟೆಗಳ ಬಳಿಕ ಯುವಕನ್ನು ಹೊರತೆಗೆಯಲಾಗಿದೆ. ಇಷ್ಟು ಸಮಯದ ಕಾಲ ಆಹಾರವಿಲ್ಲದೆ, ಆತ ಬದುಕಿದ್ದ ಬಗ್ಗೆಯೇ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆತ, ತನ್ನದೇ ಮೂತ್ರ ಕುಡಿದು ಇಷ್ಟು ದಿನಗಳ ಕಾಲ ಜೀವಂತವಾಗಿದ್ದೆ ಎಂದು ಹೇಳಿದ್ದಾನೆ. ಅದ್ನಾನ್ ಮುಹಮ್ಮತ್ ಕೊರ್ಕುಟ್ ಹೆಸರಿನ ಯುವಕನನ್ನು ಗುರುವಾರ ತಡರಾತ್ರಿ ಗಾಜಿಯಾಂಟೆಪ್‌ನ ಸೆಹಿತ್‌ಕಾಮಿಲ್ ಜಿಲ್ಲೆಯ ಅಪಾರ್ಟ್‌ಮೆಂಟ್‌ನ ಅವಶೇಷಗಳಿಂದ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ವೈರಲ್‌ ಆಗಿರುವ ಸೋಶಿಯಲ್‌ ಮೀಡಿಯಾ ವಿಡಿಯೋದಲ್ಲಿ ಕೊರ್ಕುಟ್‌, ‘ನನ್ನ ಮೂತ್ರವನ್ನೇ ಕುಡಿದು ಇಲ್ಲಿಯವರೆಗೂ ಬದುಕಿದ್ದೆ. ನೀವು ಬರುವವರೆಗೂ ನಾನು ಕಾಯುತ್ತಿದ್ದೆ’ ಎಂದು ಹೇಳಿದ್ದಾನೆ. 

index 10

 ;ನಾನು ನನ್ನದೇ ಮೂತ್ರವನ್ನು ಕುಡಿದು ಬದುಕಲು ಯಶಸ್ವಿಯಾದೆ. ಓಹ್‌ ದೇವರೆ ತುಂಬಾ ಥ್ಯಾಂಕ್ಸ್‌ ನಾನು ಬದುಕಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾನೆ. ನೀವು ಬರಲಿ ಎಂದು ನಾನು ಆಶಿಸುತ್ತಿದ್ದೆ. ನೀವು ಬಂದಿದ್ದೀರಿ. ದೇವರಿಗೆ ಥ್ಯಾಂಕ್ಸ್‌. ನಿಮಗೆಲ್ಲರಿಗ ಥ್ಯಾಂಕ್ಸ್‌’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಮತ್ತೆ ಯಾವುದಾದರೂ ಶಬ್ದ ನಿಮಗೆ ಕೇಳಿಸುತ್ತಿತ್ತೇ ಎಂದು ಸಿಬ್ಬಂದಿಗಳು ಕೇಳಿದ ಪ್ರಶ್ನೆಗೆ, ನಾಯಿ ಬೊಗಳುತ್ತಿದ್ದ ಶಬ್ದ ಕೇಳಿದ್ದೇನೆ ಎಂದರು. ಅದಕ್ಕೆ ಸಿಬ್ಬಂದಿಗಖು, ನಾಯಿಯನ್ನು ನಾವು ರಕ್ಷಣೆ ಮಾಡುತ್ತೇವೆ ಎಂದಿರುವ ವಿಡಿಯೋ ಇದಾಗಿದೆ.

 ಸೋಮವಾರ ಮುಂಜಾನೆ ಆಗ್ನೇಯ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಪ್ರಬಲವಾದ ಭೂಕಂಪವು ಸಂಭವಿಸಿದೆ. ಇದು ಸಂಪೂರ್ಣ ನಗರವನ್ನು ವಿಧ್ವಂಸ ಮಾಡಿದ್ದರೆ, ಸಾವಿರಾರು ಜನರು ಸಾವನ್ನಪ್ಪಿದ್ದು ಲಕ್ಷಗಟ್ಟಲೆ ಜನರು ಗಾಯಗೊಂಡಿದ್ದಾರೆ. ಈವರೆಗೂ 24 ಸಾವಿರಕ್ಕೂ ಅಧಿಕ ಜನ ಸಾವು ಕಂಡಿದ್ದಾರೆ ಎಂದು ಹೇಳಲಾಗಿದೆ. ಶೀತ ವಾತಾವರಣದ ನಡುವೆಯೂ ರಕ್ಷಣಾ ಕಾರ್ಯಾಚರಣೆ ಸತತ ನಾಲ್ಕನೇ ದಿನವೂ ವ್ಯಾಪಕವಾಗಿ ಮುಂದುವರಿದಿದೆ. ಸಾಕಷ್ಟು ಜನರು ಇನ್ನೂ ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ