ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತಂದೆ ಪಕ್ಕದಲ್ಲಿ ಪುತ್ರ ರತ್ನ: ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಪಾಲಿಕೆ ಗ್ರೀನ್ ಸಿಗ್ನಲ್

Twitter
Facebook
LinkedIn
WhatsApp
ತಂದೆ ಪಕ್ಕದಲ್ಲಿ ಪುತ್ರ ರತ್ನ: ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಪಾಲಿಕೆ ಗ್ರೀನ್ ಸಿಗ್ನಲ್

ಕನ್ನಡದ ಮನೆ ಮಗ, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡು ತಿ‌ಂಗಳು ಕಳೆದಿದ್ದರೂ ನಾಡಿನಾದ್ಯಂತ ಮನೆ ಮನೆಯಲ್ಲೂ ಪುನೀತ್ ಸ್ಮರಣೆ ನಿಂತಿಲ್ಲ ‌. ರಸ್ತೆಗೆ ಹೆಸರಿಡೋ ಮೂಲಕ, ಮೇಲ್ಸೇತುವೆ,ಉದ್ಯಾನವನಕ್ಕೆ ಹೆಸರಿಡೋ ಮೂಲಕ ಪುನೀತ್ ಸ್ಮರಿಸುವ ಕೆಲಸವಾಗುತ್ತಿದೆ. ಈ‌ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರಿನ ಆಡಳಿತ ಯಂತ್ರವೂ ಪುನೀತ್ ಗೆ ಗೌರವ ಸಲ್ಲಿಸಲು ಸಿದ್ಧವಾಗಿದ್ದು ಬಿಬಿಎಂಪಿ ಕೇಂದ್ರ‌ ಕಚೇರಿಯಲ್ಲಿ ಪುನೀತ್ ಪ್ರತಿಮೆ ಸ್ಥಾಪನೆಗೆ ( Puneeth Rajkumar statue ) ಅಧಿಕೃತ ಒಪ್ಪಿಗೆ ದೊರೆತಿದೆ.

ಪುನೀತ್ ನಿಧನದ ಕೆಲವೇ ದಿನಗಳಲ್ಲಿಯೇ ಬಿಬಿಎಂಪಿ ನೌಕರರ ಸಂಘ ಬಿಬಿಎಂಪಿ ಆವರಣದಲ್ಲಿರುವ ಮೇಯರ್ ಮುತ್ತಣ್ಣ ಡಾ.ರಾಜ್ ಕುಮಾರ್ ಪ್ರತಿಮೆ ಬಳಿಯೇ ಪುನೀತ್ ರಾಜ್‍ಕುಮಾರ್ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಿತ್ತು. ಮಾತ್ರವಲ್ಲ ಬನಶಂಕರಿಯ ಸಪ್ತಶ್ರೀಕ್ರಿಯೇಶನ್ಸ್ ನಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ನಿರ್ಮಾಣಕ್ಕೆ ಆರ್ಡರ್ ಕೂಡ ನೀಡಿತ್ತು. ಇದಾದ ಮೇಲೆ ಸಪ್ತಶ್ರೀ ಕ್ರಿಯೇಶನ್ಸ್ ಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ ಸಹೋದರ ರಾಘವೇಂದ್ರ್ ರಾಜ್ ಕುಮಾರ್ ಪ್ರತಿಮೆ ನಿರ್ಮಾಣವನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಸೂಚಿಸಿದ್ದರು.

ಈಗ ಪ್ರತಿಮೆ‌ ಬಹುತೇಕ ಅಂತಿಮಗೊಂಡಿದ್ದು ಸ್ಥಾಪನೆಗೆ ಸಿದ್ಧವಾಗಿದೆ. ಹೀಗಾಗಿ ಬಿಬಿಎಂಪಿ ಅನುಮೋದನೆ ಬಳಿಕ ಪ್ರತಿಮೆ ಸ್ಥಾಪನೆ ಸಮಾರಂಭ ನಡೆಸಲು‌ಚಿಂತಿಸಲಾಗಿತ್ತು. ಬಿಬಿಎಂಪಿ ಉದ್ಯೋಗಿಗಳ‌ ಸಂಘ ಸಲ್ಲಿಸಿದ್ದ ಪುನೀತ್ ಪ್ರತಿಮೆ ನಿರ್ಮಾಣದ ಅರ್ಜಿಗೆ ಬಿಬಿಎಂಪಿ ಅಧಿಕೃತವಾಗಿ ಅನುಮೋದನೆ ನೀಡಿದೆ. ಬಿಬಿಎಂಪಿ ಅಡಳಿತಾಧಿಕಾರಿ ರಾಕೇಶ್ ಸಿಂಗ್ ಈ ಪ್ರಸ್ತಾಪಕ್ಕೆ ಅನುಮೋದನೆ‌ ನೀಡಿದ್ದಾರೆ.
ಕೊರೋನಾದ ನಿಯಮಗಳು ಸಡಿಲಗೊಂಡ ಬಳಿಕ ಅದ್ದೂರಿ ಕಾರ್ಯಕ್ರಮ ನಡೆಸಿ ಪ್ರತಿಮೆ ಸ್ಥಾಪನೆ ಕಾರ್ಯಕ್ರಮ ನಡೆಸಲು ಬಿಬಿಂಎಪಿ ಉದ್ಯೋಗಿಗಳ ಸಂಘ ನಿರ್ಧರಿಸಿದೆ.
ಈಗಾಗಲೇ ನಗರದ ಹಲವೆಡೆ ಪುನೀತ್ ರಾಜ್ ಕುಮಾರ್ ಪ್ರತಿಮೆಗಳ ಸ್ಥಾಪನೆಮಾಡಲಾಗಿದ್ದು, ನಾಯಂಡನಳ್ಳಿಯಿಂದ ಬನ್ನೇರುಘಟ್ಟಕ್ಕೆ ಸಂಪರ್ಕ ಕಲ್ಪಿಸುವ 12 ಕಿಲೋಮೀಟರ್ ರಸ್ತೆಗೂ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ.
ಆದರೆ ನಗರದ ಎಲ್ಲೇ ಪುನೀತ್ ರಾಜ್ ಕುಮಾರ್ ಪ್ರತಿಮೆ ನಿರ್ಮಿಸುವುದಾದರೂ ಬಿಬಿಎಂಪಿ ಹಾಗೂ ಸರ್ಕಾರದಿಂದ ಅನುಮತಿ ಪಡೆಯುವಂತೆ ಬಿಬಿಎಂಪಿ ಎಲ್ಲರಿಗೂ ಮೊದಲೇ ಸೂಚಿಸಿದ್ದು, ಸಾರ್ವಜನಿಕರು ಓಡಾಡುವ ಸ್ಥಳಗಳು ಹಾಗೂ ರಸ್ತೆಮಧ್ಯದ ವೃತ್ತಗಳಲ್ಲಿ ಮೂರ್ತಿ ಸ್ಥಾಪಿಸಿ ಜನರಿಗೆ ತೊಂದರೆ ಉಂಟು ಮಾಡದಂತೆ ಸೂಚಿಸಿದೆ‌.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು