ಢಾಬಾದ ಫ್ರೀಜರ್ ನೊಳಗಡೆ ಪತ್ತೆಯಾದ ಮಹಿಳೆಯ ಮೃತದೇಹ! ದೆಹಲಿಯಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ!
ನವದೆಹಲಿ (ಫೆಬ್ರವರಿ 14, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ದಾ ವಾಕರ್ ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.ನಂತರ ದೇಶದ ಹಲವೆಡೆ ಇಂತದ್ದೇ ಕೆಲ ಪ್ರಕರಣಗಳು ಬೆಳಕಿಗೆ ಬಂದವು. ಈಗ ದೆಹಲಿಯಲ್ಲೇ ಶ್ರದ್ಧಾ ರೀತಿಯ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನೈಋತ್ಯ ದೆಹಲಿಯ ನಜಾಫ್ಗಢದ ಢಾಬಾವೊಂದರಲ್ಲಿ 25 ವರ್ಷದ ಮಹಿಳೆಯ ಶವ ವ್ಯಾಲೆಂಟೈನ್ಸ್ ದಿನ ಅಂದರೆ ಫೆಬ್ರವರಿ 14, 2023 ರ ಮಂಗಳವಾರ ಫ್ರೀಜರ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, 2 – 3 ದಿನಗಳ ಹಿಂದೆ ಮಹಿಳೆಯನ್ನು ಕೊಂದು ಆಕೆಯ ಶವವನ್ನು ಢಾಬಾದ ಫ್ರೀಜರ್ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಢಾಬಾದ (Dhaba) ಫ್ರೀಜರ್ನಲ್ಲಿ (Freezer) ಮಹಿಳೆಯ ಮೃತದೇಹ (Women Deadbody) ಸಿಕ್ಕಿರುವ ಘಟನೆ ಸಂಬಂಧ ಆ ಢಾಬಾದ ಮಾಲೀಕ (Dhaba Owner) ಸಾಹಿಲ್ ಗಹ್ಲೋಟ್ನನ್ನು (Sahil Gahlot) ಬಂಧಿಸಲಾಗಿದೆ (Arrested). ಇನ್ನು, ಮೃತ ಮಹಿಳೆ ದೆಹಲಿಯ (Delhi) ಉತ್ತಮ್ ನಗರದ ನಿವಾಸಿ ಎಂದೂ ಪೊಲೀಸರು (Police) ತಿಳಿಸಿದ್ದು, ಆಕೆಯನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಸದ್ಯ, ಢಾಬಾ ಮಾಲೀಕ ಸಾಹಿಲ್ ಗಹ್ಲೋಟ್ ಅವರನ್ನು ಶಂಕೆಯ ಮೇಲೆ ಬಂಧಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಸಾಹಿಲ್ ಗಹ್ಲೋಟ್ ಮತ್ತು ಮಹಿಳೆ ಇಬ್ಬರೂ ಸಂಬಂಧದಲ್ಲಿದ್ದರು (Relationship) ಎಂದು ಪೊಲೀಸ್ ಅಧಿಕಾರಿ ವಿಕ್ರಮ್ ಸಿಂಗ್ ಹೇಳಿದ್ದಾರೆ.