ಡ್ಯಾಂನಲ್ಲಿ ಈಜಲು ಹೋಗಿ ಕಾಲೇಜು ವಿದ್ಯಾರ್ಥಿನಿಯರು ಸಾವು
ಚಿಕ್ಕಬಳ್ಳಾಪುರ (ಏ.01): ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಡ್ಯಾಂಗೆ ಒಂದು ದಿನದ ಹೊರ ಸಂಚಾರಕ್ಕೆ ಹೋಗಿದ್ದ 6 ಜನರು ನೀರಿನಲ್ಲಿ ಈಜಲು ಮುಂದಾಗಿದ್ದು, ಈ ವೇಳೆ ಕಲ್ಲಿನ ಮೇಲೆ ನಿಂತಿದ್ದವರು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಕಾಲು ಜಾರಿ ಬಿದ್ದವರನ್ನು ರಕ್ಷಣೆ ಮಾಡಲು ಮುಂದಾದ ಮತ್ತಿಬ್ಬರು ನೀರಿನೊಳಗೆ ಬಿದ್ದು ಮುಳುಗಿದ್ದಾರೆ.
ಮಧ್ಯಾಹ್ನದ ವೇಲೆ ಡ್ಯಾಮ್‌ನಲ್ಲಿ ಈಜಲು ಮುಂದಾಗಿದ್ದಾರೆ. ಈ ವೇಳೆ ಡ್ಯಾಮ್‌ನ ಒಳಗಿದ್ದ ಕಲ್ಲಿನ ಮೇಲೆ ನಿಂತುಕೊಂಡು ಒಬ್ಬರನ್ನೊಬ್ರು ಕೈ ಹಿಡಿದುಕೊಂಡು ಆಳವಿರುವ ಪ್ರದೇಶಕ್ಕೆ ಹೋಗಿದ್ದಾರೆ. ಆದರೆ, ಈ ವೇಳೆ ಒಬ್ಬರು ಕಾಲುಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಎಲ್ಲರೂ ಕೈ- ಕೈ ಹಿಡಿದುಕೊಂಡು ಸರಪಳಿ ರೀತಿಯಲ್ಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಮೊದಲು ಕಾಲು ಜಾರಿ ಬಿದ್ದ ವಿದ್ಯಾರ್ಥಿನಿಯ ಜೊತೆಗೆ ಮತ್ತಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಳಿದಂತೆ ಇನ್ನು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನ್ನು ಬೆಂಗಳೂರು ಕಾಲೇಜಿನಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಕಾಲೇಜಿಗೆ ಬಂಕ್ ಮಾಡಿ ಒಂದು ದಿನದ ಟ್ರಿಪ್‌ಗೆ ಹೋಗಿದ್ದು, ಈ ಬಗ್ಗೆ ಪೋಷಕರ ಗಮನಕ್ಕೆ ಇರಲಿಲ್ಲ. ಆದರೆ, ಇಂದು ಇದ್ದಕ್ಕಿದ್ದಂತೆ ಮಕ್ಕಳು ಸಾವನ್ನಪ್ಪಿದ ಸುದ್ದಿಯನ್ನು ಕೇಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಸ್ಥಳಕ್ಕೆ ಆಗಮಿಸಿದ ಮೃತರ ಪೋಷಕರು ತಮ್ಮ ಮಕ್ಕಳ ಸಾವನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಇಬ್ಬರ ಮೃತ ದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ರಾತ್ರಿ ವೇಳೆಯೂ ಕೂಡ ಫ್ಲೆಡ್ ಲೈಟ್ ಬಳಸಿ ಮೃತದೇಹ ಪತ್ತೆ ಕಾರ್ಯಾಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.