ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಅಮೆರಿಕದ ಮಾಜಿ ಅಧ್ಯಕ್ಷನ ಬಲ ಕಿವಿಗೆ ಗಾಯ!
ಅಮೆರಿಕ: ಈ ವರ್ಷಾಂತ್ಯದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಸ್ಥಿರತೆಯ ಭಯವನ್ನು ಹೆಚ್ಚಿಸುವ ಆಘಾತಕಾರಿ ಘಟನೆಯಲ್ಲಿ ಭಾರತೀಯ ಕಾಲಮಾನ ನಿನ್ನೆ ಶನಿವಾರ ರಾತ್ರಿ ಪ್ರಚಾರ ರ್ಯಾಲಿಯಲ್ಲಿ ಬಂದೂಕುಧಾರಿಯೊಬ್ಬನ ಹತ್ಯೆಯ ಯತ್ನದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿವಿಗೆ ಗಾಯವಾಗಿದೆ.
ಟ್ರಂಪ್ ಅವರನ್ನು ಸ್ವಲ್ಪದರಲ್ಲಿಯೇ ಬಚಾವಾಗಿದ್ದಾರೆ. ಶನಿವಾರ ರಾತ್ರಿ ಪೆನ್ಸಿಲ್ವೇನಿಯಾದ ಬಟ್ಲರ್ ನಲ್ಲಿ ಈ ಘಟನೆ ನಡೆದಿದೆ.
ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಗುಂಡಿನ ದಾಳಿಯಿಂದ 78 ವರ್ಷದ ಡೊನಾಲ್ಡ್ ಟ್ರಂಪ್ ಅವರ ಮುಖಕ್ಕೆ ರಕ್ತವಾಗಿದ್ದು, ಅಂಗಪಕ್ಷಕರು ವೇದಿಕೆಯಿಂದ ಹೊರಗೆ ಕರೆತಂದರು. ಘಟನೆಯಲ್ಲಿ ಬಂದೂಕುಧಾರಿ ಮತ್ತು ಒಬ್ಬ ದಾರಿಹೋಕ ವ್ಯಕ್ತಿ ಮೃತಪಟ್ಟಿದ್ದು, ರ್ಯಾಲಿ ನೋಡಲು ಬಂದಿದ್ದ ಇಬ್ಬರು ಪ್ರೇಕ್ಷಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮೇಲೆ ಬಂದೂಕು ದಾಳಿಯ ನಂತರ, ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಒಬ್ಬಾತ ಗುಂಡು ಹಾರಿಸಿದ್ದು ನನಗೆ ಗಾಯವಾಗಿದೆ ಎಂದು ಹೇಳಿದ್ದಾರೆ.
ಮುಂದಿನ ನವೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಘಟನೆ ಬಗ್ಗೆ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅನಾರೋಗ್ಯಕರ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ಘಟನೆಯನ್ನು ಖಂಡಿತಾ ಸಮರ್ಥಿಸುವುದಿಲ್ಲ ಎಂದಿದ್ದಾರೆ.
ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ವೇದಿಕೆಯ ಮೇಲೆ ನುಗ್ಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ನೆಲಕ್ಕೆ ಮುಗ್ಗರಿಸಿದಂತೆ ಆದರು. ಅವರನ್ನು ಸುತ್ತುವರೆದರು ವೇದಿಕೆಯಿಂದ ಹತ್ತಿರದ ವಾಹನಕ್ಕೆ ಬೆಂಗಾವಲು ಮೂಲಕ ಕರೆತಂದರು.
ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುವುದು ನಂಬಲಸಾಧ್ಯವಾಗಿದೆ ಎಂದು ಟ್ರಂಪ್ ತಮ್ಮ TruthSocial ನೆಟ್‌ವರ್ಕ್‌ನಲ್ಲಿ ಕೆಲವೇ ಗಂಟೆಗಳಲ್ಲಿ ಹೇಳಿದರು,
ಹತ್ಯೆಯಾದ ರ್ಯಾಲಿಯ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ದಾಳಿಯು ಪ್ರಪಂಚದಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಅಧ್ಯಕ್ಷ ಬೈಡನ್ ಅವರು ಘಟನೆ ಬಗ್ಗೆ ಟ್ರಂಪ್ ಅವರ ಜೊತೆ ಚರ್ಚಿಸಲಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ರಾಜಕೀಯ ಹಿಂಸಾಚಾರದ ಇತಿಹಾಸವನ್ನು ಹೊಂದಿದೆ, ಈ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಅಭ್ಯರ್ಥಿಗಳಿಗೆ ಬಿಗಿ ಭದ್ರತೆ ಇದೆ.ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿಯನ್ನು 1963 ರಲ್ಲಿ ಅವರ ಮೋಟಾರು ವಾಹನದಲ್ಲಿ ಸವಾರಿ ಮಾಡುವಾಗ ಹತ್ಯೆ ಮಾಡಲಾಯಿತು, ಅವರ ಸಹೋದರ ಬಾಬಿ ಕೆನಡಿ ಅವರನ್ನು 1968 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ 1981 ರಲ್ಲಿ ಹತ್ಯೆಯ ಪ್ರಯತ್ನದಿಂದ ಬದುಕುಳಿದರು.
‘ಸ್ನೇಹಿತ’ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಕಳವಳ:
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಯತ್ನದ ಕುರಿತು ತಮ್ಮ ಮೊದಲ ಪ್ರತಿಕ್ರಿಯೆಯಾಗಿ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ “ಸ್ನೇಹಿತ” ಮೇಲಿನ ದಾಳಿಯಿಂದ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಉದ್ಯಮಿ-ರಾಜಕಾರಣಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿರುವ ಪ್ರಧಾನಿ ಮೋದಿ ಹೇಳಿದ್ದಾರೆ.
“ನನ್ನ ಸ್ನೇಹಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
“ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮೃತರ ಕುಟುಂಬ, ಗಾಯಗೊಂಡವರು ಮತ್ತು ಅಮೇರಿಕನ್ ಜನರೊಂದಿಗೆ ಇವೆ” ಎಂದು ಅವರು ಹೇಳಿದರು.
ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಶೂಟರ್ ಹತ್ಯೆಯ ಪ್ರಯತ್ನದಲ್ಲಿ ಅವರನ್ನು ಗುರಿಯಾಗಿಸಿ ಹಲವಾರು ಗುಂಡುಗಳನ್ನು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಓರ್ವ ವೀಕ್ಷಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ನ ಉಗ್ರರು ಶೂಟರ್ ಅನ್ನು ಗುಂಡಿಕ್ಕಿ ಕೊಂದರು. ಶೂಟರ್‌ನ ಗುರುತು ಮತ್ತು ಪ್ರೇರಣೆಯನ್ನು ಯುಎಸ್ ಅಧಿಕಾರಿಗಳು ಖಚಿತಪಡಿಸುತ್ತಿದ್ದಾರೆ.