ಗುರುವಾರ, ಮಾರ್ಚ್ 28, 2024
ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ; ಚುನಾವಣೆಯ ರಣಕಹಳೆ ಶುರು.!-ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!-ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ-ಓವೈಸಿ ವಿರುದ್ದ ಸಾನಿಯಾ ಮಿರ್ಜಾಗೆ ಟಿಕೆಟ್? ಏನಿದು ಕಾಂಗ್ರೆಸ್ ಪ್ಲ್ಯಾನ್.!-ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ..!-ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈ ತಪ್ಪಿದರೂ ಮಹತ್ವದ ಹುದ್ದೆ ಕೊಟ್ಟ ಹೈಕಮಾಂಡ್.!-ಕಂತೆ ಕಂತೆ ನೋಟುಗಳನ್ನೇ ಹಾಸಿಗೆ ಮಾಡಿಕೊಂಡು ಮಲಗಿದ ಅಸ್ಸಾಂ ರಾಜಕಾರಣಿ..?-ಟಿಕೆಟ್ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ್ದ ಸಂಸದ ಸಾವು..!-ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ: ನಿರ್ಮಲಾ ಸೀತಾರಾಮನ್-ಯದುವೀರ್ ಕಾಂಗ್ರೆಸ್ ನಿಂದ ಸ್ಪರ್ಧಿಸುವಂತೆ ಸಿಎಂ ಮತ್ತು ಡಿಸಿಎಂ ನೀಡಿದ ಆಹ್ವಾನ ನಿರಾಕರಿಸಿದ್ದರು; ಬಿವೈ ವಿಜಯೇಂದ್ರ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡಿಸೆಂಬರ್ 10 ರಂದು ಮಂಗಳೂರಿನಲ್ಲಿ ನಡೆಯಲಿದೆ ಮಂಗಳೂರು ಧರ್ಮ ಕ್ಷೇತ್ರದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವ

Twitter
Facebook
LinkedIn
WhatsApp
ಡಿಸೆಂಬರ್ 10 ರಂದು ಮಂಗಳೂರಿನಲ್ಲಿ ನಡೆಯಲಿದೆ ಮಂಗಳೂರು ಧರ್ಮ ಕ್ಷೇತ್ರದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವ

ಮಂಗಳೂರು, ಡಿಸೆಂಬರ್ 09: ಮಂಗಳೂರು ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವವು ಶನಿವಾರ, ಡಿಸೆಂಬರ್ 10 ರಂದು ನಗರದ ಕಂಕನಾಡಿ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜರುಗುವುದು, ಈ ಕಾರ್ಯಕ್ರಮದಲ್ಲಿ ಗೋವಾದ ಮತ್ತು ದಾಮನ್ ಕಾರ್ಡಿನಲ್ ಫಿಲಿಪ್‌ ನರಿ ಫೆರಾವೂ ಹಾಗೂ ಬೆಂಗಳೂರಿನ ಆರ್ಚ್ ಬಿಷಪ್‌ ಅತೀ ವಂದನೀಯ ಡಾ. ಪೀಟರ್ ಮಚಾದೊ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್‌ ಆರ್ತಿ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜಾ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಜಾನ್ ಮೈಕೆಲ್ ಡಿ’ಕುನ್ಹಾ, ಅನಿವಾಸಿ ಭಾರತೀಯ ಉದ್ಯಮಿ ಮತ್ತು ಲೋಕೋಪಕಾರಿ ಶ್ರೀ ರೊನಾಲ್ಡ್ ಕೊಲಾಸೊ ಮತ್ತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ನಿರ್ದೇಶಕರಾದ ಶ್ರೀಮಸಿ ಫಿಲೋಮಿನಾ ಲೋಬೋ ಮತ್ತಿತರು ಗಣ್ಯರು ಸುವರ್ಣ ಮಹೋತ್ಸವದ ಆಚರಣೆಯಲ್ಲಿ ಭಾಗವಹಿಸುವರು.

ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಶ್ರೀ ಎಂ. ಪಿ, ನೊರೋನ್ಹಾ ಮಾತನಾಡಿ, “ಮಂಗಳೂರು ಧರ್ಮಕ್ಷೇತ್ರದ ಎಲ್ಲಾ ಧರ್ಮಕೇಂದ್ರಗಳಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಗಳು ನಡೆದಿದ್ದವು, ಧರ್ಮ ಕ್ಷೇತ್ರದ ಮಟ್ಟದಲ್ಲಿ ನಡೆಯುವ ಈ ಸುವರ್ಣ ಮಹೋತ್ಸವ ಕಾರ್ಯಕ್ರಮವು ಎಲ್ಲಾ ಸಂಭ್ರಮಾಚರಣೆಗಳ ಸಮಾರೋಪ ಕಾರ್ಯಕ್ರಮವಾಗಿ ಮೂಡಿಬರುವುದು,” ಎಂದರು.

ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಪ್ರಸ್ತುತ ಕಾರ್ಯದರ್ಶಿ ಡಾ. ಜಾನ್ ಡಿಸಿಲ್ವಾ ಮಾತನಾಡಿ, “ಧರ್ಮಕ್ಷೇತ್ರದ ಈ ಆಚರಣೆಯಲ್ಲಿ ಪ್ರತೀ ಧರ್ಮಕೇಂದ್ರದಿಂದ ಎಲ್ಲಾ ಭಕ್ತರ ಪ್ರತಿನಿಧಿಗಳನ್ನು ಒಟ್ಟುಗೂಡಿಸಲು ಉದ್ದೇಶಿಸಿದ್ದೇವೆ” ಎಂದರು.

“ಈ ಸುವರ್ಣ ಮಹೋತ್ಸವದ ಆಚರಣೆಯ ಫಲವಾಗಿ, ನಮ್ಮ ಸಮುದಾಯದಲ್ಲಿ ನಾಯಾಕರನ್ನು ರೂಪಿಸಲು ಹಾಗೂ ಅವರನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಲು ಬಯಸುತ್ತೇವೆ” ಎಂದು ಶ್ರೀ ನೊರೊನ್ಹಾ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲನಾ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದ ಮಾಜಿ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಗುವುದು.

ಬೆಳಗ್ಗೆ 8.45ಕ್ಕೆ ಪವಿತ್ರ ಬಲಿಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಸುವರ್ಣ ಮಹೋತ್ಸವದ ಸವೆನೆನಪಿಗಾಗಿ ಸ್ಮರಣ ಸಂಚಿಕೆ ಹಾಗೂ ಕಿರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುವುದು.

ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಬಗ್ಗೆ

ಪೋಪ್ ಜಾನ್ XXI|| ಕರೆದ ದ್ವಿತೀಯ ವ್ಯಾಟಿಕನ್ ಕೌನ್ಸಿಲ್ 1962 ರಿಂದ 1965 ರವರೆಗೆ ನಾಲ್ಕು ಅವಧಿಗಳವರೆಗೆ ನಡೆಯಿತು.

ದ್ವಿತೀಯ ವ್ಯಾಟಿಕನ್ ಕೌನ್ಸಿಲ್ ನಂತರ ಮಂಗಳೂರಿನ ಸ್ಥಳೀಯ ಚರ್ಚ್‌ನಲ್ಲಿ ಶ್ರೀಸಾಮನ್ಯರ ಒಳಗೊಳ್ಳುವಿಕೆ. ಹೊಸ ಪ್ರಾಮುಖ್ಯತೆಯನ್ನು ಪಡೆಯಿತು. ಪರಿಷತ್ತಿನ ಕೊನೆಯ ಅಧಿವೇಶನದಲ್ಲಿ ಮಂಗಳೂರಿನ ಬಿಷಪ್‌ ಅತೀ ವಂದನೀಯ ಡಾ. ಬಾಸಿಲ್ ಸಾಲ್ವದೊರ್ ಡಿಸೋಜಾ ಅವರು ಭಾಗವಹಿಸಿದ್ದರು. ಧರ್ಮಕ್ಷೇತ್ರಕ್ಕೆ ಹಿಂದಿರುಗಿದ ನಂತರ, ಅವರ ಆಡಳಿತಾವಧಿಯಲ್ಲಿ ಮಂಗಳೂರಿನ ಸ್ಥಳೀಯ ಧರ್ಮಸಭೆಯಲ್ಲಿ ನವೀಕರಣವನ್ನು ಪ್ರಾರಂಬಿಸಿದರು. ಧರ್ಮಾಚರಣೆಯ ನವೀಕರಣದ ಜೊತೆಗೆ ಧರ್ಮಸಭೆಯ ಆಡಾಳಿತಾವ್ಯವಸ್ಥೆಯಲ್ಲಿ ಯಾಜಕರು, ಕನ್ಯಾ ಸ್ತ್ರೀಯರ ಹಾಗೂ ಸೀಸಾಮಾನ್ಯರ ಭಾಗವಹಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಯಿತು.

1970 ರ ದಶಕದಲ್ಲಿ ಪಾಲನಾ ಪರಿಷದ್ (= ಕೌನ್ಸಿಲ್‌) ಅನ್ನು ಧರ್ಮಕೇಂದ್ರ, ವಲಯ ಮತ್ತು ಧರ್ಮಕ್ಷೇತ್ರದ ಮಟ್ಟದಲ್ಲಿ ರಚಿಸಲಾಯಿತು. ಜೊತೆಜೊತೆಗೆ, ಧರ್ಮಕೇಂದ್ರದ ಹಣಕಾಸು ಮಂಡಳಿಗಳ ರಚನೆ, ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗಳ ಮರುಸಂಘಟನೆಯ ಮೂಲಕ ಶ್ರೀಸಾಮಾನ್ಯರ ಭಾಗವಹಿಸುವಿಕೆಯನ್ನು ಬಲಪಡಿಸಲಾಯಿತು. ಇದರಿಂದಾಗಿ ಕಳೆದ 30 ವರುಷಗಳಲ್ಲಿ ಮಂಗಳೂರಿನ ಸ್ಥಳೀಯ ಧರ್ಮಸಭೆಯು ಸಮುದಾಯವನ್ನು ಕಟ್ಟುವ ಹಾಗೂ ಬಲಪಡಿಸುವ ವಿಷಯದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಲು ಸಾಧ್ಯವಾಯಿತು.

ಸಂಪರ್ಕ:

ಶ್ರೀ ಎಂ.ಪಿ. ನೊರೊನ್ಹಾ, ಸಂಚಾಲಕರು – 9845543531

ಡಾ ಜಾನ್ ಇ ಡಿಸಿಲ್ವಾ, ಕಾರ್ಯದರ್ಶಿ – 9448107667

ರೆ. ಫಾ. ಜೆ. ಬಿ ಸಲ್ದಾನ್ಹಾ, ಸಾರ್ವಜನಿಕ ಸಂಪರ್ಕಾಧಿಕಾರಿ – 9448038051

ಶ್ರೀ ರಾಮ್ ಕ್ಯಾಸ್ಟೆಲಿನೊ, ಸಾರ್ವಜನಿಕ ಸಂಪರ್ಕಾಧಿಕಾರಿ – 9845084707

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ