ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್
![ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್](https://urtv24.com/wp-content/uploads/2023/04/pro.webp)
ಹಾವೇರಿ: ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಹಾನಗಲ್ ಪಟ್ಟಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ 76 ರ ಹರೆಯದ ಹಿರಿಯ ನಾಯಕ ಮನೋಹರ ತಹಶೀಲ್ದಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಏಪ್ರಿಲ್ 7 ರಂದು ಹಾನಗಲ್ ಪಟ್ಟಣಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದ್ದು ಈ ವೇಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.
ನನಗೆ ನೋವು ಕೊಟ್ಟರೂ ಪಕ್ಷಕ್ಕಾಗಿ ಕೆಲಸ ಮಾಡಿದೆ. ಉಪಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಹೊರಗಿನವರು, ಒಳಗಿನವರು ಯಾರು ಇರಲಿಲ್ಲ.ಎಂಎಲ್ ಸಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು.ಸೂಟ್ ಕೇಸ್ ತಗೊಂಡು ಹಿಂದೆ ಸರದಿದ್ದಾರೆ ಎಂದು ಅಪಪ್ರಚಾರ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ನನ್ನನ್ನ ಕೊಂಡುಕೊಳ್ಳುವ ಗಂಡಸು ಭೂಮಿಯ ಮೇಲೆ ಹುಟ್ಟಿಲ್ಲ.ಅವರಿಗೆ ತಾಕತ್ ಇದ್ದರೆ ನನ್ನನ್ನ ಸ್ಪರ್ಧೆ ಯಿಂದ ಹಿಂದೆ ಸರಿಸಲಿ.ನನಗಾದ ಅನ್ಯಾಯಕ್ಕೆ ಅಲ್ಲಿಂದ ಸಿಡಿದು ಹೊರ ಬಂದಿದ್ದೇನೆ. ಕೈ ಮುಗಿದು ಕಾಲಿಗೆ ಬಿದ್ದು ಟಿಕೆಟ್ ಕೇಳಿದೆ. ಅವರಿಗೆ ಕರುಣೆ ಇಲ್ಲ, ಹೃದಯ ಇಲ್ಲ, ಅವರ ಮನಸ್ಸು ಮರಗಲೆ ಇಲ್ಲ. ಇದು ನನ್ನ ಕೊನೆ ಚುನಾವಣೆ ಒಂದು ಅವಕಾಶ ಕೊಡಿ ಎಂದು ಕೇಳಿದೆ. ಗಲ್ಲಿಗೆ ಹಾಕುವವನಿಗೆ ಕೊನೆ ಆಸೆ ಏನು ಅಂತಾ ಕೇಳುತ್ತಾರೆ.ಆದರೆ ನನಗೆ ಹಾಗೂ ಕೇಳಲಿಲ್ಲ, ಸೌಜನ್ಯಕ್ಕೂ ಕೇಳಲಿಲ್ಲ. ಚೆಂಡಿಗೆ ಕೈ ಹಾಕಿ ಹೊರ ಹಾಕಿದರು. ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತೀದ್ದೇನೆ.
ನನ್ನ ಮುಂದೆ ಬಹಳಷ್ಟು ಪಕ್ಷಗಳಿದ್ದವು. ನೀವೆ ನನಗೆ ಸುಪ್ರೀಂ, ನೀವು ನನಗೆ ಬಿ ಫಾಮ್೯ ಕೊಡೊರು.ಪಕ್ಷೇತರ ಯಾಕಾಗಬಾರದು ಎನ್ನುವ ಚಿಂತನೆ ಬಂತು. ಆಗ ನಾನು ಒಂಟಿ ಸಿಪಾಯಿ ಆಗುತ್ತೇನೆ. ಪಕ್ಷೇತರ ಬೇಡ, ಪಕ್ಷದಿಂದ ನಿಲ್ಲುವ ತೀರ್ಮಾನ ಮಾಡಿದೆವು. ಜೆಡಿಎಸ್ ಆಯ್ಕೆ ಮಾಡಿದ್ರೆ ಒಳ್ಳೆಯದು ಅಂತ ಹೇಳಿದರು. ಏಪ್ರಿಲ್ 7 ರಂದು ಪಂಚರತ್ನ ಯಾತ್ರೆ ಹಾನಗಲ್ ಗೆ ಬರುತ್ತದೆ.ನೀವು ಒಪ್ಪಿಗೆ ಕೊಟ್ಟರೆ, ನಾವು ನೀವು ಸೇರಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಏಪ್ರಿಲ್ 7 ಕ್ಕೆ ಪಂಚರತ್ನ ಯಾತ್ರೆ ಸ್ವಾಗತಿಸೋಣ. ಅಂದು ಎಲ್ಲರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಮತ್ತೆ ಶಾಸಕನಾಗುವ ಹುಚ್ಚು ನನ್ನಲ್ಲಿ ಇರಲಿಲ್ಲ. ಸ್ವಾಭಿಮಾನಕ್ಕಾಗಿ ನಿಂತಿದ್ದೇನೆ, ತಾಲೂಕಿನವರೇ ಮುಂದಿನ ಶಾಸಕರಾಗಬೇಕು ಎಂದು ಹೇಳಿದರು.