ಜೂನ್ ಮೊದಲ ವಾರ ಕೇರಳಕ್ಕೆ ಮುಂಗಾರು ಆಗಮನ!
Twitter
Facebook
LinkedIn
WhatsApp
ನವದೆಹಲಿ: ಈ ಬಾರಿಯ ಮುಂಗಾರು ಆಗಮನ ಸಾಮಾನ್ಯವಾಗಿರಲಿದ್ದು ಜೂನ್1ಕ್ಕೂ ಮುಂಚಿತವಾಗಿ ಮುಂಗಾರು ಆಗಮನ ಸಾಧ್ಯತೆ ಇಲ್ಲ.
ಕೇರಳಕ್ಕೆ ಜೂನ್4ರಂದು ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ಅಲ್ಲದೇ, ಮುಂದಿನವಾರ ಅರಬ್ಬೀ ಸಮದ್ರದಲ್ಲಿ ಯಾವುದೇ ಚಂಡಮಾರುತದ ಸಂಭವನೀಯತೆಯೂ ವರದಿಯಾಗಿಲ್ಲ. ಈ ಹಿನ್ನೆಲೆ ಎಲ್ಲೆಡೆ ಮುಂಗಾರಿನ ಸಮಾನ ಹಂಚಿಕೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದಲ್ಲಿ ಕೃಷಿಯ ಮೇಲೆ ಹೆಚ್ಚಿನ ಪರಿಣಾಮವೇನು ಬೀರುವುದಿಲ್ಲವೆಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ಬೇಗೆಗೆ ಬ್ರೇಕ್ ನೀಡಿ, ಶುಕ್ರವಾರ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಇನ್ನೂ ಕೆಲ ದಿನಗಳು ಮಳೆಯಾಗುವ ಹಿನ್ನೆಲೆ ಮೇ 30ರ ವರೆಗೆ ದೆಹಲಿಗೆ ಬಿಸಿಲ ಬೇಗೆಯಿಂದ ಬ್ರೇಕ್ ಸಿಗಲಿದೆ ಎಂದಿದ್ದಾರೆ.