ಶುಕ್ರವಾರ, ಮಾರ್ಚ್ 29, 2024
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜಿಯೋದಿಂದ ಮತ್ತೊಂದು ಐತಿಹಾಸಿಕ ಆಫರ್!..ಮತ್ತೆ ಬೆಚ್ಚಿಬಿತ್ತು ಭಾರತೀಯ ಟೆಲಿಕಾಂ ಲೋಕ!

Twitter
Facebook
LinkedIn
WhatsApp
ಜಿಯೋದಿಂದ ಮತ್ತೊಂದು ಐತಿಹಾಸಿಕ ಆಫರ್!..ಮತ್ತೆ ಬೆಚ್ಚಿಬಿತ್ತು ಭಾರತೀಯ ಟೆಲಿಕಾಂ ಲೋಕ!

ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ದೇಶದಲ್ಲಿ ಮತ್ತೊಂದು ಐತಿಹಾಸಿಕ ಘೋಷಣೆ ಮಾಡುವ ಮೂಲಕ ದೇಶದ ಟೆಲಿಕಾಂ ಲೋಕವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಕಳೆದ ಐದು ವರ್ಷಗಳ ಹಿಂದೆ ಜಿಯೋ 4G ಸೇವೆಗಳು ಆರಂಭವಾದಾಗ ಎಲ್ಲಾ 4G ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬರೋಬ್ಬರಿ ಒಂದು ವರ್ಷ ಉಚಿತ ಸೇವೆಯನ್ನು ಒದಗಿಸಲಾಗಿತ್ತು. ಇದೀಗ ಹೊಸದಾಗಿ ಜಿಯೋ 5G ಸೇವೆ ಪಡೆಯುತ್ತಿರುವ ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ಪ್ರಕಟಿಸಲಾಗಿದೆ. ದೇಶದಲ್ಲಿ ಜಿಯೋ 5G ಸೇವೆ ಪಡೆಯುವ ಎಲ್ಲಾ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರು ಪ್ರಸ್ತುತ ಕನಿಷ್ಠ 239 ರೂ. ರೀಚಾರ್ಜ್ ಯೋಜನೆಗೆ ಚಂದಾದಾರರಾಗಿದ್ದರೆ ಅನಿಯಮಿತ 5G ಡೇಟಾ ದೊರೆಯಲಿದೆ ಎಂದು ಜಿಯೋ ಕಂಪೆನಿ ತಿಳಿಸಿದೆ.

 
 

ಪ್ರಸ್ತುತ ಜಿಯೋ 4G ಸೇವೆಯನ್ನು ಬಳಸುತ್ತಿರುವ ಗ್ರಾಹಕರು 5G ಸೇವೆಗಳನ್ನು ಬಳಸುವುದಕ್ಕಾಗಿ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಿಸಿರಬೇಕು. 5G ಸಾಮರ್ಥ್ಯದ ಸ್ಮಾರ್ಟ್‌ಫೋನ್ ಹೊಂದಿರುವ ಜಿಯೋ 4G ಗ್ರಾಹಕರು 5G ಸೇವೆ ಪಡೆಯಲು ಕಂಪೆನಿಯಿಂದ ಆಹ್ವಾನವನ್ನು ಸ್ವೀಕರಿಸುತ್ತಾರೆ. ಈ ವೇಳೆ ಅವರು 239 ರೂ.ಗಿಂತ ಹೆಚ್ಚಿನ ಬೆಲೆಯ ಯೋಜನೆಗೆ ಗ್ರಾಹಕರಾಗಿದ್ದರೆ ಅನಿಯಮಿತ 5G ಡೇಟಾ ದೊರೆಯಲಿದೆ. ಜಿಯೋ ಮುಂದಿನ ಪ್ರಕಟಣೆ ಹೊರಡಿಸುವವರೆಗೂ ಈ ಆಫರ್ ಇರುತ್ತದೆ. ಆದರೆ, ಇದು ಜಿಯೋ 5G ಸೇವೆಗಳನ್ನು ಪಡೆಯಲು ಪಾವತಿಸಬೇಕಾದ ನಿರ್ಧಿಷ್ಟ ಬೆಲೆಯಲ್ಲ. ಈ ಆಫರ್ ಮುಂದಿನ ಆರು ತಿಂಗಳಿನಿಂದ ಒಂದು ವರ್ಷವೇ ಇರಬಹುದು ಎಂದು ಜಿಯೋ ಅಧಿಕಾರಿಗಳು ತಿಳಿಸಿದ್ದಾರೆ.

 
 
ಅದ್ದೂರಿಯಾಗಿ ನಡೆದ ನಟಿ ಅದಿತಿ-ಯಶಸ್ವಿ ಆರತಕ್ಷತೆ ಕಾರ್ಯಕ್ರಮ; ಯಶ್-ರಾಧಿಕಾ ಸೇರಿ ಹಲವರು ಭಾಗಿ

ಜಿಯೋ ಆರಂಭಿಸಿರುವ ಈ ಪ್ರಾಯೋಗಿಕ 5ಜಿ ಸೇವೆಯಲ್ಲಿ ತನ್ನ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ ಅಥವಾ ಮೊಬೈಲ್ ಬದಲಿಸದೆಯೇ ಈ 5ಜಿ ನೆಟ್‌ವರ್ಕ್ ಬಳಸಬಹುದು. ಆದರೆ, 5ಜಿ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ನಿಮ್ಮ 5G ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಬೇಕು ಮತ್ತು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ 5G ನೆಟ್‌ವರ್ಸ್ ಸೆಟ್ಟಿಂಗ್ ಸಕ್ರೀಯಗೊಳಿಸುವ ಮೂಲಕ 1Gbps + ವೇಗದಲ್ಲಿ 5G ಸೇವೆಗಳನ್ನು ಪಡೆಯಲು ಅವಕಾಶ ಸಿಗಲಿದೆ

ರಿಲಯನ್ಸ್ ಜಿಯೋ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾಯೋಗಿಕವಾಗಿ 5G ಸೇವೆಗಳನ್ನು ಆರಂಭಿಸಿದೆ. 2022 ರ ವಿಜಯದಶಮಿ ಹಬ್ಬದ ಶುಭ ದಿನದಂದೇ ಜಿಯೋ ತನ್ನ ‘ವೆಲ್ಕಮ್ ಆಫರ್’ ಘೋಷಣೆ ಜೊತೆಗೆ ದೇಶದಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ 8 ನಗರಗಳಲ್ಲಿ ಜಿಯೋ 5ಜಿ ಸೇವೆಯನ್ನು ಪ್ರಸ್ತುತಪಡಿಸಿದೆ. ನೀವು ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಿಸಿ 4G ಸೇವೆಯನ್ನು ಬಳಸುತ್ತಿದ್ದೀರಾ ಎಂದುಕೊಳ್ಳಿ. ಇದೀಗ ನೀವು ಜಿಯೋ 5G ಸೇವೆ ಪಡೆಯಲು ಅರ್ಹರಾಗುತ್ತೀರಾ. ನೀವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಿಯೋವಿನ ಆಹ್ವಾನವನ್ನು ಪಡೆದು 5G ಗೆ ಬದಲಾಯಿಸಿದಾಗ, ಈ ಯೋಜನೆಯು ಅನಿಯಮಿತ 5G ಡೇಟಾವನ್ನು ನೀಡುವ ಯೋಜನೆಯಾಗಿ ಬದಲಾಗುತ್ತದೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ