ಜಲ್ಲಿಕಟ್ಟು ಸ್ಪರ್ಧೆ – ಹೋರಿ ತಿವಿದು ಮೃತಪಟ್ಟ ಬಾಲಕ
Twitter
Facebook
LinkedIn
WhatsApp
ಚೆನ್ನೈ: ಜಲ್ಲಿಕಟ್ಟು (Jallikattu) ಸ್ಪರ್ಧೆ ನೋಡಲು ಬಂದಿದ್ದ ಬಾಲಕನಿಗೆ ಹೋರಿ ತಿವಿದು ಬಾಲಕ (Boy) ಮೃತಪಟ್ಟ ಘಟನೆ ಧರ್ಮಪುರಿಯ (Dharmapuri) ತಡಂಗಂ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಗೋಕುಲ್ (14) ಎಂದು ಗುರುತಿಸಲಾಗಿದೆ. ಗೋಕುಲ್ ಸಂಬಂಧಿಕರೊಂದಿಗೆ ತಡಂಗಂ ಗ್ರಾಮದಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಸ್ವರ್ಧೆಗೆ ಆಗಮಿಸಿದ್ದ. ಈ ವೇಳೆ ಸ್ಪರ್ಧೆಯಲ್ಲಿದ್ದ ಹೋರಿಯೊಂದು ಕೂತಿದ್ದ ಗೋಕುಲ್ ಹೊಟ್ಟೆಗೆ ತಿವಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗೋಕುಲ್‍ನನ್ನು ಧರ್ಮಪುರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಬಾಲಕ ಮೃತಪಟ್ಟಿದ್ದ.
ಈ ಬಗ್ಗೆ ಧರ್ಮಪುರಿ ಠಾಣೆ ಪೊಲೀಸರು ಗೋಕುಲ್ ಗಾಯಗೊಂಡ ಬಗ್ಗೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ವರ್ಷ ಜಲ್ಲಿಕಟ್ಟು ಸ್ವರ್ಧೆಗೆ ತಮಿಳುನಾಡಿನಲ್ಲಿ ಈವರೆಗೆ ನಾಲ್ಕು ಜನ ಬಲಿಯಾಗಿದ್ದಾರೆ.