ಜನಪ್ರಿಯ ನಟಿ ವೈಭವಿ ಉಪಾಧ್ಯಾಯ ಕಾರು ಅಪಘಾತದಲ್ಲಿ ಮೃತ್ಯು!
ಮುಂಬೈ: ಜನಪ್ರಿಯ ಟಿವಿ ಶೋ ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ವೈಭವಿ ಉಪಾಧ್ಯಾಯ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಈ ದುಃಖದ ಸುದ್ದಿಯನ್ನು ನಿರ್ಮಾಪಕ ಜೆಡಿ ಮಜೇಥಿಯಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಸಾರಾಭಾಯ್ ವರ್ಸಸ್ ಸಾರಾಭಾಯಿಯಲ್ಲಿ ಜಾಸ್ಮಿನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಉತ್ತಮ ನಟಿ ಆತ್ಮೀಯ ಸ್ನೇಹಿತೆ ವೈಭವಿ ಉಪಾಧ್ಯಾಯ ಅವರು ನಿಧನರಾದರು ಎಂದು ಬರೆದಿದ್ದಾರೆ.
ವೈಭವಿ 2020 ರಲ್ಲಿ ‘ಛಪಾಕ್’ ಚಿತ್ರ ಮತ್ತು ‘ತಿಮಿರ್’ (2023) ನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಕೆಲಸ ಅವರು ಮಾಡಿದ್ದರು.
ಆಕೆಯ ಸಾವಿನ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Life is so unpredictable.
— JDMajethia (@JDMajethia) May 23, 2023
A very fine actress ,dear friend Vaibhavi upadhyay popularly known as“ jasmine “of Sarabhai vs Sarabhai passed away.She met with an accident in north. Family will bring her to mumbai tomorrow morning around 11 am for last rites . RIP vaibhavi ?