ಜಡೇಜಾ ಸ್ಪಿನ್ ಮೋಡಿ, ರಹಾನೆ ಸ್ಫೋಟಕ ಬ್ಯಾಟಿಂಗ್; ಮುಂಬೈ ವಿರುದ್ಧ ಚೆನ್ನೈಗೆ 7 ವಿಕೆಟ್ ಗೆಲುವು!
ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂ ನಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ ಬಳಗ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆ ಹಾಕಿತು. ರೋಹಿತ್ 21, ಇಶಾನ್ ಕಿಶನ್ 32 ರನ್ ಗಳಿಸಿ ಔಟಾದರು.
ಕ್ಯಾಮರೂನ್ ಗ್ರೀನ್12, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸೂರ್ಯಕುಮಾರ್ 1 ರನ್ ಗೆ ಆಟ ಮುಗಿಸಿದರು. ತಿಲಕ್ ವರ್ಮಾ 22, ಟಿಮ್ ಡೇವಿಡ್ 31, ಹೃತಿಕ್ ಶೋಕಿನ್ ಔಟಾಗದೆ 18 ರನ್ ಗಳಿಸಿದರು. ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದರು. ತುಷಾರ್ ದೇಶಪಾಂಡೆ ಮತ್ತು ಸ್ಯಾಂಟ್ನರ್ ತಲಾ 2 ವಿಕೆಟ್ ಪಡೆದರು. ಸಿಸಂದ ಮಗಲಾ1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಚೆನ್ನೈ ಮೊದಲ ಓವರ್ ನಲ್ಲಿ ಶೂನ್ಯಕ್ಕೆ ಮೊದಲ ವಿಕೆಟ್ ಕಳೆದು ಕೊಂಡು ಆಘಾತ ಅನುಭವಿಸಿತು. ಆ ಬಳಿಕ ತಾಳ್ಮೆಯ ಆಟವಾಡಿದ ರುತುರಾಜ್ ಗಾಯಕ್ವಾಡ್ನಾಟ್ ಔಟಾಗದೆ 40 ರನ್ ಗಳಿಸಿದರು.
ಭರ್ಜರಿ ಆಟವಾಡಿದ ಅಜಿಂಕ್ಯ ರಹಾನೆ 27 ಎಸೆತಗಳಲ್ಲಿ 61 ರನ್ ಗಳಿಸಿ ಮಿಂಚಿದರು. ಶಿವಂ ದುಬೆ 28, ಅಂಬಟಿ ರಾಯುಡು ಔಟಾಗದೆ 20 ರನ್ ಗಳಿಸಿದರು.
ಚೆನ್ನೈ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆದ್ದಿದೆ. ಉದ್ಘಾಟನ ಪಂದ್ಯದಲ್ಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ಗೆ 5 ವಿಕೆಟ್‌ಗಳಿಂದ ಸೋತರೆ, ಲಕ್ನೋ ವಿರುದ್ಧ ತನ್ನದೇ ಅಂಗಳದಲ್ಲಿ 12 ರನ್ನುಗಳ ರೋಚಕ ಜಯ ಸಾಧಿಸಿತ್ತು. ಮುಂಬಯಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.ಬೆಂಗಳೂ ರಿನ ಮೊದಲ ಪಂದ್ಯದಲ್ಲಿ ಅದು ಆರ್‌ಸಿಬಿಗೆ 8 ವಿಕೆಟ್‌ಗಳಿಂದ ಶರಣಾಗಿತ್ತು.