ಜಡೇಜಾಗೆ ಐಸಿಸಿಯಿಂದ ಬಿಗ್ ಶಾಕ್!
ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ 2023ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭವನ್ನು ಮಾಡಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಮೂರೇ ದಿನಗಳಲ್ಲಿ ಮುಗಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್ಗಳ ದಾಳಿಗೆ ತತ್ತರಿಸಿದ್ದ ಆಸೀಸ್, 2ನೇ ಇನ್ನಿಂಗ್ಸ್ನಲ್ಲಿಯೂ ಬೇಗನೇ ಔಟ್ ಆಗುವ ಮೂಲಕ ಸೋಲನ್ನಪ್ಪಿತು. ಕೇವಲ 2 ಗಂಟೆಗಳಲ್ಲಿ 10 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಾಗೂ 132 ರನ್ ಗಳಿಂದ ಹೀನಾಯ ಸೋಲು ಕಂಡಿತು.
ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್ಗಳ ದಾಳಿಗೆ ತತ್ತರಿಸಿದ್ದ ಆಸೀಸ್, 2ನೇ ಇನ್ನಿಂಗ್ಸ್ನಲ್ಲಿಯೂ ಬೇಗನೇ ಔಟ್ ಆಗುವ ಮೂಲಕ ಸೋಲನ್ನಪ್ಪಿತು. ಕೇವಲ 2 ಗಂಟೆಗಳಲ್ಲಿ 10 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಾಗೂ 132 ರನ್ ಗಳಿಂದ ಹೀನಾಯ ಸೋಲು ಕಂಡಿತು.
ಭರ್ಜರಿ ಗೆಲುವಿನ ಖುಷಿಯಲ್ಲಿರುವ ಟೀಂ ಇಂಡಿಯಾಗೆ ಐಸಿಸಿ ಶಾಕ್ ನೀಡಿದೆ. ಭರ್ಜರಿ ಕಂಬ್ಯಾಕ್ ಮಾಡಿರುವ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರ ಬೆನ್ನಲ್ಲೇ ಐಸಿಸಿ ಜಡ್ಡುಗೆ ಬಿಗ್ ಶಾಕ್ ನೀಡಿದೆ. ಪಂದ್ಯ ಶುಲ್ಕವನ್ನು ಶೇ.25ರಷ್ಟು ಕಡಿತಗೊಳಿಸಿದೆ. ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ನಲ್ಲಿ ಅಂಪೈರ್ ಗಳ ಅನುಮತಿ ಪಡೆಯದೇ ಬೆರಳುಗಳಿಗೆ ಕ್ರೀಮ್ ಹಚ್ಚಿಕೊಂಡಿರುವುದು ಅಂಪೈರ್‌ಗಳ ಕೋಪಕ್ಕೆ ಕಾರಣವಾಗಿತ್ತು. ಮೊದಲ ದಿನದ ಆಟದ 46ನೇ ಓವರ್‌ಗೂ ಮುನ್ನ ರವೀಂದ್ರ ಜಡೇಜಾ ಬೆರಳಿಗೆ ಕೆನೆ ತರಹದ ವಸ್ತುವನ್ನು ಹಚ್ಚಿಕೊಂಡಿದ್ದರು. ಇದು ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದರೆ, ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ಮಾಜಿ ಕ್ರಿಕೆಟಿಗರು ಬಾಲ್ ಟ್ಯಾಂಪರಿಂಗ್ ಎಂದು ಆರೋಪಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಐಸಿಸಿ, ಅಂಪೈರ್‌ಗಳ ಅನುಮತಿಯಿಲ್ಲದೆ ಬೆರಳುಗಳ ಮೇಲೆ ಕ್ರೀಂ ಹಚ್ಚಿಕೊಂಡಿರುವುದು ತಪ್ಪು. ಆದರೆ ಅವರು ಯಾವುದೇ ರೀತಿಯ ಬಾಲ್ ಟ್ಯಾಂಪರಿಂಗ್ ಮಾಡಿಲ್ಲ ಎಂದು ಹೇಳಿದೆ. ಅಂಪೈರ್ ಗಳಿಗೆ ಮಾಹಿತಿ ನೀಡಿ ಅವರ ಅನುಮತಿ ಪಡೆದು ಇಂತಹ ಕ್ರೀಮ್ ಗಳನ್ನು ಹಚ್ಚಿಕೊಳ್ಳಬಹುದು. ಆದರೆ ಇದೀಗ ಜಡೇಜಾ ಅಂಪೈರ್ಗಳಿಗೆ ಮಾಹಿತಿ ನೀಡದೇ ಕ್ರೀಮ್ ಹಚ್ಚಿಕೊಂಡಿದ್ದು, ತಪ್ಪು ಎನ್ನಲಾಗಿದೆ.
ವರ್ಷ ಜಡೇಜಾ ಎರಡು ಡಿಮೆರಿಟ್ ಅಂಕಗಳನ್ನು ಪಡೆದರೆ, ಅವರು ಒಂದು ಪಂದ್ಯದ ನಿಷೇಧವನ್ನು ಎದುರಿಸಬೇಕಾಗುತ್ತದೆ. ಈ ಪಂದ್ಯದಲ್ಲಿ ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ 5 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಪಡೆದರು. ಅವರು 70 ರನ್ ಗಳಿಸಿದ್ದರು. ಹೀಗಾಗಿ, ಜಡೇಜಾ ಇನ್ನೊಮ್ಮೆ ಡಿಮೆರಿಟ್ ಅಂಕ ಪಡೆದಲ್ಲಿ ಒಂದು ಪಂದ್ಯದಿಂದ ಹೊರಗುಳಿಬೇಕಾಗುತ್ತದೆ. ಸದ್ಯ ಜಡೇಜಾ ಭರ್ಜರಿ ಫಾರ್ಮ್ನ್ಲಲಿದ್ದಾರೆ