ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಚೈತ್ರ ಕುಂದಾಪುರ ವಂಚನೆ ಪ್ರಕರಣ: ಸ್ವಾಮೀಜಿಯ ಖತರ್ನಾಕ್ ಪ್ಲಾನ್; ಎಕರೆ ಗಟ್ಟಲೆ ಭೂಮಿ, ಪೆಟ್ರೋಲ್ ಬಂಕ್ ನಲ್ಲಿ 40 ಲಕ್ಷ ಹೂಡಿಕೆ..!

Twitter
Facebook
LinkedIn
WhatsApp
ಚೈತ್ರ ಕುಂದಾಪುರ ವಂಚನೆ ಪ್ರಕರಣ: ಸ್ವಾಮೀಜಿಯ ಖತರ್ನಾಕ್ ಪ್ಲಾನ್; ಎಕರೆ ಗಟ್ಟಲೆ ಭೂಮಿ, ಪೆಟ್ರೋಲ್ ಬಂಕ್ ನಲ್ಲಿ 40 ಲಕ್ಷ ಹೂಡಿಕೆ..!

ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ (Chaitra Kundapura case) ಮತ್ತು ಇತರ ಐವರನ್ನು ಬಂಧಿಸಿದ ಎರಡು ದಿನಗಳ ನಂತರ, ಮತ್ತೊಬ್ಬ ಆರೋಪಿ ಸ್ವಾಮೀಜಿ ಕುರಿತು ಹೆಚ್ಚಿನ ವಿವರಗಳು ಬಹಿರಂಗವಾಗಿವೆ. ದೂರುದಾರ ಗೋವಿಂದ್ ಬಾಬು ಪೂಜಾರಿಯಿಂದ 1.5 ಕೋಟಿ ರೂ. ಪಡೆದಿದ್ದ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ  ಕಳೆದ ಕೆಲವು ತಿಂಗಳಲ್ಲಿ ಕೃಷಿ ಜಮೀನು ಖರೀದಿಸಿದ್ದರು. ಅಲ್ಲದೆ, ಪೆಟ್ರೋಲ್ ಬಂಕ್‌ನಲ್ಲಿ ಹೂಡಿಕೆ ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ.

ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಶ್ರೀ ಚೈತ್ರಾ ಮತ್ತು ಇತರ ಆರು ಮಂದಿಯನ್ನು ಬಂಧಿಸಿದ ನಂತರ ತಲೆಮರೆಸಿಕೊಂಡಿದ್ದಾರೆ.ಬೈಂದೂರಿನಿಂದ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಐದು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರುದಾರ ಪೂಜಾರಿ ಅವರು ಒಟ್ಟು ಎಂಟು ಮಂದಿಯನ್ನು ಹೆಸರಿಸಿದ್ದರು. ಪೂಜಾರಿಯವರು ಕಂತುಗಳಲ್ಲಿ ಹಣ ಪಾವತಿಸಿದ್ದು, ಅದರಲ್ಲಿ ಒಂದನ್ನು ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಅವರಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಚೈತ್ರಾ ಅವರು ದೂರುದಾರರನ್ನು ಮಠಕ್ಕೆ ಕರೆದೊಯ್ದು ಶ್ರೀಗಳಿಗೆ ಪರಿಚಯಿಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸ್ವಾಮೀಜಿ ಜೀವನಶೈಲಿ ಬದಲಾಗಿತ್ತು. 68 ಲಕ್ಷ ರೂ. ಕೊಟ್ಟು ಅವರ ಮಾವನ ಹೆಸರಿನಲ್ಲಿ ಎಂಟು ಎಕರೆ ಜಮೀನು ಖರೀದಿಸಿದ್ದರು ಎನ್ನಲಾಗಿದೆ. ಚಂದ್ರಪ್ಪ ಎಂಬುವವರ ಒಡೆತನದ ಪೆಟ್ರೋಲ್ ಬಂಕ್​ನಲ್ಲಿಯೂ 40 ಲಕ್ಷ ರೂ. ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ದೂರುದಾರರು ತಮ್ಮ ಹಣವನ್ನು ಹಿಂಪಡೆಯಲು ಕೋರಿದ ನಂತರ, ಸ್ವಾಮೀಜಿ ಸ್ಥಳೀಯ ಮುಖಂಡರಿಂದ 10 ಲಕ್ಷ ರೂಪಾಯಿ ಸಾಲವನ್ನು ಕೇಳಿದ್ದರು ಎನ್ನಲಾಗಿದೆ. ಸ್ವಾಮೀಜಿಯು ತಮ್ಮ ಹಣವನ್ನು ಹಿಂದಿರುಗಿಸಲು ಸಮಯ ಕೋರಿದ್ದಾರೆ ಮತ್ತು ಅವರ ಹೆಸರನ್ನು ಬಹಿರಂಗಪಡಿಸದಂತೆ ಕೇಳಿಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದರು. ಸ್ವಾಮೀಜಿಯನ್ನು ಬಂಧಿಸಿದ ನಂತರ ಹಲವಾರು ದೊಡ್ಡ ನಾಯಕರ ಹೆಸರುಗಳನ್ನು ಬಹಿರಂಗಪಡಿಸಲಾಗುವುದು ಎಂದು ಚೈತ್ರಾ ಅವರು ಸಿಟಿ ಕ್ರೈಂ ಬ್ರಾಂಚ್ ಕಚೇರಿಗೆ ಬಂದ ನಂತರ ಗುರುವಾರ ಹೇಳಿದ್ದರು.

ಸ್ವಾಮೀಜಿ ಮತ್ತು ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಇದೇ ವೇಳೆ, ತಮ್ಮ ಮಗಳು ನಿರಪರಾಧಿಯಾಗಿದ್ದು, ಇದು ಆಕೆಯ ವಿರುದ್ಧ ನಡೆದ ಷಡ್ಯಂತ್ರ ಎಂದು ಚೈತ್ರಾ ಅವರ ತಾಯಿ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ