ಚುನಾವಣೆಯಲ್ಲಿ ಪದೇಪದೇ ಸೋಲುತ್ತಿರುವ ಕರಾವಳಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ; ಯಾರಿಗೂ ಎಂಎಲ್ಸಿ ನೀಡದಿರುವ ಬಗ್ಗೆ ನಿರ್ಧಾರ?
ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಡು ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪದೇ ಪದೇ ಸೋಲುತ್ತಿರುವ ಕಾರಣದಿಂದ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಎಂ ಎಲ್ ಸಿ ಚುನಾವಣೆಗಳಲ್ಲಿ ಬಹುತೇಕ ಕರಾವಳಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡದೆ ಇರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಯಾವುದೇ ಚುನಾವಣೆಗಳನ್ನು ಸರಿಯಾಗಿ ಗೆಲ್ಲದ ಕರಾವಳಿ ಜಿಲ್ಲೆಗಳಿಗೆ ಚುನಾವಣೆಗಳನ್ನು ಗೆದ್ದ ನಂತರವೇ ಎಂಎಲ್ಸಿ ಸ್ಥಾನಮಾನಗಳನ್ನು ನೀಡುವ ಬಗ್ಗೆ ಹೈಕಮಾಂಡ್ ಹಾಗೂ ಪಕ್ಷದ ನಾಯಕರು ಬಹುತೇಕ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಬಾರಿ ಮಂಗಳೂರಿನಲ್ಲಿ ಯುಟಿ ಖಾದರ್ ಹಾಗೂ ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಜಯಗಳಿಸಿದ್ದರು. ಉಡುಪಿಯಲ್ಲಿ ಯಾವುದೇ ಕ್ಷೇತ್ರದಲ್ಲಿ ಜಯಗಳಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ.ಈ ರೀತಿ ಕರಾವಳಿಯಲ್ಲಿ ಒಟ್ಟು ಕಾಂಗ್ರೆಸ್ ಬರೋಬ್ಬರಿ 11 ಕ್ಷೇತ್ರಗಳನ್ನು ಕಳೆದುಕೊಂಡಿರುವ ಬಗ್ಗೆ ಹೈಕಮಾಂಡ್ ಬಹಳಷ್ಟು ತಲೆಕೆಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಈ ನೆಲೆಯಲ್ಲಿ ಕರಾವಳಿಗೆ ಯಾವುದೇ ಎಂಎಲ್ಸಿ ಸ್ಥಾನಗಳನ್ನು ನೀಡದೇ ಇರಲು ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ.