ಚುನಾವಣೆಗೆ 400 ದಿನ ಬಾಕಿ, ನಮ್ಮ ಒಳ್ಳೆಯ ಕೆಲಸಗಳ ಬಗ್ಗೆ ಪ್ರಚಾರ ಮಾಡಿ: ಸಚಿವರಿಗೆ ಪ್ರಧಾನಿ ಸೂಚನೆ
ಹೊಸದಿಲ್ಲಿ: ಭಾನುವಾರ ನಡೆದ ಸಚಿವರ ಪರಿಷತ್ತಿನ ಸಭೆಯಲ್ಲಿ ಮೋದಿ ಅವರು ಈ ಕುರಿತು ಹಲವಾರು ಪ್ರಸ್ತುತಿಗಳನ್ನು ಮಂಡಿಸಿದರು. ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುನ್ನ ಮುಂದಿನ 400 ದಿನಗಳಲ್ಲಿ “ಸಮಾಜದ ಎಲ್ಲಾ ವರ್ಗಗಳ” ಜನರನ್ನು ತಲುಪುವಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಪ್ರಧಾನಿ ಸಲಹೆ ನೀಡಿದರು.
ಕೇಂದ್ರ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ರವಿವಾರ ಸಭೆ ನಡೆಸಿದ್ದಾರೆ. ಈ ವೇಳೆ ಮಧ್ಯಮ ವರ್ಗದವರನ್ನು ಸಂಪರ್ಕಿಸಿ, ಅವರಿಗೆ ಲಾಭದಾಯಕವಾಗಿರುವ ಹಾಗೂ ಅಗತ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದ್ದಾರೆ.
ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿರುವಾಗಲೇ ಮೋದಿ, ಕೇಂದ್ರ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿದ್ದು, ಸರಕಾರ ಬಡವರು ಹಾಗೂ ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಎಷ್ಟೋ ಜನರಿಗೆ ಈ ವಿಚಾರ ಗಳು ತಲುಪಿಲ್ಲ. ಈ ವಿಚಾರವನ್ನು ಜನರಿಗೆ ತಿಳಿಸಿ, ಸತ್ಯಾಂಶ ಏನು ಎಂಬುದನ್ನು ಅರ್ಥೈಸುವ ಪ್ರಯತ್ನ ಮಾಡಿ ಎಂದು ತಿಳಿಸಿದ್ದಾರೆ.
2023ರಲ್ಲಿ ನಡೆಯುತ್ತಿರುವ ಕೇಂದ್ರ ಸಚಿವರ ಮೊದಲ ಸಭೆ ಇದಾಗಿದ್ದು, ಸಭೆಯಲ್ಲಿ ಸಚಿವರು ನಿರ್ವ ಹಿಸಬೇಕಿರುವ ಕಾರ್ಯಗಳ ಬಗ್ಗೆ ಪ್ರಸ್ತುತಿಗಳನ್ನು ನೀಡಲಾಗಿದೆ. ಅದರಲ್ಲಿ ಮೋದಿ ಸರಕಾರ ಕಳೆದ 8 ವರ್ಷಗಳಲ್ಲಿ ಯಾವೆಲ್ಲ ಕ್ಷೇತ್ರಗಳಲ್ಲಿ ಯಾವೆಲ್ಲ ಸುಧಾರಣೆಗಳು, ಯೋಜನೆಗಳನ್ನು ತಂದಿದೆ ಎಂಬುದರ ಬಗ್ಗೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.