ಏರ್ಫಿನಿಟಿ ಲಿ ಸಂಸ್ಥೆಯ ಪ್ರಕಾರ ಚೀನಾದಲ್ಲಿ ಈಗ ಪ್ರತಿದಿನ 10 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದು, ಜನವರಿಯಲ್ಲಿ ಇದು 37 ಲಕ್ಷಕ್ಕೆ, ಮಾರ್ಚ್ ವೇಳೆಗೆ ಪ್ರತಿನಿತ್ಯ 42 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ಜಗತ್ತಿನ ಯಾವುದೇ ದೇಶದಲ್ಲಿ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿಲ್ಲ ಎಂದು ತಿಳಿಸಿದೆ.
141 ಕೋಟಿ ಜನ ಸಂಖ್ಯೆ ಇರುವ ಚೀನಾ ಇಲ್ಲಿಯವರೆಗೂ ಅಧಿಕೃತ ಕೊರೊನಾ ಪಾಸಿಟಿವ್, ಸಾವಿನ ಸಂಖ್ಯೆ ನೀಡಿಲ್ಲ. ಆದರೆ ಚೀನಾದ ಪ್ರಾಂತ್ಯಗಳ ಸ್ಥಳೀಯ ವರದಿಯನ್ನು ಕಲೆಹಾಕಿ ಇಡೀ ದೇಶದಲ್ಲಿ ನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ಅಂದಾಜಿಸಿ ಏರ್ಫಿನಿಟಿ ಸಂಸ್ಥೆ ಈ ವರದಿ ಪ್ರಕಟಿಸಿದೆ.
ಚೀನಾದ ಪ್ರಮುಖ ನಗರ ಶಾಂಘೈನಲ್ಲೇ(Shanghai) ಒಟ್ಟು 54 ಲಕ್ಷ ಮಂದಿಗೆ ಕೊರೊನಾ ಬಂದಿದೆ. ಈ ಕಾರಣಕ್ಕೆ ಶಾಂಘೈ ಆಸ್ಪತ್ರೆ, ನಗರದಲ್ಲಿ 2.5 ಕೋಟಿ ಜನರು ಕೋವಿಡ್ಗೆ ತುತ್ತಾಗಲಿದ್ದಾರೆ. ನಮ್ಮ ಬಳಿ ಯಾವುದೇ ಆಯ್ಕೆ ಇಲ್ಲ. ಕೋವಿಡ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುರಂತದ ಯುದ್ಧಕ್ಕೆ ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದೆ.
ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ ಚೀನಾ ಮತ್ತೆ ಕಳ್ಳಾಟ ಆರಂಭಿಸಿದೆ. ಮೃತಪಟ್ಟವರು ಎಲ್ಲಾ ಕೊರೊನಾದಿಂದ ಸಾವನ್ನಪ್ಪಿಲ್ಲ. ಅವರು ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಸಂಖ್ಯೆಯನ್ನು ಕೊರೊನಾ ಸಾವನ್ನಪ್ಪಿದವರ ಸಂಖ್ಯೆಯ ಜೊತೆ ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?