ಗುರುವಾರ, ಏಪ್ರಿಲ್ 25, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಿಕ್ಕಮಗಳೂರು: ಕಳ್ಳಿಹಣ್ಣು ತಿಂದ ಐವರು ಮಕ್ಕಳ ಸ್ಥಿತಿ ಗಂಭೀರ; ಮೆಗ್ಗಾನ್ ಆಸ್ಪತ್ರೆಗೆ ದಾಖಲು

Twitter
Facebook
LinkedIn
WhatsApp
slider img b 02 1

ಕೊಪ್ಪ (ಮಾ.4) : ಪಟ್ಟಣ ಸಮೀಪದ ಅಮ್ಮಡಿಯ ಕ್ಲಾಸಿಕ್‌ ಪ್ಲಾಂಟೇಷನ್‌ನಲ್ಲಿ ಬೇಲಿ ಕಳ್ಳಿ ಗಿಡದ ಹಣ್ಣು ಸೇವಿಸಿ ಐವರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಈ ಮಕ್ಕಳಿಗೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆ(Meggan hospital)ಗೆ ಕರೆದೊಯ್ಯಲಾಗಿದೆ.

ಕಾರ್ಮಿಕ ಪ್ರೇಮ್‌ ಸಿಂಗ್‌(Worker Prem singh) ಮಕ್ಕಳಾದ ಇಶಾನಿ (6), ಇಶಿಕಾ (4), ಆಯುಷ್‌ (3), ಬೈಯಲಾಲ್‌ ಎನ್ನುವವರ ಪುತ್ರಿ ದೀಕ್ಷಾ (4), ಪ್ರೀತಮ್‌ ಎಂಬುವವರ ಪುತ್ರ ರೋನಕ್‌ (3) ಸೇರಿದಂತೆ ಐವರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ.

ಘಟನೆಯ ವಿವರ: ಕೊಪ್ಪ ಅಮ್ಮಡಿಯ ಕ್ಲಾಸಿಕ್‌ ಪ್ಲಾಂಟೆಷನ್‌(Ammadys Classic Plantation)ನಲ್ಲಿ ಕಾಫಿ ಕೊಯ್ಲು ಕೆಲಸಕ್ಕಾಗಿ ಆಗಮಿಸಿದ ಮಧ್ಯಪ್ರದೇಶ ಭೋಪಾಲ್‌ ಮೂಲದ ವಲಸೆ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಎಸ್ಟೇಟ್‌ ಮಾಲೀಕರು ಕೂಲಿ ಲೈನ್‌ ಮನೆಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ. ಕಾರ್ಮಿಕರು ಪುಟ್ಟಮಕ್ಕಳನ್ನು ನೋಡಿಕೊಳ್ಳುವಂತೆ ಮಹಿಳೆಯೊಬ್ಬಳನ್ನು ನೇಮಿಸಿ ಶುಕ್ರವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಕೂಲಿ ಲೈನ್‌ ಆವರಣದಲ್ಲಿ ಆಟವಾಡುತ್ತಿದ್ದ ಪುಟ್ಟಮಕ್ಕಳು ಕುತೂಹಲದಿಂದ ತೋಟದ ಬೇಲಿಯಲ್ಲಿ ಬೆಳೆದಿದ್ದ ಬೇಲಿ ಕಳ್ಳಿ ಗಿಡದ ಹಣ್ಣುಗಳನ್ನು ತಿಂದ ಐವರು ಮಕ್ಕಳು ವಾಂತಿ ಮಾಡಿಕೊಂಡು ತೀವ್ರಅಸ್ವಸ್ಥಗೊಂಡಿದ್ದಾರೆ. ವಿಚಾರ ತಿಳಿಯುತ್ತಲೇ ಕಾರ್ಮಿಕರು ಮಕ್ಕಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ್ದ ಕೊಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಯ ಅಂಬ್ಯುಲೆನ್ಸ್‌ನಲ್ಲಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ