ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್; ಆಪ್ತನ ಎದುರೇ ಸೋತ ಸಿ.ಟಿ ರವಿ!
Twitter
Facebook
LinkedIn
WhatsApp

ಚಿಕ್ಕಮಗಳೂರು, ಮೇ 13: ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಬಿಜೆಪಿ ಭದ್ರಕೋಟೆ ಚಿಕ್ಕಮಗಳೂರಿನಲ್ಲಿಯೇ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಭಾರೀ ಮುಖಭಂಗವಾಗಿದ್ದು, ಸೋಲು ಕಂಡಿದ್ದಾರೆ. 1999ರ ವಿಧಾನಸಭಾ ಚುನಾವಣೆ ಬಳಿಕ ಸೋಲು ಕಾಣದ ರವಿ ಈ ಬಾರಿ ತಮ್ಮ ಆಪ್ತನ ಮುಂದೇಯೇ ಸೋಲು ಕಂಡಿದ್ದಾರೆ.
1999ರಲ್ಲಿ ಸುಮಾರು 900 ಮತಗಳಿಂದ ಸೋತಿದ್ದ ಸಿಟಿ ರವಿ ನಂತರದ ಚುನಾವಣೆಯಲ್ಲಿ ಕ್ರಮವಾಗಿ 25 ಸಾವಿರ, 15 ಸಾವಿರ, 11 ಸಾವಿರ, 26 ಮತಗಳಿಂದ ಗೆಲುವು ಸಾಧಿಸುತ್ತಾ ಬಂದಿದ್ದರು. ಆದರೆ ಈ ಬಾರಿ ಹೆಚ್.ಡಿ ತಮ್ಮಯ್ಯ ಎದುರು ಏಳು ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.