ಶನಿವಾರ, ಏಪ್ರಿಲ್ 20, 2024
ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಿಕ್ಕಮಂಗಳೂರಿನ ಯುವಕ ಸಂಶೋಧಿಸಿದ ಕೊರೋನಕ್ಕೆ ಸಂಬಂಧಿಸಿದ ಮೂಲಮ್ ಗೆ ರಾಜ್ಯ ಆಯುಷ್ ಇಲಾಖೆ ಗ್ರೀನ್ ಸಿಗ್ನಲ್.

Twitter
Facebook
LinkedIn
WhatsApp
ಚಿಕ್ಕಮಂಗಳೂರಿನ ಯುವಕ ಸಂಶೋಧಿಸಿದ ಕೊರೋನಕ್ಕೆ ಸಂಬಂಧಿಸಿದ ಮೂಲಮ್ ಗೆ ರಾಜ್ಯ ಆಯುಷ್ ಇಲಾಖೆ ಗ್ರೀನ್ ಸಿಗ್ನಲ್.

ಬೆಂಗಳೂರು: ಕೊರೋನಾ ವೈರಸ್ ಸೋಂಕು ತಗುಲದಂತೆ ರಕ್ಷಣೆ ನೀಡುವ ‘ಕೋವಿರಕ್ಷಾ’ ಎಂಬ ಹೆಸರಿನ ಮುಲಾಮನ್ನು ಬೆಂಗಳೂರಿನ ನೂತನ್ ಲ್ಯಾಬ್ ಅಭಿವೃದ್ಧಿ ಮಾಡಿದ್ದು, ಇದರ ಬಳಕೆಗೆ ರಾಜ್ಯ ಆಯುಷ್ ಇಲಾಖೆ ಅನುಮೋದನೆ ನೀಡಿದೆ.

ಈ ಮುಲಾಮನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ‌ದ ನೂತನ್ ಎಚ್ ಎಸ್ ಎಂಬ ಯುವಕ ಆವಿಷ್ಕಾರ ಮಾಡಿದ್ದಾರೆ. ಜೊತೆಗೆ ಈಗಾಗಲೇ ಐಐಎಸ್‌ಸಿ‌ಯ ಸಹಕಾರದ ಜೊತೆಗೆ ನ್ಯಾನೋ ಟೆಕ್ನಾಲಜಿ ಆಧಾರಿತ ನೂತನ್ ಲ್ಯಾಬ್ಸ್ ಎಂಬ ಸ್ಟಾರ್ಟ್‌ಅಪ್ ಪ್ರಾರಂಭ ಮಾಡಿದ್ದಾರೆ. ಅದರ ಮುಖೇನ ಹೊರಾಂಗಣ ವಾಯು ಶುದ್ಧೀಕರಣ‌ಕ್ಕೆ ಅನುಕೂಲ‌ವಾಗುವ ಸ್ಮಾಗ್ ಟವರ್, ಒಳಾಂಗಣ ವಾಯು ಶುದ್ಧೀಕರಣ, ವೈರಸ್ ಶುದ್ಧೀಕರಣ ಘಟಕವನ್ನು ಆರಂಭಿಸಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಕೋವಿರಕ್ಷಾ‌ವನ್ನು ಐಐಎಸ್‌ಸಿ ಸಹಯೋಗದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಇದನ್ನು ಮೂಗು, ಗಂಟಲು, ಮಾಸ್ಕ್‌ಗಳಿಗೆ ಹಚ್ಚಿಕೊಳ್ಳುವ ಮೂಲಕ ವೈರಸ್ ತಗುಲದಂತೆ ಎಚ್ಚರ ವಹಿಸಬಹುದಾಗಿದೆ. ಇದನ್ನು ಒಮ್ಮೆ ಹಚ್ಚಿಕೊಂಡರೆ ಸತತ ಮೂರು ಗಂಟೆಗಳ ಕಾಲ ಇದು ವೈರಸ್‌ನಿಂದ ರಕ್ಷಣೆ ಒದಗಿಸುತ್ತದೆ.
ಈ ಮುಲಾಮನ್ನು ಬೆಳ್ಳಿಯನ್ನು ಪ್ರಧಾನವಾಗಿರಿಸಿಕೊಂಡು ನೈಸರ್ಗಿಕ ಮತ್ತು ನ್ಯಾನೋ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಪ್ರತಿಯೊಬ್ಬರೂ ಈ ಉತ್ಪನ್ನಗಳ‌ನ್ನು ಬಳಕೆ ಮಾಡುವ ಮೂಲಕ ಸೋಂಕು ತಗುಲಿಸುವ ವೈರಾಣುಗಳಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ನೂತನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮುಲಾಮನ್ನು ಕಳೆದ ಒಂದು ತಿಂಗಳಲ್ಲಿ 10 ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಯೋಗಿಸಲಾಗಿದೆ. ಇದಕ್ಕೆ ಉತ್ತಮ ಫಲಿತಾಂಶ ಸಹ ದೊರೆತಿದೆ. ಮಕ್ಕಳಿಗೂ ಇದನ್ನು ಬಳಕೆ ಮಾಡಬಹುದು. ಇದರ ಒಂದು ವಯಲ್ ಅನ್ನು 200 ಕ್ಕೂ ಅಧಿಕ ಬಾರಿ ಬಳಕೆ ಮಾಡಬಹುದು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು