ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಾರ್ಮಾಡಿ ಘಾಟ್ ನಲ್ಲಿರುವ ದೇವರಿಗೆ ನಿತ್ಯ ಶಾಸ್ತ್ರೋಕ್ತ ಪೂಜೆಗೆ ಸ್ಥಳೀಯರ ಒತ್ತಾಯ

Twitter
Facebook
LinkedIn
WhatsApp
ಚಾರ್ಮಾಡಿ ಘಾಟ್ ನಲ್ಲಿರುವ ದೇವರಿಗೆ ನಿತ್ಯ ಶಾಸ್ತ್ರೋಕ್ತ ಪೂಜೆಗೆ ಸ್ಥಳೀಯರ ಒತ್ತಾಯ

ಚಿಕ್ಕಮಗಳೂರು (ಫೆ.14): ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಇರುವ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿ ನಿತ್ಯ ಶಾಸ್ತ್ರೋಕ್ತ ಪೂಜೆ ನಡೆಯಲಿ ಎಂದು ಸ್ಥಳೀಯರ ಆಗ್ರಹ ಮಾಡಿದ್ದಾರೆ. ಐತಿಹಾಸಿಕ ಹಾಗೂ ಇತಿಹಾಸ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ನಿತ್ಯ ವೇಧ-ಮಂತ್ರಗಳಿಂದ ಪೂಜೆ ಆಗಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ. 

 

ಮೂಲಭೂತ ಸೌಕರ್ಯಗಳ ಜೊತೆಗೆ  ನಿತ್ಯ ಪೂಜೆಗೆ ಆಗ್ರಹ:
ಸರ್ಕಾರ, ಮುಜರಾಯಿ ತಹಶೀಲ್ದಾರ್ ಹಾಗೂ ಎಸಿ ಅವರಿಗೆ ಆಗ್ರಹಿಸಿರೋ ಸ್ಥಳಿಯರು ಚಾರ್ಮಾಡಿಯ ಅಣ್ಣಪ್ಪ ಸ್ವಾಮಿ ದೇಗುದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಆದರೆ, ವೇಧ-ಮಂತ್ರಗಳಿಂದ ಪೂಜೆ ನಡೆಯುತ್ತಿಲ್ಲ. ಇನ್ಮು ಮುಂದೆ ಸರ್ಕಾರ ಹಾಗೂ ಅಧಿಕಾರಿಗಳು ವೇಧ ಹಾಗೂ ಮಂತ್ರಗಳಿಂದ ಪೂಜೆಯಾಗುವಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲ ಅಂದ್ರೆ ಈ ಭಾಗದಲ್ಲಿ ಓಡಾಡುವ ಪ್ರವಾಸಿಗರಿಗೆ ಭಕ್ತಿ-ಭಯ ಹಾಗೂ ಗೌರವ. ಈ ಭಾಗದಲ್ಲಿ ಸಂಚರಿಸುವ ಅನ್ಯಕೋಮಿನ ವಾಹನಹಳನ್ನ ಹೊರತು ಪಡಿಸಿ ಪ್ರತಿಯೊಂದು ವಾಹನಗಳು ನಿತ್ಯ ಇಲ್ಲಿ ಸಂಚರಿಸುವಾಗ ಇಲ್ಲಿ ನಿಲ್ಲಸಿ, ಪೂಜೆ ಮಾಡಿಸಿ, ಕಾಣಿಕೆ ಹಾಕಿಯೇ ಮುಂದೆ ಹೋಗೋದು. ಇಲ್ಲಿ ಕೈಮುಗಿದು, ಪೂಜೆ ಮಾಡಿಸಿಕೊಂಡು ಮುಂದೆ ಹೋದರೆ ಚಾರ್ಮಾಡಿ ಘಾಟಿಯಂತಹಾ ಅಪಾಯಕಾರಿ ಹಾಗೂ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಯಾವ ಅನಾಹುತವೂ ಸಂಭವಿಸೋದಿಲ್ಲ ಅನ್ನೋದು ಈ ಭಾಗದ ಪ್ರಯಾಣಿಕರ ನಂಬಿಕೆ. ಹಾಗಾಗಿ, ಈ ಭಾಗದಲ್ಲಿ ಸಂಚಾರ ಮಾಡುವ ಪ್ರತಿಯೊಂದು ವಾಹನಗಳು ಇಲ್ಲಿ ನಿಲ್ಲಿಸಿ ಪೂಜೆ ಮಾಡಿಸಿ, ಕೈ ಮುಗಿದು, ಕಾಣಿಕೆ ಹಾಕಿಯೇ ಮುಂದೆ ಹೋಗೋದು. ನಿತ್ಯ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ಗಳು ಕೂಡ.

ಆದರೆ, ಮುಜರಾಯಿ ಇಲಾಖೆ ಒಳಪಡುವ ಈ ದೇಗುಲಕ್ಕೆ ನಿತ್ಯ ಸಾವಿರಾರು ರೂಪಾಯಿ ಆದಾಯವಿದೆ. ಆದರೆ, ಇಲ್ಲಿ ನಿತ್ಯ ಪೂಜೆ ನಡೆದರೂ ಕೂಡ ಮಾಮೂಲಿ ಪೂಜೆಯಂತೆ ನಡೆಯುತ್ತಿದೆ. ಇದೊಂದು ಐತಿಹಾಸಿಕ ಹಾಗೂ ಇತಿಹಾಸ ಪ್ರಸಿದ್ಧ ದೇವಾಲಯ. ಈ ಅಣ್ಣಪ್ಪಸ್ವಾಮಿಗೂ ಧರ್ಮಸ್ಥಳದ ಮಂಜುನಾಥ ಸ್ವಾಮಿಗೂ ಸಂಬಂಧವಿದೆ ಎಂಬ ಮಾತುಗಳು ಇವೆ. ಈ ಅಣ್ಣಪ್ಪ ಸ್ವಾಮಿ ಅತ್ಯಂತ ಶಕ್ತಿಶಾಲಿ ದೈವ ಕೂಡ. ಹಾಗಾಗಿ, ಇಲ್ಲಿಗೆ ನಿತ್ಯ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ವೇಧಮಂತ್ರ ಘೋಷಗಳೊಂದಿಗೆ ನಿತ್ಯ ಪೂಜೆ ನಡೆಯಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ