30 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತ, 2 ಬಾರಿ ಜಿ. ಪಂ ಚುನಾವಣೆಯಲ್ಲಿ ಘಟಾನುಘಟಿಗಳನ್ನು ಸೋಲಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಯವರಿಗೆ ಸಿಗಬಹುದೇ ಕಾಂಗ್ರೆಸ್ ಟಿಕೆಟ್?
ಬಂಟ್ವಾಳ: 1994 ರಿಂದ ನಿರಂತರವಾಗಿ ಬಂಟ್ವಾಳದ ಕಾಂಗ್ರೆಸ್ ಕಾರ್ಯಕರ್ತನಾಗಿ ಬಂಟ್ವಾಳದ ಕಾಂಗ್ರೆಸ್ಸಿನಲ್ಲಿ ಮಹತ್ಪೂರ್ಣವಾದ ಜವಾಬ್ದಾರಿ ನಿರ್ವಹಿಸಿದ ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಯವರಿಗೆ ಈ ಬಾರಿ ಸ್ಥಳೀಯ ಸಂಸ್ಥೆಗಳ ಕಾಂಗ್ರೆಸ್ ಎಂ ಎಲ್ ಸಿ ಟಿಕೆಟ್ ಸಿಗಬಹುದೇ ಎಂಬುದು ಕುತೂಹಲದ ಪ್ರಶ್ನೆಯಾಗಿ ಉಳಿದಿದೆ.
ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ಸಾಧನೆ ರಾಜಕೀಯದಲ್ಲಿ ಊಹೆಗೆ ನಿಲುಕದ್ದು.
ಗೋಳ್ತಮಜಲು ಜಿಲ್ಲಾ ಪಂಚಾಯತಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಖ್ಯಾತಿಯಾಗಿತ್ತು. ಈ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುವ ಸಂದರ್ಭದಲ್ಲಿ 2011 ರಲ್ಲಿ ಈ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಬರೋಬ್ಬರಿ 850 ಬಾರಿ ಮತಗಳ ಅಂತರದಿಂದ ಬಿಜೆಪಿ ಭದ್ರಕೋಟೆಯನ್ನು ಛೇದಿಸಿದ ಕೀರ್ತಿ ಪ್ರಕಾಶ್ ಶೆಟ್ಟಿ ತುಂಬೆ ಅವರಿಗೆ ಸಲ್ಲುತ್ತದೆ.
ಅದೇ ರೀತಿ ಇನ್ನೊಂದು ಬಿಜೆಪಿ ಭದ್ರಕೋಟೆ ಸಜೀಪ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಬಿಜೆಪಿ 2016 ರಲ್ಲಿ ಪ್ರಬಲ ಅಭ್ಯರ್ಥಿ ಆ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ರವರನ್ನು ಕಣಕ್ಕಿಳಿಸಿತ್ತು. ಆದರೆ 2,400 ಮತಗಳ ಭಾರಿ ಅಂತರದಿಂದ ಮಾಜಿ ಶಾಸಕರನ್ನು ಸೋಲಿಸಿದ ಕೀರ್ತಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರಿಗೆ ಸಲ್ಲುತ್ತದೆ.
ಈ ರೀತಿ ಬಿಜೆಪಿ ಭದ್ರಕೋಟೆಯನ್ನು ಛೇದಿಸಬಲ್ಲ ಅಸಮಾನ್ಯ ಶಕ್ತಿ ಹೊಂದಿದ್ದ ಪ್ರಕಾಶ್ ಶೆಟ್ಟಿ ತುಂಬೆ ಅವರಿಗೆ ರಾಜಕೀಯದಲ್ಲಿ ಬಹುದೊಡ್ಡ ಸ್ಥಾನಮಾನಗಳು ಲಭ್ಯವಾಗದೆ ಇರುವುದು ಅವರ ಅಭಿಮಾನಿಗಳಿಗೆ ನಿರಾಸೆಯನ್ನು ತಂದಿದೆ ಇಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಇದುವರೆಗೆ ಯಾವುದೇ ನಿಗಮದ ಅಧ್ಯಕ್ಷತೆಯನ್ನು, ಸ್ಥಾನಮಾನವನ್ನು ಪಡೆಯದೆ ಕೇವಲ ಬಂಟ್ವಾಳಕ್ಕೆ ಪಕ್ಷ ಸಂಘಟನೆ ಹಾಗೂ ಚುನಾವಣೆಗೆ ಸೀಮಿತವಾಗಿದ್ದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರಿಗೆ ಈ ಬಾರಿಯಾದರೂ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಲಭ್ಯವಾಗಬಹುದೇ ಎಂಬುದು ಬಂಟ್ವಾಳದ ಅವರ ಅಭಿಮಾನಿಗಳ ನಿರೀಕ್ಷೆಯಾಗಿದೆ. ಈ ನಿರೀಕ್ಷೆಗೆ ಒಂದೆರಡು ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.
ನಿರಂತರ ಬಂಟ್ವಾಳದ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರವಹಿಸಿ ಬಿಜೆಪಿಗೆ ಸರಿಯಾದ ಸವಾಲುಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದ ಚಂದ್ರಪ್ರಕಾಶ್ ವ್ಯಕ್ತಿ ತುಂಬೆಯವರು ಇತ್ತೀಚಿಗೆ ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರವನ್ನು ಯಶಸ್ವಿಯಾಗಿ ನಡೆಸಿದ್ದರು.
ಜಿಲ್ಲೆಯಲ್ಲಿ ಹಿರಿಯ ನಾಯಕರಾಗಿದ್ದರೂ, ಯಾವುದೇ ಉನ್ನತ ಹುದ್ದೆಗಳನ್ನು ಪಡೆಯದೆ ಕೇವಲ ಇರುವ ಪ್ರಕಾಶ್ ಶೆಟ್ಟಿ ತುಂಬೆಯವರಿಗೆ ಈ ಬಾರಿಯಾದರೂ ಎಂ ಎಲ್ ಸಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಬರಬಹುದೇ ಎಂಬುದನ್ನು ಹಲವಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಕುತೂಹಲದಿಂದ ಕಾಯುತ್ತಿದ್ದಾರೆ.
ಅವರು ತುಂಬೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ಮೂರು ಬಾರಿ ಬಂಟ್ವಾಳ ಪಿ ಎಲ್ ಡಿ ಬ್ಯಾಂಕಿನ ಚುನಾವಣೆಗಳನ್ನು ಗೆದ್ದ ಸಾಧನೆ ಇವರ ಹೆಸರಿಗೆ ಇದೆ.
ಡಿ. 10ರಿಂದ 15ರವರೆಗೆ ಆಳ್ವಾಸ್ ವಿರಾಸತ್:
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಡಿ.10ರಿಂದ 15ರವರೆಗೆ ಆಳ್ವಾಸ್ ವಿರಾಸತ್ 2024, 30ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ನಡೆಯಲಿದೆ ಎಂದು ಆಳ್ವಾಸ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ 5 ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತು ಸಹಿತ ವಸ್ತು ಪ್ರದರ್ಶನಗಳಿಗೆ ಅವಕಾಶವಿದ್ದು, ಕೊನೆಯ ದಿನ ಕೇವಲ ವಸ್ತು ಪ್ರದರ್ಶನಗಳಿಗಾಗಿಯೇ ಮೀಸಲಿಡಲಾಗಿದೆ. ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶವಿದ್ದು, ಸಂಸ್ಕೃತಿ ಪ್ರಿಯರೂ, ಕಲಾಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.