ಶುಕ್ರವಾರ, ಏಪ್ರಿಲ್ 26, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗ್ರಾಹಕರಿಗೆ ಶಾಕ್‌ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!

Twitter
Facebook
LinkedIn
WhatsApp
suicide16709127311678050822 15
 

ಮುಂಬೈ: ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಮುಂಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಏಪ್ರಿಲ್‌ 1 ರಿಂದಲೇ ಎಲ್ಲಾ ವಾಹನಗಳ ಮೇಲಿನ ಬೆಲೆಯನ್ನು ಹೆಚ್ಚಿಸಲಾಗುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಗುರುವಾರ ತಿಳಿಸಿದೆ.

Maruti Suzuki Car Price in India - Nexa Models 2023 - Reviews, Specs &  Dealers - CarWale

ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ಟಾಟಾ ಮೋಟರ್ಸ್‌ (TaTa Motors) ಏಪ್ರಿಲ್‌ 1 ರಿಂದ ವಾಣಿಜ್ಯ ವಾಹನಗಳ ಮೇಲಿನ ಬೆಲೆ ಶೇ.5 ರಷ್ಟು ಹೆಚ್ಚಿಸುವ ನಿರ್ಧಾರ ಪ್ರಕಟಿಸಿತ್ತು. ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ ಕಂಪನಿಯೂ ಏಪ್ರಿಲ್‌ 1 ರಿಂದ ತನ್ನ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಬೆಲೆ ಶೇ.2 ರಷ್ಟು ಹೆಚ್ಚಿಸುವುದಾಗಿ ತಿಳಿಸಿತ್ತು. ಈ ಬೆನ್ನಲ್ಲೇ ಮಾರುತಿ ಸುಜುಕಿ ಕಾರು ತಯಾರಕ ಕಂಪನಿ ಬೆಲೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ.

Maruti Suzuki Cars Price 2023, Maruti Nexa Car Models, Reviews, Specs &  Dealers

ಸರ್ಕಾರದ ನೀತಿಗಳು, ಹಣದುಬ್ಬರ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಆರ್ಥಿಕತೆ ಸರಿದೂಗಿಸಲು ಕಾರುಗಳ ಬೆಲೆ ಏರಿಸುವುದು ಅನಿವಾರ್ಯ. ಏಪ್ರಿಲ್‌ನಿಂದ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. 

February 2023: Top Selling Maruti Cars | Spinny Car Magazine

ಮಾರುತಿ ಸುಜುಕಿ ನಿರಂತರವಾಗಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಮತ್ತು ಭಾಗಶಃ ಸರಿದೂಗಿಸಲು ಪ್ರಯತ್ನಿಸುತ್ತಿದೆ. ಇದರ ಹೊರತಾಗಿಯೂ ವಾಹನಗಳ ಬೆಲೆ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದೆ. ಆದರೆ ನಿಖರ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.

Maruti Suzuki Car Price, Images, Reviews and Specs | Autocar India

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ