ಭಾನುವಾರ, ಏಪ್ರಿಲ್ 28, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

Twitter
Facebook
LinkedIn
WhatsApp
ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

ಮುಂಬೈ: ಮಹಿಳೆಯೊಬ್ಬರ (Women) ಮನೆಗೆ ನುಗಿದ್ದ ಮೂವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಹರಿತವಾದ ಕತ್ತಿಯಿಂದ ಹಲ್ಲೆ ಮಾಡಿ, ಸಿಗರೇಟ್ (Cigarettes) ನಿಂದ ಆಕೆಯ ಖಾಸಗಿ ಭಾಗಗಳನ್ನು ಸುಟ್ಟು ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

CRIME COURT

ಮುಂಬೈನ ಕುರ್ಲಾದಲ್ಲಿರುವ 42 ವರ್ಷದ ಮಹಿಳೆ ಮೇಲೆ ಅತ್ಯಾಚಾರ (Gang Rape) ನಡೆದಿದ್ದು, ಹರಿತವಾದ ಆಯುಧಗಳಿಂದ ಮಹಿಳೆಗೆ ಕಿರುಕುಳ ನೀಡಲಾಗಿದೆ. ಅತ್ಯಾಚಾರ ಎಸಗಿದ ಕಾಮುಕರು ಹಾಗೂ ಸಂತ್ರಸ್ತೆ ಒಂದೇ ಪ್ರದೇಶದವರಾಗಿದ್ದರು ಎಂದು ಪೊಲೀಸರು (Mumbai Police) ತಿಳಿಸಿದ್ದಾರೆ. CRIME (1)

ವಿಕೃತ ಮನಸ್ಥಿತಿ: ಮಹಿಳೆ ಒಂಟಿಯಾಗಿರುವುದನ್ನು ನೋಡಿಕೊಂಡ ಕಾಮುಕರು ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಮನಸ್ಸೋ ಇಚ್ಚೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟ್‌ನಿಂದ ಸುಟ್ಟಿದ್ದಾರೆ. ಎದೆ ಭಾಗದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ. ಅದರಲ್ಲೊಬ್ಬ ಕೃತ್ಯವನ್ನೂ ವೀಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ಹೇಳಿದ್ರೆ ಜಾಲತಾಣದಲ್ಲಿ (Social Media) ವೀಡಿಯೋ ಹರಿಯಬಿಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಒಂದೆರಡು ದಿನಗಳ ನಂತರ ಮಹಿಳೆ ನೆರೆಯವರೊಂದಿಗೆ ಕಷ್ಟ ವಿವರಿಸಿದ್ದಾಳೆ. ನಂತರ ಎನ್‌ಜಿಒ ಸಂಸ್ಥೆಯೊಂದು ಸಂಪರ್ಕಿಸಿ ಆಕೆಗೆ ಧೈರ್ಯ ತುಂಬಿದೆ. ನಂತರ ಮಹಿಳೆ ಕುರ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 

Crime-Scene

ಅತ್ಯಾಚಾರ ಎಸಗಿದ ಮೂವರು ಕಾಮುಕರ ವಿರುದ್ಧ ಐಪಿಸಿ (IPC) ಸೆಕ್ಷನ್ 376 (ಅತ್ಯಾಚಾರ), 376 ಡಿ (ಸಾಮೂಹಿಕ ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ), 324 (ಅಪಾಯಕಾರಿ ಆಯುಧದಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಹಾಗೂ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು (Mumbai Police) ಶೋಧ ನಡೆಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ