Twitter
Facebook
LinkedIn
WhatsApp
ಗುಜರಿ ಗೋಡೌನಲ್ಲಿ ಅಗ್ನಿ ಅವಘಡ: ಮೂರು ಬಸ್ಗಳು ಬೆಂಕಿಗಾಹುತಿ!
ಬೆಂಗಳೂರು: ಗ್ಯಾಸ್ ಏಜೆನ್ಸಿ ಸಮೀಪದ ಸ್ಕ್ರಾಪ್ ಗೋಡೌನಲ್ಲಿ ಅಗ್ನಿ ಅವಘಡ (Fire breaks out) ಸಂಭವಿಸಿದ್ದು, ಗೋಡೌನ್ ನಲ್ಲಿದ್ದ ಮೂರು ಬಸ್ಗಳು ಬೆಂಕಿಗಾಹುತಿ ಆಗಿರುವಂತಹ ಘಟನೆ ಆರ್ಆರ್ ನಗರದ ಐಟಿಐ ಲೇಔಟ್ನ ಇಂಡೆನ್ ಗ್ಯಾಸ್ ಏಜೆನ್ಸಿ ಸಮೀಪ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಬೆಂಕಿ ತಗುಲಿ ಇಡೀ ಗೋಡೌನ್ ಧಗ-ಧಗನೆ ಹೊತ್ತಿ ಉರಿದಿದ್ದು, ಅಪಾರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿದೆ ಎನ್ನಲಾಗುತ್ತಿದೆ.
ಬೆಂಕಿ ಜ್ವಾಲೆ ವ್ಯಾಪಿಸದಂತೆ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚರಣೆ ಮಾಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.