
ಅಹ್ಮದಾಬಾದ್: ಇಬ್ಬರು ಅರೆಸೇನಾ ಪಡೆ ಯೋಧರು ತಮ್ಮ ಸಹೋದ್ಯೋಗಿಯ ಗುಂಡೇಟಿಗೆ ಬಲಿಯಾಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಪೋರ್ಬಂದರ್ ನಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಓರ್ವ ಅರೆಸೇನಾ ಪಡೆ ಯೋಧ ಎಕೆ-56 ನಿಂದ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಇನ್ನಿಬ್ಬರು ಯೋಧರಿಗೆ ತೀವ್ರ ಗಾಯಗಳಾಗಿವೆ.
ಯೋಧರ ನಡುವೆ ಘರ್ಷಣೆ ಉಂಟಾದಾಗ ಅವರು ಕರ್ತವ್ಯದಲ್ಲಿರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯೋಧ ತನ್ನ ಸಹೋದ್ಯೋಗಿಗಳ ಮೇಲೆ ಎಕೆ-56 ರೈಫಲ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಘರ್ಷಣೆಯಲ್ಲಿ ತೊಡಗಿದ್ದ ಯೋಧರು ಮಣಿಪುರದ ಭಾರತೀಯ ಮೀಸಲು ಬೆಟಾಲಿಯನ್ (ಐಆರ್ ಬಿ)ಭಾಗವಾಗಿದ್ದು, ಗುಜರಾತ್ ಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು.
ಯೋಧರ ನಡುವೆ ಘರ್ಷಣೆಗೆ ಕಾರಣವಾದ ಅಂಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡ ಇಬ್ಬರು ಯೋಧರನ್ನು ಜಾಮ್ ನಗರದಲ್ಲಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ದಾಖಲಾಗಿರುವ ಯೋಧರ ಪೈಕಿ ಒಬ್ಬರಿಗೆ ಹೊಟ್ಟೆಗೆ ಗುಂಡು ತಗುಲಿದ್ದು, ಮತ್ತೋರ್ವರಿಗೆ ಕಾಲಿಗೆ ಗುಂಡು ಹೊಕ್ಕಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹೇಳಿದ್ದಾರೆ.
ಪೋರ್ಬಂದರ್ ನಿಂದ 25 ಕಿ.ಮೀ ದೂರದಲ್ಲಿರುವ ತುಕ್ಡಾ ಗೋಸಾ ಗ್ರಾಮದಲ್ಲಿನ ಸೈಕ್ಲೋನ್ ಸೆಂಟರ್ ನಲ್ಲಿ ಯೋಧರು ವಾಸವಿದ್ದರು. ಡಿ.1 ರಂದು ಪೋರ್ಬಂದರ್ ನಲ್ಲಿ ಮತದಾನ ನಡೆಯಲಿದೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist