ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಗರ್ಲ್ ಫ್ರೆಂಡ್ ಗಾಗಿ ಸರ ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್.

Twitter
Facebook
LinkedIn
WhatsApp
ಗರ್ಲ್ ಫ್ರೆಂಡ್ ಗಾಗಿ ಸರ ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್.

ನಾಗ್ಪುರ : ಚಿಕ್ಕ ಪುಟ್ಟ ಕೆಲಸ ಮಾಡಿ ಕಡಿಮೆ ಸಂಬಳದಲ್ಲಿ ಇಡೀ ಸಂಸಾರವನ್ನು ನೋಡಿ‌ ಕೊಳ್ಳುವವರ  ಮುಂದೆ ಇಲ್ಲೊಬ್ಬ ಭೂಪ ತನ್ನ ಗರ್ಲ್ ಫ್ರೆಂಡ್ ಗೆ ಸುತ್ತಾಡಲು ಸಂಬಳ ಸಾಲುವುದಿಲ್ಲವೆಂದು ಸಿವಿಲ್‌ ಇಂಜಿನಿಯರಿಂಗ್‌ ಕೆಲಸ ಬಿಟ್ಟು ಸರ ಕಳ್ಳತನದ ದಂದೆಗೆ ಇಳಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

2015 ರಲ್ಲಿಯೇ ಸಿವಿಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಉಮೇಶ್‌ ಪಾಟೀಲ್‌ (27 ವರ್ಷ) ನಂತರ ಕಾಂಟ್ರಾಕ್ಟರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕಾಂಟ್ರಾಕ್ಟರ್‌ ಕೆಲಸದಲ್ಲಿ ಬರುವ ಸಂಬಳದಲ್ಲಿ ತನ್ನ ಖರ್ಚು ಹಾಗೂ ತನ್ನ ಗೆಳತಿಯ ಖರ್ಚನ್ನು ನಿಭಾಯಿಸಲು ಆಗುತ್ತಿರಲಿಲ್ಲಾ. ಬೇರೆ ಕೆಲಸ ಮಾಡುವಂತ ಶ್ರಮಜೀವಿಯೂ ಇತನಲ್ಲ. ಈ ಕಾರಣದಿಂದ ಸುಲಭ ವಿಧಾನದಲ್ಲಿ ಆದಾಯ ಗಳಿಸಬೇಕೆಂಬುದು ಉಮೇಶ್‌ ಪಾಟೀಲ್‌ ಲೆಕ್ಕಾಚಾರ.

ಉಮೇಶ್‌ ಪಾಟೀಲ್‌, ತುಷಾರ್‌ ದಿಲ್ಕೆ ಎನ್ನುವ ವ್ಯಕ್ತಿಯ ಜೊತೆ ಸೇರಿಕೊಂಡು 20ಕ್ಕೂ ಹೆಚ್ಚು ಚಿನ್ನದ ಸರ ಎಳೆದು ಕಳ್ಳತನ ಮಾಡಿ ಹಣ ಸಂಪಾದನೆ ಮಾಡಿದ್ದಾರೆ. ಆದರೆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ತುಷಾರ್‌ ಮತ್ತು ಉಮೇಶ್‌ ನಡುವೆ ಬಿರುಕು ಮೂಡಿದೆ. ಈ ಕಾರಣದಿಂದ ಉಮೇಶ್‌ ಒಬ್ಬನೇ ಕಳ್ಳತನ ಮಾಡಲು ಮುಂದಾಗಿದಾನೆ.
2020 ರಲ್ಲಿ ತುಷಾರ್‌ ಅನು ಬಿಟ್ಟು ಉಮೇಶ್‌ ಒಬ್ಬನೆ ಸರ ಕಳ್ಳತನವನ್ನು ಆರಂಭಿಸಿದ್ದಾನೆ. ಇದಾದ ಬಳಿಕ ಉಮೇಶ್‌ ಒಬ್ಬನೇ 36 ಸರಗಳನ್ನು ಕಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸುತ್ತಿದ್ದ. ಇದರಿಂದ ಲಕ್ಷ ಲಕ್ಷ ಆದಾಯ ಪಡೆದ ಉಮೇಶ್‌ ಪಾಟೀಲ್‌ ನಾಮಕಾವಸ್ತೆಗೆ ಮಾತ್ರ ಸಿವಿಲ್‌ ಇಂಜಿನಿಯರಿಂಗ್‌ ಕಾಂಟ್ರಾಕ್ಟರ್‌ ಕೆಲಸವೊಂದನ್ನು ಮಾಡುತ್ತಿದ್ದ.
ಅಕ್ಟೋಬರ್‌ ತಿಂಗಳಿನಲ್ಲಿ ಎಂದಿನಂತೆ ಉಮೇಶ್‌ ಸರಕಳ್ಳತನದ ಕೆಲಸದಲ್ಲಿ ತೊಡಗಿದ್ದ ಈ ಸಂದರ್ಭದಲ್ಲಿ ಪೋಲಿಸರ ಅತಿಥಿಯಾಗಿದ್ದಾನೆ. ಸರ ಕಳ್ಳತನ ಮಾಡುತ್ತಿರುವಾಗಲೇ ಉಮೇಶ್‌ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಪೋಲಿಸರು ಉಮೇಶ್‌ ಪಾಟೀಲ್‌ ಮನೆಗೆ ತೆರಳಿ ಶೋಧ ನಡೆಸಿದ್ದಾರೆ. ಪೋಲಿಸರಿಗೆ ಉಮೇಶ್‌ ಮನೆಯಲ್ಲಿ 2.5 ಲಕ್ಷ ನಗದು, 27 ಚಿನ್ನದ ಸರ ಪತ್ತೆಯಾಗಿದೆ.

ಇಷ್ಟೇ ಅಲ್ಲದೇ ಉಮೇಶ್‌ ಪಾಟೀಲ್‌ ಸರಕಳ್ಳತನ ಮಾಡಿದ 45 ಲಕ್ಷ ಹಣದಿಂದ ಫ್ಲಾಟ್‌ ಖರೀದಿಸಿದ್ದಾನೆ. ಅಲ್ಲದೇ ಉಮೇಶ್‌ ಪಾಟೀಲ್‌ ಬ್ಯಾಂಕ್‌ ಅಕೌಂಟ್‌ ನಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್‌ ಕೂಡ ಪತ್ತೆಯಾಗಿದೆ. ಗೆಳತಿ ಜೊತೆ ಸುತ್ತಾಡಲು ಹಾಗೂ ಐಷಾರಾಮಿ ಜೀವನ ನಡೆಸಲು ತನ್ನ ವೇತನ ಸಾಲುತ್ತಿರಲಿಲ್ಲಾ ಹೀಗಾಗಿ ಸರಕಳ್ಳತನಕ್ಕೆ ಇಳಿದಿರುವುದಾಗಿ ಪೋಲಿಸರ ಮುಂದೆ ಬಾಯ್ಬಿಟ್ಟಿದ್ದಾನೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು