ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಗಗನೇಕ್ಕೇರುತ್ತಿದೆ ಚಿಕನ್ ದರ; ಮೊಟ್ಟೆ ಬೆಲೆಯೂ ಏರಿಕೆ.!

Twitter
Facebook
LinkedIn
WhatsApp
ಗಗನೇಕ್ಕೇರುತ್ತಿದೆ ಚಿಕನ್ ದರ; ಮೊಟ್ಟೆ ಬೆಲೆಯೂ ಏರಿಕೆ.!

ಒಂದೇ ಒಂದು ವಾರದಲ್ಲಿ ಮೊಟ್ಟೆ ದರ ಒಂದು ರೂಪಾಯಿಗೂ ಹೆಚ್ಚು ಜಿಗಿತ ಕಂಡಿದೆ. ಪೂರ್ವ ಮುಂಗಾರು ಮಳೆಯಾಗುತ್ತಿದ್ದರೂ ಬಿಸಿಲ ಝಳವೇನೂ ಕಡಿಮೆಯಾಗಿಲ್ಲ. ಅಧಿಕ ತಾಪಮಾನವು ಮೊಟ್ಟೆ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಚಿಲ್ಲರೆ ಅಂಗಡಿಗಳಲ್ಲಿಒಂದು ಮೊಟ್ಟೆ ದರ 7.50 ರೂ. ತಲುಪಿದೆ.

ಇಷ್ಟು ದಿನ ಬೇಸಿಗೆ ಇತ್ತು ಮೊಟ್ಟೆ, ಮಾಂಸ  ತಿನ್ನುವುದನ್ನು ಜನರು ಕಡಿಮೆ ಮಾಡಿದ್ದರು. ಇದೀಗ ಮಳೆಗಾಲ  ಆರಂಭವಾಗುತ್ತಿದ್ದು, ದೇಹವನ್ನು ಬೆಚ್ಚಗೆ ಮಾಡಿಕೊಳ್ಳೊಣ ಅಂತ ಮಾಂಸ ಖರೀದಿಸಿ ರುಚಿಕರವಾದ ಆಹಾರ ತಯಾರಿಸಿ, ಸವಿಯೋಣ ಎಂದುಕೊಂಡಿರುವ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್​​ ನೀಡಿದೆ. ಚಿಕನ್ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕೇಳಿ ಗ್ರಾಹಕರು ದಂಗಾಗಿದ್ದಾರೆ.

ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಮೂಲದ ಪ್ರಕಾರ, ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಬಿಸಿಲು ಕುಕ್ಕುಟೋದ್ಯಮಕ್ಕೆ ನೇರ ಹೊಡೆತ ನೀಡಿದೆ. ಮುಖ್ಯವಾಗಿ ದೇಶದ ಬಹುತೇಕ ಪ್ರದೇಶಗಳಿಗೆ ಮೊಟ್ಟೆ ಪೂರೈಸುವ ತಮಿಳುನಾಡಿನ ನಮಕ್ಕಲ್‌ನಲ್ಲಿ ಒಂದೂವರೆ ತಿಂಗಳ ಅಂತರದಲ್ಲಿ 80 ರಿಂದ 90 ಲಕ್ಷ ಮೊಟ್ಟೆ ನೀಡುವ ಕೋಳಿಗಳು ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಮೃತಪಟ್ಟಿವೆ. ಇದರ ಪರಿಣಾಮ ಪೂರೈಕೆ ಮತ್ತು ಬೇಡಿಕೆಯಲ್ಲಿ ಬಹಳಷ್ಟು ವ್ಯತ್ಯಾಸಗಳು ಉಂಟಾಗಿ ಮೊಟ್ಟೆ ದರ ಏರಿಕೆ ಕಾಣುತ್ತಲೇ ಇದೆ.

ಇಷ್ಟು ದಿನ ತರಕಾರಿಗಳ ಬೆಲೆ‌ ಏರಿಕೆಯಾಗಿತ್ತು. ಇದೀಗ ‌ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿ ಚಿಕನ್​ಗೆ 380 ರೂ ಆಗಿದೆ. ಕೆಜಿ ಮಟನ್​ಗೆ 800 ರೂ. ಆಗಿದ್ದು, ಮೊಟ್ಟೆಗೆ 8 ರಿಂದ 7 ರೂ. ನಿಗದಿ‌‌ ಮಾಡಲಾಗಿದೆ.

ಬೇಸಿಗೆ ಇದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣೆಯಾಗಿಲ್ಲ. ಇದೀಗ ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಕೋಳಿ‌‌ ಮಾಂಸದ ಪೂರೈಕೆ ಇಲ್ಲದ ಕಾರಣ ಮಾಂಸಾಹಾರ ಬೆಲೆ ಕೂಡ ಏರಿಕೆಯಾಗಿದೆ.‌ ಅಲ್ಲದೆ ಮದುವೆ ಸೀಜನ್​ನಲ್ಲಿ ಮಾಂಸಾಹಾರಕ್ಕೂ ಹೆಚ್ಚು ಬೇಡಿಕೆ ಇರುವುದರಿಂದ, ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ ಎಂದು ಮಾಂಸ ವ್ಯಾಪಾರಿ ಉಬೇದ್ ಉಲ್ಲಾ ಖಾನ್ ಹೇಳಿದ್ದಾರೆ. ‌

 

‌ತರಕಾರಿ ಬೆಲೆಹೆಚ್ಚಾಗಿದೆ. ಇದೀಗ ಮಾಂಸ‌ದ ಬೆಲೆಯೂ ಏರಿಕೆಯಾಗಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಮಾಂಸವನ್ನು ತಿನ್ನುವುದಾದರೂ‌ ಹೇಗೆ?. ‌ಭಾನುವಾರ ಬಂದರೆ ಸಾಕು ಮನೆಯಲ್ಲಿ ಮಾಂಸಾಹಾರ ಇರಲೇ ಬೇಕು.‌ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಟ್ಟೆಯನ್ನು ಪ್ರತಿದಿನ ಕೊಡಬೇಕಾಗುತ್ತದೆ. ಆದರೆ ಮೊಟ್ಟೆಯ ಬೆಲೆ 7 ರೂಪಾಯಿ ಆಗಿದೆ.‌ ಮಟನ್ ಬೆಲೆ ಸಾವಿರದ ಗಡಿ ತಲಪುತ್ತಿದೆ.‌ ಎಷ್ಟೇ ಬೆಲೆ ಏರಿಕೆಯಾದರು ಚಿಕನ್ ಮತ್ತು ಮಟನ್ ತಿನ್ನಲೇಬೇಕು.‌ ಹೀಗಾಗಿ‌ ಚಿಕನ್ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದೇವೆ ಅಂತ ಗ್ರಾಹಕ ನವಾಬ್ ಹೇಳಿದರು. ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಶಾಕ್ ಆಗಿದ್ದು, ಇನ್ನೂ ಒಂದು ತಿಂಗಳು ಕಾಲ ಬೆಲೆ‌ ಏರಿಕೆಯಾಗುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist