ಗಗನಸಖಿ ಅತ್ಮಹತ್ಯೆ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್; ಕೊಲೆ ಆರೋಪದಡಿ ಪ್ರಿಯಕರ ಆದೇಶ್ ಬಂಧನ
ಹಿಮಾಚಲ ಮೂಲದ ಯುವತಿ ಅರ್ಚನಾ ಧೀಮನ್ (28) ದುಬೈನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ತನ್ನ ಪ್ರಿಯಕರ ಆದೇಶ್ನನ್ನು ಭೇಟಿಯಾಗಲು ಅವರು ಆಗಾಗ ಬೆಂಗಳೂರಿಗೆ ಬರುತ್ತಿದ್ದರು.
ಕಳೆದ ಶುಕ್ರವಾರವೂ ಆದೇಶ್ನನ್ನು ಭೇಟಿಯಾಗಲು ಅರ್ಚನಾ ಆಗಮಿಸಿದ್ದರು. ಕಳೆದ ಭಾನುವಾರ ಅವರು ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಆಕೆಯೇ ಜಾರಿ ಬಿದ್ದಿದ್ದಾರೆಯೇ? ಉದ್ದೇಶಪೂರ್ವಕವಾಗಿ ಆದೇಶ್ ಈಕೆಯನ್ನು ಕೆಳಕ್ಕೆ ತಳ್ಳಿದ್ದಾನೋ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಅರ್ಚನಾ ಅವರನ್ನು ಆಕೆಯ ಪ್ರಿಯಕರನೇ ಹತ್ಯೆ ಮಾಡಿದ್ದಾನೆ. ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಕೊಲೆ ಮಾಡುವ ಉದ್ದೇಶದಿಂದ ಈಕೆಯನ್ನು ತಳ್ಳಲಾಗಿದೆ ಎಂದು ಪೋಷಕರು ದೂರು ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಆರು ತಿಂಗಳಿನಿಂದ ಇವರಿಬ್ಬರು ರಿಲೇಷನ್ನಲ್ಲಿದ್ದರು. ಪೊಲೀಸರಿಗೂ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಸಂದಿಗ್ಧತೆ ಇತ್ತು. ಇದು ಕೊಲೆಯಾಗಿರಬಹುದು ಎಂಬ ಅನುಮಾನವೂ ಗಾಢವಾಗಿತ್ತು. ಇದೀಗ ಈತನ ಬಂಧನವಾಗಿರುವುದರಿಂದ ಹೆಚ್ಚಿನ ತನಿಖೆ ನಡೆದು ಸತ್ಯ ತಿಳಿದುಬರಲಿದೆ.
ಈಕೆಯ ತಂದೆ ಹಿಮಾಚಲ ಪ್ರದೇಶದಿಂದ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಲಾಗಿದೆ.
ದುಬೈನಲ್ಲಿ ಅರ್ಚನಾ ಗಗನಸಖಿಯಾಗಿ ಉದ್ಯೋಗಿಯಾಗಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣಿಸುತ್ತದೆ. ಆದರೆ, ಆದೇಶ್ ಈಕೆಯನ್ನು ಮೇಲಿನಿಂದ ತಳ್ಳಿರುವ ಸಾಧ್ಯತೆಯೂ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಈ ಹಿಂದೆಯೇ ಹೇಳಿದ್ದರು.
ಘಟನೆ ನಡೆದ ಸಮಯದಲ್ಲಿ ಆದೇಶ್ ಅದೇ ಫ್ಲಾಟ್ನಲ್ಲಿದ್ದ. ಆತನೇ ಪೊಲೀಸರಿಗೆ ಕರೆ ಮಾಡಿ ಅರ್ಚನಾ ಮಹಡಿಯಿಂದ ಬಿದ್ದಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದ.
ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಅಪಾರ್ಟ್ ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ
ಆದೇಶ್ಗೂ ಅರ್ಚನಾ ಧಿಮಾನ್ಗೂ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಆದೇಶ್ನನ್ನು ಭೇಟಿಯಾಗಲು ಅರ್ಚನಾ ಬೆಂಗಳೂರಿಗೆ ಆಗಮಿಸುತ್ತಿದ್ದರು. ಆದರೆ, ಈ ಬಾರಿಯ ಭೇಟಿ ಗಗನಸಖಿಯ ಸಾವಿನಲ್ಲಿ ಅಂತ್ಯವಾಗಿತ್ತು.