ಶುಕ್ರವಾರ, ಏಪ್ರಿಲ್ 19, 2024
ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗಗನಕ್ಕೇರಿದ ಅಡಿಕೆ ದರ. ರೈತರು ಫುಲ್ ಖುಷ್!

Twitter
Facebook
LinkedIn
WhatsApp
ಗಗನಕ್ಕೇರಿದ ಅಡಿಕೆ ದರ. ರೈತರು ಫುಲ್ ಖುಷ್!

ಅಡಿಕೆ ದರ ಏರಿಕೆಯಿಂದಾಗಿ ಅಡಿಕೆ ಬೆಳೆದವರ ಮಾನ – ಗೌರವ ಹೆಚ್ಚಾದಂತಿದೆ. ಕೈಗೆ ಒಂದಷ್ಟು ಕಾಸು ಸೇರುತ್ತಿದ್ದಂತೆಯೇ ಮಲೆನಾಡು ಭಾಗದಲ್ಲಿ ಕಾರುಗಳು ದಾಂಗುಡಿ ಇಡುತ್ತಿವೆ. ಅಡಿಕೆ ತೋಟಗಳ ಮಾಲೀಕರ ಬಾಯಿಯಲ್ಲಿ ಸಾವಿರಗಳ ಪದ ಮರೆತು ಹೋಗಿ ಮಾತೆತ್ತಿದರೆ ಲಕ್ಷ ಎಂಬ ಮಾತೇ ಕೇಳಿ ಬರುತ್ತಿದೆ..!

ಅಡಕೆ ಧಾರಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ; ತೋಟ ವಿಸ್ತರಣೆಯತ್ತ ಬೆಳಗಾರರ ಚಿತ್ತ
‘ಪ್ರತಿ ವರ್ಷ ಆನವಟ್ಟಿ ಪಟ್ಟಣದ ಷೋ ರೂಂಗಳಲ್ಲಿ ಸುಮಾರು ಎರಡು ನೂರು ಬೈಕ್‌ಗಳು ಮಾರಾಟವಾಗುತ್ತಿದ್ದವು. ಈ ವರ್ಷ ಆ ವೇಗ ಇಲ್ಲ. ಪೆಟ್ರೋಲ್‌ ಬೆಲೆ ಏರಿಕೆ, ಎಲೆಕ್ಟ್ರಿಕ್‌ ಬೈಕ್‌ಗಳ ಆಗಮನ ಹಾಗೂ ಅಡಿಕೆ ಬೆಲೆ ಏರಿಕೆಯಿಂದ ಉತ್ತೇಜಿತರಾದ ರೈತರು ಬೈಕ್‌ಗಳಿಂದ ದೂರವಾಗಿ ಕಾರು ಖರೀದಿಯತ್ತ ವಾಲುತ್ತಿದ್ದಾರೆ’ ಎನ್ನುತ್ತಿದ್ದಾರೆ ಬೈಕ್‌ ಷೋ ರೂಂನ ಮಾಲೀಕ ಸಂಪತ್‌ ಕುಮಾರ್‌.

ಮಲೆನಾಡು ಭಾಗದಲ್ಲಿ ದಶಕಗಳ ಹಿಂದೆ ಭತ್ತವೇ ಪ್ರಮುಖ ಬೆಳೆ. ದಿನ ಕಳೆದಂತೆ ಭತ್ತದ ಬೆಳೆಯ ಜಮೀನಿನ ಕೆಲ ಭಾಗ ಶುಂಠಿ ಹಾಗೂ ಅನಾನಸ್‌ ಬೆಳೆಯಲು ಮಾರ್ಪಾಡಾಗಿದೆ. ಶುಂಠಿ ಬೆಳೆ ಮತ್ತು ಅನಾನಸ್‌ ಬೆಳೆಯ ಬೆಲೆಗಳ ಇಳಿಮುಖವಾಗಿದ್ದರಿಂದ ಬೆಳೆಗಾರರ ಸಂಖ್ಯೆ ಇಳಿಮುಖವಾಗಿದೆ. ಈಗ ಅಡಿಕೆ ಬೆಲೆ ಏರಿಕೆಯಿಂದ ಆಕರ್ಷಿತರಾಗಿರುವ ಮಲೆನಾಡು ರೈತರು, ಅಡಿಕೆ ಬೆಳೆಯುವತ್ತ ಚಿತ್ತ ನೆಟ್ಟಿದ್ದಾರೆ. ಭತ್ತದ ಬೆಳೆಯ ಬಹುಪಾಲು ಜಮೀನು ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿದ್ದು, ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರ ಕೂಲಿಯೂ ಹೆಚ್ಚಾಗಿದ್ದು, ಸಣ್ಣ ಪುಟ್ಟ ರೈತರಿಗೆ ಮಾರಕವಾಗಿ ಪರಿಣಮಿಸಿದ್ದು, ತಮ್ಮ ಜಮೀನುಗಳಲ್ಲಿ ಕುಟುಂಬದವರೊಡಗೂಡಿ ತಾವೇ ದುಡಿಯುವಂತಾಗಿದೆ. ಅಡಿಕೆಯ ಬೆಲೆ ಏರಿಕೆಯಿಂದಾಗಿ ಹೆಚ್ಚಿನ ಇಳುವರಿಯ ದುರಾಸೆಗೆ ಬಿದ್ದ ರೈತರು ಸಾವಯವ ಕೃಷಿಯಿಂದ ದೂರವಾಗುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರದ ಬಳಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಹೆಚ್ಚಿನ ಇಳುವರಿಯ ಆಸೆಗಾಗಿ ರಾಸಾಯನಿಕ ಗೊಬ್ಬರದತ್ತ ಮುಖ ಮಾಡುತ್ತಿದ್ದಾರೆ.

ದಿನೇ ದಿನೇ ಏರುತ್ತಿರುವ ಪೆಟ್ರೋಲ್‌ ಮತ್ತು ಡಿಸೇಲ್‌ಗಳ ಬೆಲೆ ಏರಿಕೆಯಿಂದ ಕಾರು ಕೊಳ್ಳದಿರುವ ಅಡಿಕೆ ತೋಟಗಳ ಮಾಲೀಕರು ಬೆಲೆ ಇಳಿಕೆ ಹಾಗೂ ಸಿ. ಎನ್‌. ಜಿ ಗ್ಯಾಸ್‌ಗಳ ಬಂಕ್‌ಗಳ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಬೆಲೆಗಳಲ್ಲಿ ಇಳಿಕೆ ಕಂಡರೆ ಸಣ್ಣ ಪುಟ್ಟ ತೋಟದ ಮಾಲೀಕರು ಸಹ ಕಾರುಗಳ ಖರೀದಿಗೆ ಮುಂದಾಗಲಿದ್ದಾರೆ. ಇದಕ್ಕೆ ಕೋವಿಡ್‌ -19 ಕಾಯಿಲೆ ಒಂದು ಕಾರಣವಾಗಿದ್ದು ಜನರೊಂದಿಗೆ ಬೆರೆಯಲು ಆತಂಕ ಪಡುವವರು ಬಸ್‌ಗಳಲ್ಲಿ ಸಂಚಾರ ಮಾಡುವುದರಿಂದ ದೂರ ಸರಿದು ಸ್ವಂತ ವಾಹನ ಖರೀದಿಗೆ ಮುಂದಾಗಿದ್ದಾರೆ.

ಪ್ರತಿ ವರ್ಷ ಕನಿಷ್ಠ ನಲವತ್ತು ಟ್ರ್ಯಾಕ್ಟರ್‌ ಮಾರಾಟವಾಗುತ್ತಿದ್ದು ಡಿಸೇಲ್‌ ಬೆಲೆ ಏರಿಕೆ, ಅಡಿಕೆ ತೋಟಗಳ ಸಂಖ್ಯೆ ಹೆಚ್ಚಳದಿಂದಾಗಿ ಕೇವಲ 10-15 ಟ್ರ್ಯಾಕ್ಟರ್‌ ಮಾರಾಟಕ್ಕೆ ಇಳಿಕೆಯಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು