ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಖಾಲಿ ಕಾಗದಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿ! ವಿಡಿಯೋ ವೈರಲ್‌

Twitter
Facebook
LinkedIn
WhatsApp
WhatsApp Image 2023 04 12 at 8.05.18 PM

ವಿಲ್‌ ಮಾಡಿಸುವುದಕ್ಕೋಸ್ಕರ ಸಂಬಂಧಿಗಳು ಖಾಲಿ ಕಾಗದಕ್ಕೆ ಮೃತ ಮಹಿಳೆಯೊಬ್ಬರ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಆಗ್ರಾದಲ್ಲಿ 2021 ರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋರ್ಜರಿ ವ್ಹೀಲ್ ಮಾಡುವ ಸಲುವಾಗಿ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯ ಮೊಮ್ಮಗ ಜಿತೇಂದ್ರ ಶರ್ಮಾ(Jitendra Sharma), ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ಅಪರಾಧ ಕೃತ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೃತ ಮಹಿಳೆ ಕಮಲಾದೇವಿ ಎಂಬುವವರಾಗಿದ್ದು, ಇವರು ಜಿತೇಂದ್ರ ಶರ್ಮಾ ಎಂಬುವವರ ತಾಯಿಯ ಚಿಕ್ಕಮ್ಮನಾಗಿದ್ದು, 2021ರ ಮೇ 8 ರಂದು ಅವರು ಸಾವನ್ನಪ್ಪಿದ್ದರು. ಆಕೆಯ ಪತಿ ಈ ಮೊದಲೇ ಮೃತಪಟ್ಟಿದ್ದು, ಈ ದಂಪತಿಗೆ ಮಕ್ಕಳಿರಲಿಲ್ಲ. 

ಜಿತೇಂದ್ರ ಶರ್ಮಾ ಅವರ ದೂರಿನ ಪ್ರಕಾರ, ಕಮಲಾದೇವಿ ಅವರ ಸಾವಿನ ನಂತರ ಅವರ ಭಾವನ ಮಗ( ಪತಿಯ ಅಣ್ಣನ ಮಗ) ಆಕೆಯ ಮೃತದೇಹವನ್ನು ಇವರ ಬಳಿಯಿಂದ ಕಸಿದುಕೊಂಡು ಹೋಗಿದ್ದರು. ಆಗ್ರಾದ ಆಸ್ಪತ್ರೆಗೆ ಕಮಲಾದೇವಿಯವರ ಮೃತದೇಹವನ್ನು ಸಾಗಿಸುತ್ತಿದ್ದಾಗ, ಇನ್ನೇನು ಆಸ್ಪತ್ರೆಗೆ ತಲುಪಲು ಕೆಲ ನಿಮಿಷಗಳಿದ್ದಾಗ ಕಾರನ್ನು ಅಡ್ಡ ಹಾಕಿದ ಅವರು ವಕೀಲರೊಬ್ಬರನ್ನು ಕರೆಸಿ ನಕಲಿ ವಿಲ್ ಮಾಡುವುದಕ್ಕಾಗಿ ಕಮಲಾದೇವಿಯವರ ಹೆಬ್ಬೆಟ್ಟು ಪಡೆದಿದ್ದರು.

ನಂತರ ಈ ನಕಲಿ ವಿಲ್ ಬಳಸಿಕೊಂಡು ಕಮಲಾದೇವಿ ಪತಿ ಕಡೆಯ ಸಂಬಂಧಿಕರು ಕಮಲಾದೇವಿಯವರಿಗೆ (Kamala Devi)ಸೇರಿದ್ದ ಆಸ್ತಿ ಹಾಗೂ ಅಂಗಡಿಯನ್ನು ತಮ್ಮ ವಶಕ್ಕೆ ಪಡೆದಿದ್ದರು. ಆದರೆ ಸುಶಿಕ್ಷಿತರಾಗಿದ್ದ ಕಮಲಾದೇವಿಯವರು ಎಲ್ಲೂ ಹೆಬ್ಬೆಟ್ಟು ಹಾಕುತ್ತಿರಲಿಲ್ಲ ಅವರು ತಮ್ಮ ಸಹಿಯನ್ನೇ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿತೇಂದ್ರ ಶರ್ಮಾ ಅವರಿಗೆ ಈ ಬಗ್ಗೆ ವಿಲ್‌ (fake will) ಬಗ್ಗೆ ಸಂಶಯ ಬಂದಿತ್ತು. ಆದರೆ ಇತ್ತೀಚೆಗೆ 45 ಸೆಕೆಂಡ್‌ಗಳ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಕಾರೊಂದರ ಹಿಂಬದಿ ಸೀಟಿನಲ್ಲಿ ಕಮಲಾದೇವಿ ಮೃತದೇಹವಿದ್ದು, ಆರೋಪಿಗಳು ವಕೀಲರೊಬ್ಬರ ನೆರವಿನಿಂದ ಅವರ ಕೈಯಿಂದ ಖಾಲಿ ಕಾಗದಗಳಿಗೆ ಹೆಬ್ಬೆಟ್ಟು ಸಹಿ ಪಡೆಯುತ್ತಿರುವ ವಿಡಿಯೋ ವೈರಲ್ ಆದ ಆಗಿದ್ದು, ಜಿತೇಂದ್ರ ಶರ್ಮಾ ಅವರ ಅನುಮಾನಕ್ಕೆ ಪುರಾವೆ ಸಿಕ್ಕಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಗ್ರಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಮಾನವೀಯ ವರ್ತನೆ. ಇಂತಹವರಿಗೆ ಸಮಾಜದಿಂದ ಬಹಿಷ್ಕಾರ ಹಾಕಬೇಕು ಎಂದು ಕೆಲವರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಂತಹ ಕೃತ್ಯವನ್ನು ಬೆಂಬಲಿಸಿದ ವಕೀಲನ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಎಂಥಾ ಕಾಲ ಬಂತು ನೋಡಿ ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೇ ಎಂಬ ಗಾದೆ ಮಾತೊಂದಿತ್ತು. ಆದರೆ ಈಗ ಆಸ್ತಿಗಾಗಿ ಹೆಣವನ್ನು ಕೂಡ ನೆಮ್ಮದಿಯಾಗಿರಲು ಕೆಲವು ದುಷ್ಟರು ಬಿಡುವುದಿಲ್ಲ ಎಂಬುದು ಈ ವಿಚಾರದಿಂದ ಸಾಬೀತಾಗಿರುವುದಂತೂ ನಿಜ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ