ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ಮತ ಎಣಿಕೆ; ರಾಜ್ಯದಲ್ಲಿ ಭರ್ಜರಿ ಮುನ್ನಡೆಯಲ್ಲಿ ಎನ್‌ಡಿಎ.!
ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯವಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. 29 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. 13 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳ 14 ಸ್ಥಾನಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ಮತ್ತು ಉತ್ತರ ಜಿಲ್ಲೆಗಳ 14 ಜಿಲ್ಲೆಗಳಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆದಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ತಲಾ ಒಂದು ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ತುಮಕೂರಿನಲ್ಲಿ ಎರಡು ಸ್ಥಳಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮುನ್ನಡೆ ಸಾಧಿಸಿದ್ದಾರೆ.
ಆರಂಭಿಕ ಟ್ರೆಂಡ್‌ಗಳಲ್ಲಿ ಎನ್‌ಡಿಎ ಭಾರಿ ಮುನ್ನಡೆ ಸಾಧಿಸಿದೆ. ಇಲ್ಲಿಯವರೆಗೆ, 452 ಸ್ಥಾನಗಳ ಟ್ರೆಂಡ್‌ಗಳು ಬಹಿರಂಗಗೊಂಡಿವೆ, ಅದರಲ್ಲಿ NDA 301 ಸ್ಥಾನಗಳಲ್ಲಿ, INDI ಅಲಯನ್ಸ್ 121 ಸ್ಥಾನಗಳಲ್ಲಿ ಮತ್ತು ಇತರರು 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 20, ಟಿಎಂಸಿ 19 ಸ್ಥಾನಗಳಲ್ಲಿ ಮುಂದಿದೆ.
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.
ಬಿಹಾರ, ಬೇಗುಸರಾಯ್ ಸ್ಥಾನ, ಗಿರಿರಾಜ್ ಸಿಂಗ್, ಬಿಜೆಪಿ-ಮುನ್ನಡೆ ಬಿಹಾರ-ಕರಕಟ್-ಉಪೇಂದ್ರ ಕುಶ್ವಾಹ-ಆರ್ಎಲ್ಎಸ್ಪಿ-ಮುನ್ನಡೆ ಬಿಹಾರ-ಪಾಟ್ಲಿಪುತ್ರ-ರಾಮ್ ಕೃಪಾಲ್ ಯಾದವ್-ಬಿಜೆಪಿ-ಮುನ್ನಡೆ ಬಿಹಾರ-ಸರಣ್-ರಾಜೀವ್ ಪ್ರತಾಪ್ ರೂಢಿ-ಬಿಜೆಪಿ-ಮುನ್ನಡೆ
ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೊದಲನೇ ಸುತ್ತು ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರು 512 ಮತಗಳನ್ನು ಪಡೆದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು 464 ಮತಗಳನ್ನು ಪಡೆದು ಹಿನ್ನಡೆ. 49 ಮತಗಳ ಅಂತರವಿದೆ.
ಬಿಜೆಪಿ ಅಭ್ಯರ್ಥಿಗಳ ಆರಂಭಿಕ ಮುನ್ನಡೆ
ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಆರಂಭಿಕ ಮುನ್ನಡೆ, ಹಾವೇರಿಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ, ಜೆಡಿಎಸ್ನ ಕೋಲಾರದಲ್ಲಿ ಮಲ್ಲೇಶ್ಬಾಬು, ಉಡುಪಿ- ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ, ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಮುನ್ನಡೆ ಪಡೆದಿದ್ದಾರೆ.