ಶನಿವಾರ, ಮೇ 18, 2024
Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕ್ಲಾಸ್ ನಲ್ಲಿ ಫಸ್ಟ್ ಬೆಂಚು, ಮ್ಯಾಥ್ಸ್ ನಲ್ಲಿ ಲಾಸ್ಟು ಎಂದ ನಟಿ ಐಶಾನಿ ಶೆಟ್ಟಿ

Twitter
Facebook
LinkedIn
WhatsApp
71958002

ಹೊಂದಿಸಿ ಬರೆಯಿರಿ ಸಿನಿಮಾದ ಮೂಲಕ ಸಾಕಷ್ಟು ಹೆಸರು ಮಾಡುತ್ತಿರುವ ನಟಿ ಐಶಾನಿ ಶೆಟ್ಟಿ, ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮ್ಮ ಸ್ಕೂಲ್ ಮತ್ತು ಕಾಲೇಜು ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ತಮಗೆ ಮ್ಯಾಥ್ಸ್ ಸಬ್ಜೆಕ್ಟ್ ಅಂದ್ರೆ ತುಂಬಾ ಕಷ್ಟವೆಂದೂ ಹೇಳಿಕೊಂಡಿದ್ದಾರೆ.

73497985 1190943011101446 1552794337232814080 n 1

ಮುಂದುವರೆದು ಮಾತನಾಡಿರುವ ಅವರು, ‘ಪರೀಕ್ಷೆಯಲ್ಲಿ ಕಡಿಮೆ ಅಂಕ‌ ಬಂತು ಅಂತ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮನ್ನು ಮತ್ತೊಬ್ಬರಿಗೆ ಕಂಪೇರ್ ಮಾಡಿಕೊಳ್ಳಬೇಡಿ. ನಿಮ್ಮ ಪ್ರತಿಭೆ ಏನು ಅಂತ ಚಿಂತಿಸಿ. ಆ‌ ಕಡೆ ಹೆಜ್ಜೆ ಹಾಕಿ. ಸೋತಾಗ ತಲೆಕೆಡಿಸಿಕೊಂಡು ನಾನು ಸೋತೆ, ಅವರು ಗೆದ್ದರು ಅಂತ ಚಿಂತಿಸುವ ಅವಶ್ಯಕತೆ ಇಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿ. ಗೆಲುವು ನಿಮ್ಮದಾಗುತ್ತದೆ’ ಎಂದು ಅವರು ಆರ್.ಎನ್.ವಿ.ಕೆ ದ್ವಿತೀಯ ಪಿಯು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ‌ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ನಂತರ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಿ, ತಮ್ಮಿಷ್ಟದ ಹಾಡು ಹಾಡುವುದರ ಮೂಲಕವೂ ಅವರ ರಂಜಿಸಿದ್ದಾರೆ. ಮಕ್ಕಳ ಜೊತೆ ಫೋಟೋಗೆ ಪೊಸ್ ಕೊಟ್ಟಿದ್ದಾರೆ. ಕಾಲೇಜಿನ ಕಾರ್ಯದರ್ಶಿ ಭರತ್ ಕುಮಾರ್ ಹಾಗೂ ಪ್ರಾಂಶುಪಾಲರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

pngtree orange rounded rectangle png image 2962480

ಬೆಳ್ಳಂ ಬೆಳಗ್ಗೆ ಹೊಸಕೋಟೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಎಂವಿಜೆ ಕಾಲೇಜು ಬಳಿ ಸರಣಿ ಅಪಘಾತವಾಗಿದೆ. ಕ್ಯಾಂಟರ್ ಚಾಲಕ ದಿಡೀರ್ ಬ್ರೇಕ್ ಹಾಕಿದ್ದು, ಬ್ರೇಕ್ ಹಾಕುತ್ತಿದ್ದಂತೆ ಹಿಂದೆ ಬರುತ್ತಿದ್ದ ಟಿಟಿ ವಾಹನ ಹಾಗೂ ಪಲ್ಸರ್ ಬೈಕ್ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ಹಾಗೂ ಬೈಕ್ ನುಜುಗುಜ್ಜಾಗಿದೆ. ಬೈಕ್ ಸವಾರರಿಗೆ ಹಾಗೂ ಕ್ಯಾಂಟರ್ ಚಾಲಕನಿಗೆ ಗಾಯಗಳಾಗಿದ್ದು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ