ಕ್ರಿಕೆಟಿಗ ಶುಭಮನ್ ಗಿಲ್ ಸಹೋದರಿಗೆ ನಿಂದನೆ: ದೆಹಲಿ ಪೊಲೀಸರಿಗೆ ಮಹಿಳಾ ಆಯೋಗ ನೋಟಿಸ್
ನವದೆಹಲಿ: ಆನ್ ಲೈನ್ ನಲ್ಲಿ ಕ್ರಿಕೆಟಿಗ ಶುಭಮನ್ ಗಿಲ್ ಅವರ ಸಹೋದರಿಗೆ ನಿಂದನೆ, ಅತ್ಯಾಚಾರ , ಹಲ್ಲೆ ಬೆದರಿಕೆ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಮಹಿಳಾ ಆಯೋಗವು ಪೊಲೀಸರಿಗೆ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಐಪಿಎಲ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ಗಿಲ್ ಭರ್ಜರಿ ಶತಕ ಸಿಡಿಸಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಾವಳಿಯಿಂದ ಹೊರಬಿದ್ದಿತ್ತು.
ಪಂದ್ಯದ ನಂತರ, ಗಿಲ್ ಮತ್ತು ಅವರ ಸಹೋದರಿಯನ್ನು ಕೆಲವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೋಲಿಂಗ್ ಮತ್ತು ನಿಂದನೆ ಮಾಡಿದ್ದರು. ಶುಭ್ ಮನ್ ಗಿಲ್ ಅವರ ಸಹೋದರಿಗೆ ಟ್ವಿಟರ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ, ಮಹಿಳಾ ದ್ವೇಷ, ಬೆದರಿಕೆ ಅತ್ಯಂತ ನಿಂದನೀಯ ಫೋಸ್ಟ್ ಹಾಕಿರುವುದು ಸಂಪೂರ್ಣ ಅಪರಾಧ ಕೃತ್ಯವಾಗಿದೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ತುರ್ತು ಕ್ರಮ ಕೈಗೊಳ್ಳುವಂತಹದ್ದು ಎಂದು ದೆಹಲಿ ಮಹಿಳಾ ಆಯೋಗ ನೋಟಿಸ್ ನಲ್ಲಿ ಹೇಳಿದೆ.
Taking suo-moto cognisance of the online trolling and abuse of cricketer #ShubmanGill’s sister, we have issued a notice to Delhi Police seeking registration of FIR. Police is to file a detailed action taken report by 26th May. Such criminals won’t be allowed to get away with… pic.twitter.com/VMZfClofag
— Swati Maliwal (@SwatiJaiHind) May 24, 2023
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವಿಟರ್ ನಲ್ಲಿ ನೋಟಿಸ್ ಹಂಚಿಕೊಂಡಿದ್ದು, ಮೇ 26ರೊಳಗೆ ಕೈಗೊಂಡ ಕ್ರಮದ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.