ನವದೆಹಲಿ : ಕೋವಿಶಿಲ್ಡ್ ನಲ್ಲಿರುವ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚೆಗೆ ನ್ಯಾಯಾಲದಲ್ಲಿ ಒಪ್ಪಕೊಂಡ ಬಳಿಕ ಇದೀಗ ಕೋವಿಶೀಲ್ಡ್ ಲಸಿಕೆಯನ್ನು ಹಿಂಪಡೆಯುವುದಾಗಿ ಕೋವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಆಸ್ಟ್ರಾಜೆನಿಕಾ ಹೇಳಿದೆ.
ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!
Twitter
Facebook
LinkedIn
WhatsApp
ಕೊರೊನಾ ಸಂದರ್ಭ ಆಸ್ಟ್ರಾಜೆನಿಕಾ ಕಂಪೆನಿ ಕೊರೊನಾ ಲಸಿಕೆ ಬಿಡುಗಡೆ ಮಾಡಿತ್ತು, ಅದನ್ನು ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ಸೀರಮ್ ಸಂಸ್ಥೆ ಬಿಡುಗಡೆ ಮಾಡಿದ್ದು, ದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಈ ನಡುವೆ ಕೋವಿಶೀಲ್ಡ್ ತಯಾರಿಕಾ ಸಂಸ್ಥೆ ಆಸ್ಟ್ರಾಜೆನಿಕಾ ತಮ್ಮ ಕಂಪನಿಯ ಕೋವಿಡ್ ಲಸಿಕೆಯ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್ಲೆಟ್ಸ್ ತಗ್ಗುವಿಕೆಯಂತಹ ಅಡ್ಡ ಪರಿಣಾಮ ಉಂಟಾಗುತ್ತಿದೆ ಎಂದು ಲಂಡನ್ ಕೋರ್ಟ್ಗೆ ಸಲ್ಲಿಸಿದ ದಾಖಲೆಯಲ್ಲಿ ಉಲ್ಲೇಖಿಸಿತ್ತು.
ಇದೀಗ ವಿಶ್ವದಾದ್ಯಂತದ ಮಾರುಕಟ್ಟೆಯಿಂದ ಕೋವಿಡ್ ಲಸಿಕೆ ಹಿಂಪಡೆಯುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಆದರೆ ಸಂಸ್ಥೆ ಮಾತ್ರ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕೋವಿಡ್ ಲಸಿಕೆಗಳಿರುವುದರಿಂದ ತಮ್ಮ ಲಸಿಕೆ ಹಿಂಪಡೆಯುತ್ತಿರುವುದಾಗಿ ಅದು ಹೇಳಿದೆ. ಯುರೋಪಿನಲ್ಲಿ ವ್ಯಾಕ್ಸ್ಝೆವ್ರಿಯಾ ಲಸಿಕೆಯ ಮಾರುಕಟ್ಟೆ ಅನುಮತಿಯನ್ನು ಹಿಂಪಡೆಯುವುದಾಗಿಯೂ ಕಂಪೆನಿ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.