ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ( Shreyas Talpade)ಅವರು ಭಯಗೊಂಡಿದ್ದಾರೆಯೇ? ಸದ್ಯ ಅವರು ಹೇಳಿದ ಮಾತುಗಳು ಸುದ್ದಿಯಾಗಿದ್ದು, ಇವು ಈ ಪ್ರಶ್ನೆಗೆ ಪುಷ್ಠಿ ನೀಡುವಂತಿವೆ. ನಟ ಶ್ರೇಯಸ್ ತಲ್ಪಾಡೆ ಇತ್ತೀಚೆಗೆ ‘ನಾವು ನಮ್ಮ ದೇಹದೊಳಕ್ಕೆ ಏನನ್ನು ಸೇರಿಸಿದ್ದೇವೆ ಎಂಬ ಅರಿವು ನಮಗಿಲ್ಲ’ ಎಂದಿದ್ದಾರೆ. ‘ಕೋವಿಡ್ ವ್ಯಾಕ್ಸಿನ್ ‘ಕೋವಿಶೀಲ್ಡ್’ ನ ಸೈಡ್ ಇಫೆಕ್ಟ್ ಆಗಿ ‘ರಕ್ತ ಹೆಪ್ಪುಗಟ್ಟುವಿಕೆ’ ಹಾಗು ಪ್ಲೇಟ್ಲೆಟ್’ ಸಂಖ್ಯೆಯಲ್ಲಿ ಇಳಿಕೆ ಬಹಳ ಅಪರೂಪ ಎನ್ನುವಂತೆ ಸಂಭವಿಸಹುದು’ ಎಂದು ವ್ಯಾಕ್ಸಿನ್ ಉತ್ಪಾದನಾ ಕಂಪನಿ ಒಪ್ಪಿಕೊಂಡ ಮೇಲೆ ಶ್ರೇಯಸ್ ತಲ್ಪಾಡೆಗೆ ಈ ಬಗ್ಗೆ ಸಂಶಯ ಮೂಡಿದೆ.
ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ
Twitter
Facebook
LinkedIn
WhatsApp
ಕಾರಣ, 2023ರಲ್ಲಿ ನಟ ಶ್ರೇಯಸ್ ತಲ್ಪಾಡೆಗೆ ‘ಕಾರ್ಡಿಯಾಕ್ ಅರೆಸ್ಟ್’ ಸಂಭವಿಸಿತ್ತು. ತಕ್ಷಣ ಆಸ್ಪತ್ರೆಗೆ ತೆರಳಿ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದರು. ಬಳಿಕ ಇಷ್ಟೂ ದಿನವೂ ತಮ್ಮ ಹೃದಯದ ಅನಾರೋಗ್ಯಕ್ಕೆ ಕಾರಣ, ಡಯೆಟ್, ಎಕ್ಸರಿಸೈಜ್ ಹಾಗೂ ಬೇರೇನೋ ಕಾರಣ ಎಂದುಕೊಂಡಿದ್ದ ನಟ ಶ್ರೇಯಸ್ ತಲ್ಪಾಡೆ ಅವರಿಗೆ ಈಗ ಸಣ್ಣ ಸಂಶಯ ಮೂಡಿದೆ ಎನ್ನಬಹುದು. ಏಕೆಂದರೆ, ಕೋವಿಡ್ ಉತ್ಪಾದನಾ ಕಂಪನಿಯೇ ‘ಅಡ್ಡ ಪರಿಣಾಮ’ದ ಬಗ್ಗೆ ಹೇಳಿದ್ದರಿಂದ, ತಮಗೆ ಕಳೆದ ವರ್ಷ ಸಂಭವಿಸಿರುವ ಹೃದಯ ಸಮಸ್ಯೆಗೆ ಕೋವಿ ಶೀಲ್ಡ್ ವ್ಯಾಕ್ಸಿನ್ ಕಾರಣವಾಗಿರಬಹುದೇ? ಎಂಬ ಪ್ರಶ್ನೆಯೀಗ ಅವರಿಗೆ ಮೂಡಿದೆ.
‘ನಾನು ಸ್ಮೋಕ್ ಮಾಡುವುದಿಲ್ಲ, ನಾನು ರೆಗ್ಯಲರ್ ಆಗಿ ಡ್ರಿಂಕ್ಸ್ ಕೂಡ ಮಾಡುವುದಿಲ್ಲ. ನಾನು ತಿಂಗಳಿಗೊಮ್ಮೆ ಡ್ರಿಂಕ್ಸ್ ತೆಗೆದುಕೊಂಡರೂ ಅದು ತುಂಬಾ ಲಿಮಿಟ್‌ನಲ್ಲಿ ಇರುತ್ತದೆ. ನನ್ನ ಕೊಲೆಸ್ಟರಾಲ್ ಲೆವೆಲ್ ಕೂಡ ಸ್ವಲ್ಪವೇ ಹೈ ಇದ್ದು, ಅದನ್ನೀಗ ನಾರ್ಮಲ್ ಎನ್ನಲಾಗಿದೆ. ನನಗೆ ಡಯಾಬಟೀಸ್ ಇಲ್ಲ, ಹೈ ಬ್ಲಡ್ ಪ್ರೆಶರ್ ಇಲ್ಲ, ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಇದ್ದರೂ, ನನಗೆ ಹಾರ್ಟ್ ಪ್ರಾಬ್ಲಂ (Cardiac Arrest) ಬರಲು ಬೇರೇನು ಕಾರಣವಾಗಿರಬಹುದು? ನನಗಂತೂ ಅರ್ಥವಾಗುತ್ತಿಲ್ಲ’ ಎಂದಿದ್ದಾರೆ ನಟ ಶ್ರೇಯಸ್ ತಲ್ಪಾಡೆ.
ಕೋವಿಶೀಲ್ಡ್ ಬಗ್ಗೆ ಬಂದಿರುವ ವರದಿಯ ಸಣ್ಣ ಆರ್ಟಿಕಲ್ ಇನ್‌ಸರ್ಟ್ ಮಾಡಿ ಈ ಬಗ್ಗೆ ಹೇಳಿಕೊಂಡಿರುವ ನಟ ಶ್ರೇಯಸ್ ತಲ್ಪಾಡೆ, ‘ನಾವು ನಮ್ಮ ದೇಹದೊಳಗೆ ಏನನ್ನು ಸೇರಿಸಿಕೊಂಡಿದ್ದೇವೆ ಎಂಬುದು ನಿಜವಾಗಿಯೂ ನಮಗೆ ಗೊತ್ತಿಲ್ಲ. ಇದು ನಿಜವಾಗಿಯೂ ದುರದೃಷ್ಟಕರ ಹಾಗೂ ಆತಂಕ ಹುಟ್ಟಿಸುವಂಥದ್ದು. ಕೋವಿಡ್‌ಗಿಂತ ಮೊದಲು ನಾವು ಹೀಗೆ 30-40 ವರ್ಷ ವಯಸ್ಸಿನವರು ದಿಢೀರ್ ಸತ್ತಿದ್ದು ಹಾಗೂ ಹೃದಯ ಸಮಸ್ಯೆಗೆ ತುತ್ತಾದ ಘಟನೆಯನ್ನು ನೋಡಿದ್ದು ಕಡಿಮೆ’ ಎಂದಿದ್ದಾರೆ ನಟ ಶ್ರೇಯಸ್ ತಲ್ಪಾಡೆ.