ಶನಿವಾರ, ಏಪ್ರಿಲ್ 20, 2024
ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೋಟ್ಯಾಂತರ ಮೊತ್ತಕ್ಕೆ ಹರಾಜಾಗಲಿದೆ ಈ ತಲೆಬುರುಡೆ..!

Twitter
Facebook
LinkedIn
WhatsApp
ಕೋಟ್ಯಾಂತರ ಮೊತ್ತಕ್ಕೆ ಹರಾಜಾಗಲಿದೆ ಈ ತಲೆಬುರುಡೆ..!

ಪುರಾತನ ಪಳೆಯುಳಿಕೆಗಳ ಮಾರಾಟಕ್ಕೆ ತೀವ್ರ ವಿರೋಧದ ನಡುವೆಯೂ ಪ್ರಸ್ತುತ ಭೂಮಿ ಮೇಲೆ ಇಲ್ಲದ ಅಳಿದು ಹೋಗಿರುವ ಪ್ರಾಣಿಗಳ ಪಳೆಯುಳಿಕೆಗಳ ಹರಾಜಿಗೆ ಹರಾಜು ಸಂಸ್ಥೆ ಸೋಥೆಬಿ ಮುಂದಾಗಿದೆ. ಮುಂದಿನ ತಿಂಗಳು ಈ ಸಂಸ್ಥೆ ಟ್ರೈನೋಸಾರ್ ತಲೆಬುರುಡೆಯ ಹರಾಜಿಗೆ ಮುಂದಾಗಿದ್ದು, ಇದನ್ನು ಅಂದಾಜು ಮೂಲ ಬೆಲೆ 20 ಮಿಲಿಯನ್ ಡಾಲರ್‌ಗೆ ಹರಾಜಿಗೆ ಇಡಲಾಗಿದೆ. 

ಮ್ಯಾಕ್ಸಿಮಸ್’ (Maximus) ಎಂಬ ಅಡ್ಡ ಹೆಸರಿನ ಈ ಟ್ರೈನೋಸಾರ್ ತಲೆ ಬುರುಡೆಯು 76 ಮಿಲಿಯನ್ ವರ್ಷಗಳಷ್ಟು ಹಳೆಯದ್ದು ಎಂದು ನಂಬಲಾಗಿದೆ. 6 ರಿಂದ ಏಳು ಅಡಿ ಉದ್ದವಿರುವ ಈ ತಲೆಬುರುಡೆ ಸುಮಾರು 200 ಪೌಂಡ್‌ಗಳಷ್ಟು ತೂಕವಿದೆ. ಈ ಡೈನೋಸಾರ್ ತಲೆಬುರುಡೆಯೂ ಒಳ್ಳೆಯ ಸ್ಥಿತಿಯಲ್ಲಿದ್ದು, ದವಡೆಯಲ್ಲಿ ಎಲ್ಲಾ ಹಲ್ಲುಗಳನ್ನು ಹೊಂದಿದೆ. ತಲೆ ಬುರುಡೆಯ ಸುತ್ತಲೂ ಇರುವ ಮೂಳೆಗಳನ್ನು ಇದು ಹೊಂದಿದ್ದು, ಅತ್ಯಂತ ಅಪರೂಪದ ಮಾದರಿ ಎಂದು ಹರಾಜು ಸಂಸ್ಥೆ ಸೋಥೆಬಿ ಹೇಳಿದೆ. ಸೌತ್ ಕೆರೊಲಿನಾದ ಖಾಸಗಿ ಜಾಗದಲ್ಲಿ ಈ ತಲೆಬುರುಡೆಯನ್ನು ಉತ್ಖನನ ಮಾಡಲಾಗಿದೆ, ಈ ಪ್ರದೇಶವೂ ಭೂಮಿಯ ಮೇಲೆ ಅತೀಹೆಚ್ಚು ಟೈರನೋಸಾರ್ ಪಳೆಯುಳಿಕೆಗಳನ್ನು ನೀಡಿದೆ ಎಂದು ಹರಾಜು ಸಂಸ್ಥೆ ಹೇಳಿದೆ.

ಮ್ಯಾಕ್ಸಿಮಸ್‌ ಎಂದು ಕರೆಯಲ್ಪಡುವ ತಲೆಬುರುಡೆಯೂ ಪತ್ತೆಯಾದ ಜಾಗವೂ ಹಲವು ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಅಲ್ಲದೇ ಇಡೀ ಅಸ್ಥಿಪಂಜರದಲ್ಲಿ ತಲೆಬುರುಡೆಯೊಂದೇ ಸವಕಳಿಯಿಂದ ನಾಶವಾಗದಂತಹ ಟ್ರೈನೋಸಾರ್ ಅಸ್ಥಿಪಂಜರದ ಏಕೈಕ ಭಾಗವಾಗಿದೆ ಎಂದು ಹರಾಜು ಸಂಸ್ಥೆ ಸೋಥೆಬಿ (Sotheby) ಮಾಹಿತಿ ನೀಡಿದೆ . ಡಿಸೆಂಬರ್ 9 ರಂದು ಈ ತಲಬುರುಡೆ (skull) ಮಾರಾಟವಾಗಲಿದೆ. ಸೋಥೆಬಿ ಹರಾಜು ಸಂಸ್ಥೆಯ ಇದುವರೆಗಿನ ಹರಾಜಿನಲ್ಲಿ ಹರಾಜಾದ ಅತ್ಯಂತ ಬೆಳೆಬಾಳುವ ಪಳೆಯುಳಿಕೆಯಲ್ಲಿ ಇದು ಒಂದಾಗಲಿದೆ ಎಂದು ಸೋಥೆಬಿ ಹೇಳಿದೆ. 

ಈ ಹಿಂದೆ 31.8 ಮಿಲಿಯನ್ ಡಾಲರ್ ಮೊತ್ತಕ್ಕೆ ಡೈನೋಸಾರ್ ಪಳೆಯುಳಿಕೆಯೊಂದು (dinosaur fossil) ಹರಾಜಾಗಿತ್ತು. ಅದುವೇ ಇದುವರೆಗಿನ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಡೈನೋಸಾರ್ ಪಳೆಯುಳಿಕೆಯಾಗಿದೆ. ಕಳೆದ ವರ್ಷ ಕ್ರಿಸ್ಟಿ ಸಂಸ್ಥೆಯ ಹರಾಜಿನಲ್ಲಿ ಸ್ಟಾನ್ ಎಂಬ  ಈ ಟೈರನೊಸಾರ್ (tyrannosaur) ಮಾದರಿಯನ್ನು ಮಾರಾಟ ಮಾಡಲಾಗಿತ್ತು. 

ಹರಾಜಿನಲ್ಲಿ ಮಾರಾಟವಾದ ಮೊದಲ ಡೈನೋಸಾರ್ , ಸ್ಯೂ ಎಂಬ ಟೈರನೊಸಾರ್ 1997 ರಲ್ಲಿ $8.36 ಮಿಲಿಯನ್ ಗಳಿಸಿತು, ಡೈನೋಸಾರ್‌ಗಳ ಪಳೆಯುಳಿಕೆಗಳ ಬೆಲೆಗಳು ಗಗನ ಮುಟ್ಟುತ್ತಿದ್ದು, ಜುರಾಸಿಕ್ ಪಾರ್ಕ್‌ನ ವೆಲೋಸಿರಾಪ್ಟರ್‌ಗೆ ಮೂಲಮಾದರಿಯಾಗಿ ಕಾರ್ಯನಿರ್ವಹಿಸಿದ ಡೈನೋಸಾರ್‌ನ ಅಸ್ಥಿಪಂಜರವು ಮೇ ತಿಂಗಳಲ್ಲಿ $12.4 ಮಿಲಿಯನ್‌ಗೆ ಮಾರಾಟವಾಗಿತ್ತು. ಡೈನೋಸಾರ್‌ನ 70 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಸ್ಥಿಪಂಜರವು ಜುಲೈನಲ್ಲಿ 6.1 ಮಿಲಿಯನ್ ಡಾಲರ್ ಗಳಿಸುವುದರೊಂದಿಗೆ ಕಳೆದ ಕೆಲವು ವರ್ಷಗಳಿಂದ ಬೇಡಿಕೆ ವಿಶೇಷವಾಗಿ ಹೆಚ್ಚಿದೆ. ಪ್ರಸಿದ್ಧ ಡೈನೋಸಾರ್ ಸಂಗ್ರಹಕರಲ್ಲಿ ನಟರಾದ ನಿಕೋಲಸ್ ಕೇಜ್ (Nicolas Cage), ರಸ್ಸೆಲ್ ಕ್ರೋವ್ (Russell Crowe) ಮತ್ತು ಲಿಯೊನಾರ್ಡೊ ಡಿಕಾಪ್ರಿಯೊ (Leonardo DiCaprio) ಸೇರಿದ್ದಾರೆ ಎಂದು ವರದಿಯಾಗಿದೆ.

ಆದರೆ ಡೈನೋಸಾರ್ ಪಳೆಯುಳಿಕೆಗಳ ಈ ಮಾರಾಟವನ್ನು ವಿಜ್ಞಾನಿಗಳು ಖಂಡಿಸಿದ್ದಾರೆ.  ಹರಾಜಿನಲ್ಲಿ ಹೆಚ್ಚುತ್ತಿರುವ ಬೆಲೆಗಳು ಪಳೆಯುಳಿಕೆ ಅಥವಾ ಅಸ್ಥಿಪಂಜರಗಳ ಕಳ್ಳತನ ಮತ್ತು ಕಳ್ಳಸಾಗಣಿಕೆಯ ಬೇಡಿಕೆಯನ್ನು ಹೆಚ್ಚಿಸಿವೆ ಎಂದು ಕೆಲವು ವಿಮರ್ಶಕರು ಕಳವಳ ವ್ಯಕ್ತಪಡಿಸಿದ್ದಾರೆ.  

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು

ಅಂಕಣ