ಕೊರಗಜ್ಜನ ಕಟ್ಟೆಗೆ ಬೆಂಕಿ ಇಟ್ಟ ವಿವಾದ: ಯಾರಿಗೆ ಸೇರುತ್ತೆ ವಿವಾದಿತ ಸ್ಥಳ? ತಹಶಿಲ್ದಾರರು ಏನಂದರು? ಇಲ್ಲಿದೆ ವಿವಾರವಾದ ಮಾಹಿತಿ

ಬೆಳ್ತಂಗಡಿ: ಭೂಮಿ ವಿಚಾರಕ್ಕೆ ಗಲಾಟೆ ನಡೆದು ಕಾರ್ಣಿಕ ದೈವ ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚಿದ ಘಟನೆ ಬಾಡರಿನ ಕೊರಗ ಕಲ್ಲು ಬಳಿಯ ಕೊರಗಜ್ಜನ ಕಟ್ಟೆಯಲ್ಲಿ ಜುಲೈ ೧೧ರಂದು ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ವೇಣುರು ಪೊಲೀಸ್ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿ ಓರ್ವ ಆರೋಪಿ ಹರೀಶ್ ಪೂಜಾರಿ ಯನ್ನು ಬಂಧಿಸಿದ್ದರು. ಬಲಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ರಾಜೇಶ್ ಎಂಬಾತ ಪ್ರತಿದೂರು ಕೂಡ ನೀಡಿ ಮತ್ತೆ 13 ಜನರ ಮೇಲೆ ಪ್ರಕರಣ ದಾಖಲಾಗಿತ್ತು, ಇದರಿಂದ ಭಕ್ತಾದಿಗಳು ತನಿಖೆಗೆ ಆಗ್ರಹಿಸಿದ್ದರು.
ಈ ಹಿನ್ನೆಲೆ ಇಂದು ಜುಲೈ 17ರಂದು ಬೆಳ್ತಂಗಡಿ ತಹಸಿಲ್ದಾರ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಜಾಗದ ಸರ್ವೆ ನಡೆದಿದ್ದು, ಸರ್ವೆಯಲ್ಲಿ ಕೊರಗಜ್ಜನ ಕಟ್ಟೆ ಇರುವ ಸ್ಥಳ ಸರಕಾರಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ. ಪ್ರಸ್ತುತ ಕೊರಗಜ್ಜನ ಹೊಸ ಕಟ್ಟೆಯನ್ನು ಮಾಡಲು ಉದ್ದೇಶಿಸಿರುವ ಸ್ಥಳ ಕುಟುಂಬಸ್ಥರ ವರ್ಗ ಜಮೀನಿನಲ್ಲಿರುವ ಬಗ್ಗೆ ಸರ್ವೇ ಕಾರ್ಯದ ವೇಳೆ ತಿಳಿದು ಬಂದಿದೆ.
ಸರ್ವರ ಸಮ್ಮುಖದಲ್ಲಿ ನಡೆದ ಸರ್ವೆ ಕಾರ್ಯದಲ್ಲಿ ಬೆಳ್ತಂಗಡಿ ತಹಸಿಲ್ದಾರ್ ಸುರೇಶ್ ಕುಮಾರ್ ಮತ್ತು ಸಿಬ್ಬಂದಿಗಳು, ಸರ್ವೆ ಇಲಾಖೆ ಅಧಿಕಾರಿಗಳು, ಪುಂಜಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದಕುಮಾರ್, ವೇಣೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸೌಮ್ಯ ಮತ್ತು ಸಬ್ ಇನ್ಸ್ಪೆಕ್ಟರ್ ಆನಂದ ಹಾಗೂ 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನೇಮಿಸಲಾಗಿತ್ತು.
ಈ ಬಗ್ಗೆ ತಹಸಿಲ್ದಾರರು ಏನಂದರು:
ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಕರ್ತವ್ಯ ನಮ್ಮದು, ಧಾರ್ಮಿಕ ವಿಚಾರವಾಗಿ ನಾನು ಏನು ಮಾತನಾಡುವುದಿಲ್ಲ, ಧಾರ್ಮಿಕ ನಂಬಿಕೆ ಬಗ್ಗೆ ಸರಕಾರದ ವತಿಯಿಂದ ಯಾವುದೇ ಅಕ್ಷೇಪಣೆ ಇಲ್ಲ. ಈ ವಿವಾದಿತ ಸ್ಥಳ ಯಾರು ಕೂಡ ನನ್ನದು ಅನ್ನುವಂತಿಲ್ಲ ಇದು ನಮ್ಮದು ಎಂಬ ಭಾವನೆ ಬೇಕು. ಪ್ರಸ್ತುತ ಈಗ ಸಮಸ್ಯೆ ಇರುವುದರಿಂದ ಯಾರು ಕೂಡ ದುಡುಕಬಾರದು. ಮುಂದಿನ ಧಾರ್ಮಿಕ ಚಟುವಟಿಕೆಗಳಿಗೆ P.D.O ಹಾಗೂ ಪಂಚಾಯತ್ ಅಧ್ಯಕ್ಷರು, V.A, R.I ಮತ್ತು ಉಪ ತಹಸಿಲ್ದಾರ್ ಇವರ ಉಪಸ್ಥಿತಿಯಲ್ಲಿ ಅನುಮತಿ ಪಡೆದುಕೊಂಡು ನಾಲ್ಕು ಸೀಟ್ಗಳನ್ನು ಹಾಕಿ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಹೆಚ್ಚುವರಿ ಅಭಿವೃದ್ಧಿ ಮಾಡಲು ಗ್ರಾಮ ಪಂಚಾಯಿತಿಯಿಂದ NOC ಪಡೆದು ಯಾವುದೇ ಗಲಾಟೆ ಆಗದಂತೆ ಎಚ್ಚರ ವಹಿಸಬೇಕು. ನಾಲ್ಕು ಸೀಟುಗಳನ್ನು ಹಾಕಿ ತದನಂತರ ಡಿಸೆಂಬರ್ ವರೆಗೆ ಯಾವುದೇ ಅಭಿವೃದ್ಧಿ ಮಾಡೋದು ಸದ್ಯಕ್ಕೆ ಬೇಡ ಎಂದರು.