ಕೊನೆಗೂ ಹೆಸರು ಬಹಿರಂಗಪಡಿಸಿದ ಮಸ್ಕ್, ಲಿಂಡಾ ಯಕ್ಕರಿನೋ ಟ್ವಿಟರ್ ನ ನೂತನ ಸಿಇಒ
Twitter
Facebook
LinkedIn
WhatsApp
ನವದೆಹಲಿ: NBC ಯುನಿವರ್ಸಲ್ ನ ಜಾಗತಿಕ ಜಾಹೀರಾತು ಮತ್ತು ಪಾಲುದಾರಿಕೆಗಳ ಅಧ್ಯಕ್ಷರಾಗಿರುವ ಲಿಂಡಾ ಯಕ್ಕರಿನೋ ಟ್ವಿಟರ್ ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಟ್ವಿಟರ್ ನ ನಿರ್ಗಮಿತ ಸಿಇಒ ಎಲಾನ್ ಮಸ್ಕ್ ಲಿಂಡಾ ಅವರನ್ನು ನೂತನ ಸಿಇಒ ನ್ನಾಗಿ ಘೋಷಿಸಿದ್ದಾರೆ. ಮಿಯಾಮಿ ನಲ್ಲಿ ನಡೆದ ಜಾಹಿರಾತು ಕಾರ್ಯಕ್ರಮದಲ್ಲಿ ಯಕ್ಕರಿನೋ ಮಸ್ಕ್ ಅವರನ್ನು ವೇದಿಕೆ ಮೇಲೆ ಸಂದರ್ಶಿಸಿದ್ದರು.
ಇದಕ್ಕೂ ಮುನ್ನ ಟ್ವಿಟರ್ ಗೆ ಹೊಸ ಸಿಇಒ ನ್ನು ಆಯ್ಕೆ ಮಾಡಿರುವುದಾಗಿ ಹೇಳಿ ಮಸ್ಕ್ ಕುತೂಹಲ ಮೂಡಿಸಿದ್ದರು. ಆಕೆ 6 ವಾರಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳುವ ಮೂಲಕ ಟ್ವಿಟರ್ ನ ಮುಂದಿನ ಸಿಇಒ ಓರ್ವ ಮಹಿಳೆ ಎಂಬ ಸುಳಿವು ನೀಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಮಸ್ಕ್ ಲಿಂಡಾ ಅವರನ್ನು ಟ್ವಿಟರ್ ನ ನೂತನ ಸಿಇಒ ಎಂದು ಘೋಷಿಸಿದ್ದಾರೆ. ನಾನು ಉತ್ಪನ್ನ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುತ್ತೇನೆ ಆದರೆ ಲಿಂಡಾ ವ್ಯಾಪಾರದ ಆಪ್‌ಗಳ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ಮಸ್ಕ್ ಹೇಳಿದ್ದಾರೆ.