ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೊಡಗು: ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ..!

Twitter
Facebook
LinkedIn
WhatsApp
2021 4image 14 06 316011468board ll 1

ಕೊಡಗು(ಏ.07):  ಮಡಿಕೇರಿ ಅಂದ್ರೆ ವರ್ಷದ ಆರೇಳು ತಿಂಗಳ ಕಾಲ ಮಳೆ ಸುರಿಯುತ್ತದೆ. ಆದರೀಗ ಬೇಸಿಗೆ ಕಾವು ಮಿತಿ ಮೀರಿದ್ದರೆ, ಇದೇ ವೇಳೆ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದ್ದು, ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಕಾವು ಕೂಡ ಏರುತ್ತಿದೆ. ಈ ಎರಡು ಕಾವುಗಳ ನಡುವೆ ಮಡಿಕೇರಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ. ಕುಡಿಯುವ ನೀರಿನ ಮೂಲಗಳಲ್ಲಿ ಎರಡು ಮೂಲಗಳು ಸಂಪೂರ್ಣ ಭತ್ತಿಹೋಗಿದ್ದು ದಿನಬಿಟ್ಟು ದಿನ ಅಂದರೆ ವಾರದಲ್ಲಿ ಮೂರು ದಿನಗಳು ಮಾತ್ರವೇ ಕುಡಿಯುವ ನೀರನ್ನು ಒದಗಿಸಲಾಗುವುದು. ಇದಕ್ಕೆ ನಗರದ ಜನತೆ ಸಹಕರಿಸಬೇಕು ಎಂದು ಸ್ವತಃ ನಗರಸಭೆ ಸುತ್ತೋಲೆ ಹೊರಡಿಸಿದೆ. 

ಈ ಸುತ್ತೋಲೆ ನಗರದ ಜನತೆ ಬಿರುಬಿಸಿಲಿನಲ್ಲೂ ಬೆವರುವಂತೆ ಮಾಡಿದೆ. ನಗರಸಭೆ ಪೂರೈಸುವ ಈ ನೀರೇ ಮಡಿಕೇರಿ ನಗರದ ಜನತೆಗೆ ಕುಡಿಯುವ ಉದ್ದೇಶ ಸೇರಿದಂತೆ ಗೃಹ ಬಳಕೆಯ ಎಲ್ಲಾ ಅಗತ್ಯಗಳಿಗೂ ಆಧಾರ. ಬೆಟ್ಟಗುಡ್ಡಗಳಿಂದ ಕೂಡಿರುವ ಮಡಿಕೇರಿ ನಗರದಲ್ಲಿ 23 ವಾರ್ಡುಗಳಲ್ಲಿ 33 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. 11 ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಇವುಗಳಲ್ಲಿ ಬಹುತೇಕ ಕುಟುಂಬಗಳಿಗೆ ಸ್ವಂತ ನೀರಿನ ಮೂಲಗಳಿಲ್ಲ. ಆದರೀಗ ವಾರದಲ್ಲಿ ಮೂರು ದಿನ ನೀರು ಪೂರೈಸುತ್ತೇವೆ ಎಂದು ಹೇಳಿರುವುದು ಬಹುತೇಕ ಕುಟುಂಬಗಳಿಗೆ ಚಿಂತೆಗೀಡು ಮಾಡಿದೆ. ಇದುವರೆಗೆ ಕೂಟು ಹೊಳೆ, ಕುಂಡಾಮೇಸ್ತ್ರಿ, ರೋಷಾನರ ಹಾಗೂ ಕನ್ನಂಡಬಾಣೆಗಳಿಂದ ನೀರು ಪೂರೈಸಲಾಗುತಿತ್ತು. ಈಗ ರೋಷಾನರ ಮತ್ತು ಕೂಟು ಹೊಳೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ. 

ಹೀಗಾಗಿ ಉಳಿದ ಎರಡು ಕಡೆಗಳಿಂದ ಮಾತ್ರವೇ ನೀರು ಒದಗಿಸಲು ಅವಕಾಶ ಇರುವುದರಿಂದ ನಗರದ 23 ವರ್ಷಗಳಿಗೆ ನಿತ್ಯ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ಅನಗತ್ಯವಾಗಿ ನೀರು ದುರ್ಬಳಕೆ ಮಾಡಬೇಡಿ, ಕಟ್ಟಡ ನಿರ್ಮಾಣ, ಗಿಡಗಳಿಗೆ ನೀರು ಎತೇಚ್ಚವಾಗಿ ನೀರು ಬಳಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದೆ. 

ಸದ್ಯ ಕುಂಡಾಮೇಸ್ತ್ರಿ ಯೋಜನೆಯಿಂದ ನೀರನ್ನು ಕೂಟು ಹೊಳೆಗೆ ಲಿಫ್ಟ್ ಮಾಡಿ ಅಲ್ಲಿಂದ ನೀರು ಒದಿಸುತಿದ್ದೇವೆ. ಕುಂಡಾಮೇಸ್ತ್ರಿಯಲ್ಲಿರುವ ನೀರನ್ನು ಇನ್ನು ಒಂದು ತಿಂಗಳ ವರೆಗೆ ಬಳಸಬೇಕೆಂದರೆ ಒಂದು ದಿನ ಬಿಟ್ಟು ಒಂದು ದಿನ ನೀರು ಪೂರೈಸುವುದು ಅನಿವಾರ್ಯ ಎಂದು ನಗರಸಭೆ ಆಯುಕ್ತ ವಿಜಯ್ ಹೇಳಿದ್ದಾರೆ. 

ವಿಪರ್ಯಾಸವೆಂದರೆ ಕುಂಡಾಮೇಸ್ತ್ರಿ ಯೋಜನೆಯ ಮೂಲಕ ನಗರಕ್ಕೆ ದಿನದ 24 ಗಂಟೆಯೂ ನೀರು ಒದಗಿಸಬೇಕು ಎನ್ನುವುದು ನಗರದ ಜನತೆಯ ಹಲವು ದಶಕಗಳ ಬೇಡಿಕೆ. ಆ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಜನಪ್ರತಿನಿಧಿಗಳು ಕೋಟ್ಯಂತರ ರೂಪಾಯಿ ವ್ಯಯಿಸಿ ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಆದರೆ ಅದಷ್ಟು ಮಾಡಿರುವುದು ಬಿಟ್ಟರೆ ಪೈಪ್ ಲೈನ್ ಮಾಡುವುದಾಗಲಿ, ಮೀಟರ್ ಅಳವಡಿಸುವುದು ಸೇರಿದಂತೆ ಬೇರೆ ಯಾವ  ಕೆಲಸಗಳು ಆಗಿಲ್ಲ. ಹೀಗಾಗಿ ಆ ಯೋಜನೆ ಇಂದಿಗೂ ಜನರಿಗೆ ಉಪಯೋಗಕ್ಕೆ ಬಾರದೆ ಕನಸ್ಸಾಗಿಯೇ ಉಳಿದಿದೆ. ದಿನ ಬಿಟ್ಟು ನೀರು ಪೂರೈಸುತ್ತೇವೆ ಸಹಕರಿಸಿ ಎನ್ನುವ ನಗರಸಭೆಯ ಮನವಿಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ. 

ದಿನ ಒಂದು ಗಂಟೆ ಮಾತ್ರವೇ ಅವರು ನೀರು ಪೂರೈಸುವುದು. ಅದು ಕೂಡ ವಾರದಲ್ಲಿ ಮೂರು ದಿನ ಎಂದರೆ ಹೇಗೆ. ಸಾಮಾನ್ಯ ಜನರು ಮೂರರಿಂದ ನಾಲ್ಕು ಸಾವಿರ ಕೊಟ್ಟು ಒಂದು ಟ್ಯಾಂಕ್ ಖರೀದಿಸಿ ಬದುಕಲು ಸಾಧ್ಯವೇ ಎಂದು ವಕೀಲ ಹಾಗೂ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ವಪನ್ ಪೆಮ್ಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist