ಕೊಡಗಿನಲ್ಲಿ ವನ್ಯಮೃಗಗಳ ದಾಳಿಗೆ ಇನ್ನೆಷ್ಟು ಜನರ ಬಲಿಬೇಕು? ವೈಜ್ಞಾನಿಕ ತಳಹದಿಯ ಮೇಲೆ ನಾವು ಯಾಕೆ ಯೋಜನೆ ರೂಪಿಸಿಲ್ಲ? ಎಂದು ಪ್ರಶ್ನಿಸಿದ ಡಾ. ಮಂತರ್ ಗೌಡ
ಮಡಿಕೇರಿ: ಕಳೆದ ಒಂದು ವರ್ಷದಿಂದ ವನ್ಯಜೀವಿ ದಾಳಿಗೆ ಕೊಡಗಿನಲ್ಲಿ ಹಲವಾರು ಮಂದಿ ಬಲಿಯಾಗಿದ್ದಾರೆ. ನಿನ್ನೆಯ ದಿವಸ ಪೊನ್ನಪೇಟೆಯಲ್ಲಿ ಜರುಗಿದ ಘಟನೆ ಹೃದಯವಿದ್ರಾವಕ ಎಂದು ಕೊಡಗಿನ ಕಾಂಗ್ರೆಸ್ ನ ಯುವ ನಾಯಕ ಡಾ. ಮಂತರ್ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
ರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ವನ್ಯ ಜೀವಿಗಳ ದಾಳಿಗೆ 28 ಪ್ರಕರಣಗಳು ವರದಿಯಾಗಿವೆ. ಕೊಡಗಿನಲ್ಲಿ ಅನೇಕ ಪ್ರಕರಣಗಳು ನಡೆದಿವೆ. ಸರ್ಕಾರ ವೈಜ್ಞಾನಿಕ ತಳಹದಿಯ ಮೇಲೆ ಅಭ್ಯಾಸ ನಡೆಸಿ ಯೋಜನೆ ಯಾಕೆ ರೂಪಿಸಿಲ್ಲ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸರಿಯಾದ ಯೋಜನೆ ಇಲ್ಲದಿದ್ದರೆ ಇದನ್ನು ತಡೆಗಟ್ಟುವುದು ಹೇಗೆ? ಇನ್ನೆಷ್ಟು ಅಮಾಯಕರು ಇದಕ್ಕೆ ಬಲಿಬೀಳಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರತ್ಯೇಕ ಅನುದಾನವನ್ನು ಮೀಸಲಿಸಿ, ಇದರ ಬಗ್ಗೆ ಸಂಶೋಧನೆ ನಡೆಸಿ ತಡೆಗಟ್ಟುವ ಕ್ರಮಗಳ ಬಗ್ಗೆ ಯೋಜನೆ ರೂಪಿಸದಿದ್ದರೆ ಇದನ್ನು ಭವಿಷ್ಯದಲ್ಲಿ ತಡೆಗಟ್ಟಲು ಸಾಧ್ಯವಿಲ್ಲ ಎಂದು ಡಾ. ಮಂತರ್ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಒಂದೇ ದಿನ ಮೂರು ಜನರು ಮೃತಪಟ್ಟಿರುವುದು ನನಗೆ ಬಹಳಷ್ಟು ದುಃಖ ತಂದಿದೆ ಎಂದು ಡಾ. ಮಂತರ್ ಗೌಡ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ. ವನ್ಯಜೀವಿಯಿಂದ ರೈತರ ಬೆಳೆ, ಸಾವು ನೋವುಗಳು ಸಂಭವಿಸುತ್ತಿರುವುದು ಬಹಳಷ್ಟು ಗಂಭೀರದ ವಿಷಯ . ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಡಾ. ಮಂತರ್ ಗೌಡ ಟ್ವೀಟ್ ಮಾಡಿ ಸರ್ಕಾರವನ್ನು ಎಚ್ಚರಿಸಿದ್ದಾರೆ.