ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೊಡಗಿನಲ್ಲಿ ಡಾ. ಮಂತರ್ ಗೌಡ ತುರ್ತು ಸ್ಪಂದನೆಯ ಕಾರ್ಯ ಶೈಲಿ. ಚೆಟ್ಟಳ್ಳಿ-ಮಡಿಕೇರಿ ಭೂಕುಸಿತ ಪ್ರದೇಶಕ್ಕೆ ಶಾಸಕ ಡಾ.ಮಂತರ್ ಗೌಡ ಬೇಟಿ.

Twitter
Facebook
LinkedIn
WhatsApp
ಶಾಸಕ ಡಾ.ಮಂತರ್ ಗೌಡ mla dr. manthar gowda

ಚೆಟ್ಟಳ್ಳಿ: ಮಳೆಗಾಳಿಯ ಹಿನ್ನೆಲೆ ಚೆಟ್ಟಳ್ಳಿ- ಮಡಿಕೇರಿಯ ಮುಖ್ಯರಸ್ರೆಯಲ್ಲಿ ಭೂಕುಸಿತ ಪ್ರದೇಶಕ್ಕೆ ಮಡಿಕೇರಿ‌ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡರವರು ಬೇಟಿನೀಡಿ ಭೂಕುಸಿತದ ಮಣ್ಣನ್ನು ಅತೀಶೀಘ್ರದಲ್ಲಿ ತೆರವುಗೊಳಿಸಿ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಆದೇಶಿಸಿದರು.

ಶಾಸಕ ಡಾ.ಮಂತರ್ ಗೌಡ mla dr. manthar gowda

ಚೆಟ್ಟಳ್ಳಿ- ಮಡಿಕೇರಿ ಮುಖ್ಯರಸ್ತೆ ಅಪಾಯದಿಂದ ಕೂಡಿದೆ ಅಪಾಯ ಕಾರಿಯಾಗಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಸ್ಥಳೀಯರು ಹಾಗು ವಕೀಲರಾದ ಕಾಡೇಮಾಡ ವಿನ್ಸಿ ಅಪ್ಪಯ್ಯನವರು ಶಾಸಕರಿಗೆ ತಿಳಿಸಿದರು.

ಶಾಸಕ ಡಾ.ಮಂತರ್ ಗೌಡ mla dr. manthar gowda

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ಸುನಿತ‌ ಮಂಜುನಾಥ್,ಚೆಟ್ಟಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸಿಂದು, ಗ್ರಾಮಪಂಚಾಯಿತಿ ಸದಸ್ಯ ತೀರ್ಥಕುಮಾರ್, ಕಾಂಗ್ರೇಸ್ ವಲಯ ಅಧ್ಯಕ್ಷ ಮೋಹಮದ್ ರಫಿ, ಕಾರ್ಯದರ್ಶಿ ಜುಬೇರ್ ಮತೀತರರು ಹಾಜರಿದ್ದರು.

ನೆರೆಯ ಪರಿಸ್ಥಿತಿ ನಿರ್ವಹಿಸಲು
ಮಧ್ಯರಾತ್ರಿಯಲ್ಲೇ ಕಾರ್ಯಾಚರಣೆಗೆ ಇಳಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ.

ಮಡಿಕೇರಿ:ವಿಧಾನಮಂಡಲ ಅಧಿವೇಶನ ಮುಗಿಸಿದ ಕೂಡಲೇ ಮಡಿಕೇರಿ ಕ್ಷ ಶಾಸಕ ಡಾಕ್ಟರ್ ಮಂತ್ರ ಗೌಡ ನೇರವಾಗಿ ಕುಶಾಲನಗರ ಪುರಸಭೆ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಹಾಗೂ ಸಂತ್ರಸ್ತರ ಜೊತೆಯಲ್ಲಿ ಚರ್ಚಿಸಿ ಅವರುಗಳಿಗೆ ಧೈರ್ಯ ತುಂಬಿದರು.

ಕುಶಾಲನಗರದ ಸಾಯಿ ಬಡಾವಣಿಗೆ ಮಧ್ಯರಾತ್ರಿಯಲ್ಲಿ ನೆರೆ ಪರಿಸ್ಥಿತಿಯನ್ನು ವೀಕ್ಷಿಸಲು ಅವರ ಆಗಮಿಸಿದ್ದು, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಅವರಿಗೆ ಅತ್ಯಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಹಾಗೂ ತಾತ್ಕಾಲಿಕವಾಗಿ ವಾಸಿಸಲು ಬೇಕಾದ ವ್ಯೆವಸ್ಥೆ, ಆಹಾರ ಪದಾರ್ಥಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡದ ಖ್ಯಾತ ಕಿರುತೆರೆ ನಿರ್ದೇಶಕ ವಿನೋದ್ ನೇಣಿಗೆ ಶರಣು

ಕರಿಮಣಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರೋ ಕನ್ನಡದ ಹೆಸರಾಂತ ಕಿರುತೆರೆ ನಿರ್ದೇಶಕ ವಿನೋದ್ ದೊಂಡಾಲೆ (Vinod Dondale) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ʻಕರಿಮಣಿʼ, ʻಶಾಂತಂ ಪಾಪಂʼ ಸೇರಿದಂತೆ ಹಲವು ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದರು.

ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದ ಇವರು ಸದ್ಯ ನಿನಾಸಮ್ ಸತೀಶ್ ನಟನೆಯ ʻಅಶೋಕ ಬ್ಲೇಡ್ʼ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈಗಾಗಲೇ ಸಿನಿಮಾ ಶೇಕಡಾ 90ರಷ್ಟು ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೂ ವಿನೋದ್ ಸಿದ್ಧತೆ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಶೂಟಿಂಗ್ ಕುರಿತಂತೆ ನೀನಾಸಂ ಸತೀಶ್ ಜೊತೆ ಚರ್ಚೆ ಮಾಡಿದ್ದರು.

ನಗರಬಾವಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಹಿರಿಯ ನಿರ್ದೇಶಕ ಜೊತೆಯೂ ಕೆಲಸ ಮಾಡಿದ್ದ ವಿನೋದ್ ಅತಿಥಿ,ಬೇರು,ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಕೆಲ ಮೂಲಗಳ ಪ್ರಕಾರ, ವಿನೋದ್ ಅವರು ಸಿನಿಮಾ ಹಾಗೂ ವೈಯಕ್ತಿಕ ಜೀವನ ನಿರ್ವಹಣೆಗೆ ಹಲವರಿಂದ ಸಾಲಗಳನ್ನು ಮಾಡಿಕೊಂಡಿದ್ದರಂತೆ. ಈಗ ಸಾಲ ತೀರಿಸಲು ಆಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಿನೋದ್, ಖ್ಯಾತ ನಿರ್ದೇಶಕ ಪಿ ಶೇಷಾದ್ರಿ ಹಾಗೂ ಟಿಎನ್ ಸೀತಾರಾಮ್ ಗರಡಿಯಲ್ಲಿ ಪಳಗಿದ್ದ ನಿರ್ದೇಶಕ. ಈ ಇಬ್ಬರಿಗೂ ಸಹ ಸಹಾಯಕ ನಿರ್ದೇಶಕನಾಗಿ ವಿನೋದ್ ಕೆಲಸ ಮಾಡಿದ್ದರು. ಸಿನಿಮಾ ಮಾತ್ರವೇ ಅಲ್ಲದೆ ಕಿರುತೆರೆಯಲ್ಲಿಯೂ ವಿನೋದ್ ಕೆಲಸ ಮಾಡಿದ್ದು ‘ಕರಿಮಣಿ’ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದರು. ವಿನೋದ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ನಿರ್ದೇಶಕ ಪಿ ಶೇಷಾದ್ರಿ, ‘ಒಂದು ಮಾತಾದರೂ ಹೇಳಬಾರದಿತ್ತೆ? ನಿನಗೆ ನನ್ನ ನೆನಪಾದರೂ ಬರಲಿಲ್ಲ ಏಕೆ?, ಹೆಂಡತಿ, ಮಕ್ಕಳ ಮುಖವೂ ಕಣ್ಣ ಮುಂದೆ ಬರಲಿಲ್ಲವೇ, ತಪ್ಪು ಮಾಡಿಬಿಟ್ಟೆ ನೀನು ಅಲ್ಲಾದರೂ ನೆಮ್ಮದಿಯಾಗಿರು’ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ