ಕೈಕೊಟ್ಟ ಅದೃಷ್ಟ: ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಔಟ್?

ಬಿಗ್ ಬಾಸ್ (Bigg Boss Kannada) ಸೀಸನ್ 8ರಲ್ಲಿ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ (Divya Uruduga) ಈ ಬಾರಿ ಸೀಸನ್ 9ಕ್ಕೂ ಕಾಲಿಟ್ಟಿದ್ದರು. ಆದರೆ ಇದೀಗ ಅವರ ಲಕ್ ಮತ್ತೆ ಕೈ ಕೊಟ್ಟಿದೆ. ಬಿಗ್ ಬಾಸ್ ಆಟದಿಂದ ದಿವ್ಯಾ ಉರುಡುಗ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 9 (Bigg Boss Kannada 9) ಈ ಬಾರಿ ಭಿನ್ನವಾಗಿತ್ತು. ಪ್ರವೀಣರು ಮತ್ತು ನವೀನರು ಎಂಬ ಯೋಜನೆಯ ಅಡಿ ಬಿಗ್ ಬಾಸ್ ಶೋ ಮೂಡಿ ಬಂದಿತ್ತು. ಪ್ರವೀಣರ ಪೈಕಿಯಲ್ಲಿ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ ಈ ಬಾರಿ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದರು. ಐದು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ದಿವ್ಯಾ ಗಟ್ಟಿ ಪೈಪೋಟಿ ನೀಡಿದ್ದರು. ಈಗ ದಿವ್ಯಾ ಉರುಡುಗ ಐದನೇ ಸ್ಥಾನದಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಕಳೆದ ಸೀಸನ್‌ನಲ್ಲಿ ಅರವಿಂದ್ ಕೆ.ಪಿ (Aravind Kp) ಜೊತೆ ದಿವ್ಯಾ ಹೈಲೈಟ್ ಆಗಿದ್ದರು. ಹಾಗೆಯೇ ಸೀಸನ್ 9ರಲ್ಲಿ ಒಂಟಿಯಾಗಿ ಆಟ ಆಡಿ ಮತ್ತೊಮ್ಮೆ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೂ ಈ ಬಾರಿ ಕೂಡ ದಿವ್ಯಾ ಅದೃಷ್ಟ ಕೈ ಕೊಟ್ಟಿದೆ. ಬಿಗ್ ಬಾಸ್ ಮನೆಯ ಆಟ ದಿವ್ಯಾ ಅವರಿಗೆ ಅಂತ್ಯವಾಗಿದೆ.
ಡಿಸೆಂಬರ್ 30 ಮತ್ತು 31ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ದಿವ್ಯಾ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಯಾರಿಗೆ ಸಿಗಲಿದೆ ಬಿಗ್ ಬಾಸ್ ಪಟ್ಟ ಎಂದು ಕಾದುನೋಡಬೇಕಿದೆ.